ನವದೆಹಲಿ: ಬಿಸಿಸಿಐ ಅಧಿಕಾರವಧಿ ಸಂಬಂಧಿಸಿದ ಪ್ರಕರಣವನ್ನು ಭಾರತದ ಸುಪ್ರೀಂಕೋರ್ಟ್ ಗುರುವಾರ ಮುಂದೂಡಿದೆ. ಎರಡು ವಾರಗಳ ನಂತರ ಭಾರತ ಕ್ರಿಕೆಟ್ ಮಂಡಳಿಯ ಉನ್ನತ ಪದಾಧಿಕಾರಿಗಳಾದ ಸೌರವ್ ಗಂಗೂಲಿ ಮತ್ತು ಜಯ್ ಶಾ ಅವರನ್ನು ಹೆಚ್ಚಿನ ವಿಚಾರಣೆ ನಡೆಸಲಿದೆ.
ಬಿಸಿಸಿಐ ಸಂವಿಧಾನದ ನಿಯಮಗಳ ಪ್ರಕಾರ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ, ಖಜಾಂಚಿ, ಜಂಟಿ ಕಾರ್ಯದರ್ಶಿ ಒಮ್ಮೆ 6 ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಬೋರ್ಡ್ಗಳಲ್ಲಿ ಕಾರ್ಯನಿರ್ವಹಿಸಿದರೆ, ಮತ್ತೆ 3 ವರ್ಷಗಳ ಕಾಲ ಬಿಸಿಸಿಐನಲ್ಲಿ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸುವುದಕ್ಕೆ ಅನುಮತಿಯಿಲ್ಲ.
ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರಾವಧಿ 2020ರ ಮಧ್ಯದಲ್ಲೇ ಮುಗಿದಿದೆ. ಆದರೆ, ಇವರಿಬ್ಬರೆ 2025ರ ತನಕ ವಿಸ್ತರಣೆ ಮಾಡಬೇಕೆಂದು ಬಿಸಿಸಿಐ ಅರ್ಜಿ ಸಲ್ಲಿಸಿತ್ತು. ಆದರೆ, ಇದುವರೆಗೆ ಸುಪ್ರೀಂಕೋರ್ಟ್ ಈ ವಿಚಾರವನ್ನು ನಡೆಸಲು ಸಾಧ್ಯವಾಗದ ಕಾರಣ ಇವರಿಬ್ಬರು ಬಿಸಿಸಿಐನಲ್ಲಿ ತಮ್ಮ ಗೌರವಾನ್ವಿತ ಹುದ್ದೆಯಲ್ಲಿ ಮುಂದುವರೆದಿದ್ದರು.