ನವದೆಹಲಿ:ಟಿ20 ಮಾದರಿಯಲ್ಲಿ ಪ್ರತೀ ದೇಶದಲ್ಲಿ ಲೀಗ್ಗಳು ಹೆಚ್ಚಿನ ಮಹತ್ವವನ್ನು ಪಡೆಯುತ್ತಿದೆ. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಅತಿ ಹೆಚ್ಚಿನ ಬೇಡಿಕೆ ಇದೆ. ಎಲ್ಲ ದೇಶಗಳು ಲೀಗ್ ಕ್ರಿಕೆಟ್ನ್ನು ನಡೆಸುತ್ತಿದ್ದರೂ ಐಪಿಎಲ್ಗೆ ಇರುವ ಬೇಡಿಕೆ ಹಾಗೂ ಖ್ಯಾತಿ ಕಡಿಮೆ ಆಗಿಲ್ಲ. ಇದಕ್ಕೆ ಇನ್ನೊಂದು ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಸೌದಿ ಅರೇಬಿಯಾ 30 ಶತಕೋಟಿ ಡಾಲರ್ ಪಾಲನ್ನು ಖರೀದಿಸಲು ಆಸಕ್ತಿಯನ್ನು ವ್ಯಕ್ತಪಡಿಸಿದೆ. ಈ ಬಗ್ಗೆ ಮಾಧ್ಯಮ ಒಂದು ವರದಿ ಮಾಡಿದೆ. ಇದು ನಿಜ ಆದಲ್ಲಿ ಬಿಸಿಸಿಐನ ಶ್ರೀಮಂತಿಕೆ ಇನ್ನಷ್ಟು ಹೆಚ್ಚಲಿದೆ.
ಫುಟ್‌ಬಾಲ್ ಮತ್ತು ಗಾಲ್ಫ್ ರೀತಿಯ ಕ್ರೀಡೆಗಳಿಗೆ ಹೆಚ್ಚು ಮಹತ್ವ ನೀಡುವ ಅರಬ್ ದೇಶ ಈಗ ಕ್ರಿಕೆಟ್ನತ್ತ ಮುಖ ಮಾಡಿದೆ. ಐಪಿಎಲ್ನ ಖ್ಯಾತಿ ಮತ್ತು ವಿಶ್ವದಾದ್ಯಂತ ಅದಕ್ಕಿರುವ ಅಭಿಮಾನಿಗಳನ್ನು ಪರಿಗಣಿಸಿ ಬಹುಕೋಟಿ ಡಾಲರ್ ಪಾಲನ್ನು ಖರೀದಿಸಲು ಸೌದಿ ಅರೇಬಿಯಾ ಆಸಕ್ತಿ ವ್ಯಕ್ತಪಡಿಸಿದೆ. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಸಲಹೆಗಾರರು ಐಪಿಎಲ್ ಅನ್ನು 30 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಬದಲಾಯಿಸುವ ಬಗ್ಗೆ ಭಾರತೀಯ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಗಾಗಿ ಸೌದಿ ಕ್ರೌನ್ ಪ್ರಿನ್ಸ್ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಮಾತುಕತೆ ನಡೆಸಲಾಗಿದೆ. ಸೌದಿ ಅರೇಬಿಯಾ ಲೀಗ್‌ಗೆ 5 ಶತಕೋಟಿಯಷ್ಟು ಹೂಡಿಕೆ ಮಾಡಲು ಪ್ರಸ್ತಾಪಿಸಿದೆ ಮತ್ತು ಇತರ ದೇಶಗಳಿಗೆ ವಿಸ್ತರಣೆಗೆ ಸಹಾಯ ಮಾಡುತ್ತದೆ ಎನ್ನಲಾಗಿದೆ. ಐಪಿಎಲ್ ಮೌಲ್ಯವು ರೂ 87,000 ಕೋಟಿಯಿಂದ ರೂ 92,500 ಕೋಟಿಗೆ ಏರಿದೆ. ಇದು ಆರಂಭದಿಂದ ಸುಮಾರು ಶೇಕಡ 6.3 ರಷ್ಟು ಹೆಚ್ಚಳ ಕಂಡಿದೆ.