ನವದೆಹಲಿ :ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವೆ ಕಾನ್ಪುರ್ದ ಗ್ರೀನ್ ಪಾರ್ಕ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಇದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ನ ಹಿರಿಯ ಮುಖಂಡ ಶಶಿ ತರೂರ್ ಕಿವೀಸ್ ಆಟಗಾರರನ್ನ ಕೊಂಡಾಡಿದ್ದಾರೆ.
ಟ್ವಿಟರ್ನಲ್ಲಿ ಈ ವಿಷಯ ಬರೆದುಕೊಂಡಿರುವ ಶಶಿ ತರೂರ್, ಭಾರತ ವಿರುದ್ಧದ ಟೆಸ್ಟ್ ಪಂದ್ಯ ಉಳಿಸಿಕೊಳ್ಳಲು ಕೊನೆಯ 9 ಓವರ್ಗಳವರೆಗೆ ನಮ್ಮ ಬೌಲರ್ಗಳಿಗೆ ಪ್ರತಿರೋಧವೊಡ್ಡಿದ ಭಾರತ ಮೂಲದ ಇಬ್ಬರು ನ್ಯೂಜಿಲ್ಯಾಂಡ್ ಆಟಗಾರರಾದ ರಚಿನ್ ರವೀಂದ್ರ ಹಾಗೂ ಅಜಾಜ್ ಪಟೇಲ್ಗೆ ಹ್ಯಾಟ್ಸ್ಆಫ್.
ನೈಟ್ ವಾಚ್ಮ್ಯಾನ್ ಆಗಿ ಬಂದಿದ್ದ ವಿಲ್ ಸೋಮ್ರ್ವಿಲೆ ಕೂಡ 110 ಎಸೆತ ಎದುರಿಸಿರುವುದು ಇಲ್ಲಿ ಪ್ರಮುಖವಾಗಿತ್ತು. ಮುಂಬೈ ಟೆಸ್ಟ್ಗಾಗಿ ಟೀಂ ಇಂಡಿಯಾ ಕೆಲವೊಂದು ಬದಲಾವಣೆ ಮಾಡುವುದು ಅಗತ್ಯವಾಗಿದೆ ಎಂದಿದ್ದಾರೆ.