ಕರ್ನಾಟಕ

karnataka

ETV Bharat / sports

"ಪೃಥ್ವಿ ಶಾ ಅನುಚಿತವಾಗಿ ವರ್ತಿಸಿದ್ದಾರೆ": ಸಪ್ನಾ ಗಿಲ್ ಆರೋಪ - ಸಪ್ನಾ ವಕೀಲ ಅಲಿ ಕಾಶಿಫ್ ಖಾನ್

ಜಾಮೀನು ಪಡೆದು ಹೊರ ಬಂದಿರುವ ಸಪ್ನಾ ಗಿಲ್ - ಪೃಥ್ವಿ ಶಾ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪ - ಪೊಲೀಸ್​ ಠಾಣೆಯಲ್ಲಿ ಪೃಥ್ವಿ ಶಾ ವಿರುದ್ಧ ದೂರು

Sapna Gill
ಸಪ್ನಾ ಗಿಲ್ ಆರೋಪ

By

Published : Mar 1, 2023, 5:32 PM IST

ಮುಂಬೈ:ಇತ್ತೀಚೆಗೆ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಸಾಮಾಜಿಕ ಜಾತಾಣಗಳಲ್ಲಿ ಗುರುತಿಸಿಕೊಂಡಿರುವ ನಟಿ ಸಪ್ನಾ ಗಿಲ್ ನಡುವೆ ಸೆಲ್ಫಿ ವಿಚಾರವಾಗಿ ಹೋಟೆಲ್​ ಎದುರು ಗಲಾಟೆ ನಡೆದಿತ್ತು. ಈ ಸಂಬಂಧ ಭೋಜ್‌ಪುರಿ ನಟಿ ಮತ್ತು ಸಪ್ನಾ ಗಿಲ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಸಿಕ್ಕ ತಕ್ಷಣ 'ಘಟನೆಯ ದಿನ ಕ್ರಿಕೆಟಿಗ ತನ್ನ ಮೇಲೆ ಹಲ್ಲೆ ನಡೆಸಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ' ದೂರು ದಾಖಲಿಸಿದ್ದಾರೆ.

ಫೆಬ್ರವರಿ 20 ರಂದು ಪೃಥ್ವಿ ಶಾ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ನಟಿ ಸಪ್ನಾ ಗಿಲ್ ದೂರು ದಾಖಲಿಸಿದ್ದಾರೆ. ಅದೇ ದಿನ ಸಪ್ನಾ ಗಿಲ್ ಅವರನ್ನು ಬಂಧಿಸಲಾಗಿತ್ತು. ಜಾಮೀನು ಪಡೆದು ಹೊರ ಬಂದ ಅವರು ದೂರು ದಾಖಲಿಸಿದ್ದಾರೆ. ಫೆಬ್ರವರಿ 24 ರಂದು ನಟಿ ಸಪ್ನಾ ಗಿಲ್ ಪೊಲೀಸರಿಂದ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆ ಹೇಳಿಕೆ ಆಧಾರದಲ್ಲಿ ಶಾ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ಫೆಬ್ರವರಿ 15 ರಂದು ಹೋಟೆಲ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಕ್ರಿಕೆಟಿಗ ಮತ್ತು ಅವರ ಸ್ನೇಹಿತರ ಗುಂಪು ತನಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಗಿಲ್ ಪೊಲೀಸರಿಗೆ ನೀಡಿದ ಎರಡು ಪುಟಗಳ ದೂರಿನಲ್ಲಿ ಆರೋಪಿಸಿದ್ದಾರೆ. ಆ ಸಮಯದಲ್ಲಿ ಶಾ ಮತ್ತು ಅವರ ಸ್ನೇಹಿತರು ಮದ್ಯದ ಅಮಲಿನಲ್ಲಿದ್ದರು. ಈಗ ವಿಮಾನ ನಿಲ್ದಾಣದ ಪೊಲೀಸ್ ಅಧಿಕಾರಿಗಳು ನನ್ನ ಕಕ್ಷಿದಾರನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ, ಆದರೆ, ಅವರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ ಎಂದು ಸಪ್ನಾ ವಕೀಲ ಅಲಿ ಕಾಶಿಫ್ ಖಾನ್ ಹೇಳಿದ್ದಾರೆ.

ಪೃಥ್ವಿ ವಿರುದ್ಧ ಹೋಗದಂತೆ ಹಲವು ಮಾಧ್ಯಮಗಳ ಮೂಲಕ ಗಿಲ್ ಮೇಲೆ ಒತ್ತಡ ಹೇರಲಾಗುತ್ತಿದೆ. ಇದು ಮುಂದುವರಿದರೆ ಮತ್ತು ಎಫ್‌ಐಆರ್ ದಾಖಲಿಸಲು ವಿಳಂಬವಾದರೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 166 ಎ (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅವಿಧೇಯತೆ) ಅಡಿಯಲ್ಲಿ ಪೊಲೀಸರ ವಿರುದ್ಧ ಮುಂದುವರಿಯಲು ನಾವು ಒತ್ತಾಯಿಸುತ್ತೇವೆ ಎಂದು ವಕೀಲರು ತಿಳಿಸಿದ್ದಾರೆ.

ಇದನ್ನೂ ಓದಿ:ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ: ನಾಲ್ಕನೇ ಆರೋಪಿ ಬಂಧಿಸಿದ ಪೊಲೀಸರು

ಫೆಬ್ರವರಿ 15 ರಂದು ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಕ್ರಿಕೆಟಿಗ ಸೆಲ್ಫಿಗೆ ಪೋಸ್ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಗಿಲ್ ಮತ್ತು ಆತನ ಸ್ನೇಹಿತ ಶೋಭಿತ್ ಠಾಕೂರ್ ಜಗಳವಾಡಿದ್ದರು. ಪೃಥ್ವಿ ಶಾ ಸ್ನೇಹಿತನೊಂದಿಗೆ ಹೋಟೆಲ್‌ಗೆ ಹೋಗಿ ಹೊರಗೆ ಬಂದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಪೃಥ್ವಿ ಶಾ ವಿರುದ್ಧ ಸಪ್ನಾ ಗಿಲ್ ಕಿರುಕುಳದ ಆರೋಪ ಮಾಡಿದ್ದಾರೆ. ಪೃಥ್ವಿ ಶಾ ಹೊರತುಪಡಿಸಿ ಆಶಿಶ್ ಸುರೇಂದ್ರ ಯಾದವ್, ಬ್ರಿಜೇಶ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ. ವಕೀಲ ಅಲಿ ಕಾಶಿಫ್ ದೇಶಮುಖ್ ಅವರ ಪ್ರಕಾರ, ಸಪ್ನಾ ಗಿಲ್ ಅವರು ಐಪಿಸಿಯ ಸೆಕ್ಷನ್ 34, 120 ಬಿ, 144, 146, 148, 149, 323, 324, 351, 354, 509 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ಸೆಲ್ಫಿ ವಿವಾದ: ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಎಫ್‌ಐಆರ್ ದಾಖಲಿಸಲು ಸ್ಪಪ್ನಾ ಗಿಲ್​​​​​ ಅರ್ಜಿ

ABOUT THE AUTHOR

...view details