ಕ್ರಿಕೆಟ್ನಲ್ಲಿ ಅದ್ಭುತ ಕೌಶಲ್ಯ ಹೊಂದಿರುವ ಯುವ ಪ್ರತಿಭೆ ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಅವಕಾಶ ಸಿಕ್ಕರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಈ ನಡುವೆ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗುವ ಮೂಲಕ ಬಾಲ್ಯದ ಕನಸಿನ್ನು ಈಡೇರಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ, ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ತಮಿಳ್ ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನು ನಿನ್ನೆ ಭೇಟಿಯಾಗಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಕ್ರಿಕೆಟಿಗ ನನ್ನ ಬಹು ದಿನಗಳ ಆಸೆ ಈಡೇರಿದೆ, 7 ವರ್ಷದವನಾಗಿದ್ದಾಗ ಕಂಡಿದ್ದ ಕನಸು ಇಂದು ಈಡೇರಿದೆ ಎಂದಿದ್ದಾರೆ . 21 ವರ್ಷ ಕಾದು ಕನಸನ್ನು ನನಸಾಗಿಸಿಕೊಂಡ ಸಂತೋಷವನ್ನು ಹಂಚಿಕೊಂಡಿದ್ದಾರೆ.
7 ವರ್ಷ ಇದ್ದಾಗ ಸಂಜು ಸ್ಯಾಮ್ಸನ್ ಪೋಷಕರಲ್ಲಿ ತಾನು ತಲೈವಾ ರಜಿನಿಕಾಂತ್ರನ್ನು ಭೇಟಿಯಾಗುವುದಾಗಿ ಹೇಳಿಕೊಂಡಿದ್ದರಂತೆ. ಆದರೆ, ಆಗ ಸಣ್ಣ ಮಕ್ಕಳ ಮಾತಿನಂತೆ ಪೋಷಕರು ಭಾವಿಸಿದ್ದರು. ಈಗ ಸಂಜು ಪೊಷಕರಿಗೆ ಹೇಳಿದ ರೀತಿಯಲ್ಲೇ ತಮ್ಮ ಮಾತನ್ನು ಸಾಧಿಸಿದ್ದಾರೆ. ರಜಿನಿಕಾಂತ್ ಅವರನ್ನು ಅವರ ಮನೆಯಲ್ಲಿಯೇ ಭೇಟಿಯಾಗಿದ್ದಾರೆ. ಟ್ವಿಟರ್‌ನಲ್ಲಿ ಸಂಜು ಸ್ಯಾಮ್ಸನ್ "7 ನೇ ವಯಸ್ಸಿನಲ್ಲಿ ಈಗಾಗಲೇ ಸೂಪರ್ ರಜನಿ ಅಭಿಮಾನಿ,, ನಾನು ನನ್ನ ಪೋಷಕರಿಗೆ ಹೇಳಿದೆ ..ನೋಡಿ ಒಂದು ದಿನ ನಾನು ಹೋಗಿ ರಜನಿ ಸರ್ ಅವರ ಮನೆಗೆ ಹೋಗುತ್ತೇನೆ... 21 ವರ್ಷಗಳ ನಂತರ ತಲೈವಾ ಅವರು ನನ್ನನ್ನು ಆಹ್ವಾನಿಸಿದರು. ಆ ದಿನ ಬಂದಿದೆ.." ಎಂದು ಬರೆದು ಕೊಂಡಿದ್ದಾರೆ.
ಸಂಜು ಸ್ಯಾಮ್ಸನ್ ಆಸೆ ತಿಳಿದ ತಲೈವ ತಮ್ಮ ಮನೆಗೆ ಬರುವಂತೆ ಆಹ್ವಾನ ಕಳುಹಿಸಿದ್ದಾರೆ. ಇದರೊಂದಿಗೆ ತಲೈವಾ ಕರೆ ಸ್ವೀಕರಿಸಿದಾಗ ಸಂಜು ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಏಕೆಂದರೆ ಅವರ 21 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ. ನಿನ್ನೆ (ಮಾರ್ಚ್ 12) ಚೆನ್ನೈನಲ್ಲಿರುವ ಸೂಪರ್ ಸ್ಟಾರ್ ನಿವಾಸಕ್ಕೆ ಭೇಟಿಕೊಟ್ಟಿದ್ದಾರೆ. ಅಲ್ಲಿ ರಜನಿ ಸ್ಯಾಮ್ಸನ್ ಅವರೊಂದಿಗೆ ಕೆಲಕಾಲ ಮಾತನಾಡಿ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸ್ವತಃ ಸಂಜು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.