ದುಬೈ:ಸಂಜು ಸಾಮ್ಸನ್(82) ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 164 ರನ್ಗಳಿಸಿದ್ದು, ನಿರ್ಣಾಯಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ಗೆ 165 ರನ್ಗಳ ಕಠಿಣ ಗುರಿ ನೀಡಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ರಾಯಲ್ಸ್ 2ನೇ ಓವರ್ನಲ್ಲೇ ಆಘಾತ ಅನುಭಿವಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಎವಿನ್ ಲೂಯಿಸ್ ಕೇವಲ 6 ರನ್ಗಳಿಸಿ ಭುವನೇಶ್ವರ್ಗೆ ವಿಕೆಟ್ ಒಪ್ಪಿಸಿದರು.
ಬಹುಬೇಗನೆ ತಮ್ಮ ಜೊತೆಗಾರನನ್ನು ಕಳೆದುಕೊಂಡರೂ ಧೃತಿಗೆಡದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಉತ್ತಮವಾಗಿ ಬ್ಯಾಟ್ ಬೀಸಿದರು. 23 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 36 ರನ್ಗಳಿಸಿದರು. ಸಾಮ್ಸನ್ ಜೊತೆ ಸೇರಿ 56 ರನ್ಗಳ ಜೊತೆಯಾಟ ನೀಡಿ ಮುನ್ನುಗ್ಗುತ್ತಿದ್ದ ಈ ಜೋಡಿಯನ್ನು ಸಂದೀಪ್ ಶರ್ಮಾ ಜೈಸ್ವಾಲ್ ವಿಕೆಟ್ ಪಡೆಯುವ ಮೂಲಕ ಬೇರ್ಪಡಿಸಿದರು.