ನವದೆಹಲಿ:ಏಷ್ಯಾಕಪ್, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮಿಂಚುವ ಮೂಲಕ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಮರಳಿ ಪಾರ್ಮ್ ಕಂಡುಕೊಂಡಿದ್ದಾರೆ. ಇದು ವಿಶ್ವಕಪ್ಗೂ ಮೊದಲು ಭಾರತ ತಂಡಕ್ಕೆ ಬಲ ಬಂದಂತಾಗಿದೆ. 3 ವರ್ಷಗಳ ಬಳಿಕ ಭರ್ಜರಿ ಶತಕ ಬಾರಿಸಿದ ಕೊಹ್ಲಿ, ಆಸೀಸ್ ವಿರುದ್ಧದ 3ನೇ ಪಂದ್ಯದಲ್ಲಿ ಗೆಲುವಿನ ಅರ್ಧಶತಕ ಸಿಡಿಸಿದ್ದರು. ಇದು ಟೀಕಾಕಾರರ ಬಾಯಿ ಮುಚ್ಚಿಸಿದೆ.
ಇಷ್ಟು ದಿನ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಿದ್ದ ವಿಮರ್ಶಕರು ಈಗ ವಿರಾಟ್ ರೂಪದ ಬಗ್ಗೆ ಮೆಚ್ಚುಗೆ ಮಾತನಾಡುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ವಿರಾಟ್ ಕಮ್ಬ್ಯಾಕ್ ಬ್ಯಾಟಿಂಗ್ ಅನ್ನು ಬಹುವಾಗಿ ಮೆಚ್ಚಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ "ಪವರ್ ಗೇಮ್" ಗೆ ಮರಳಿ ಪಡೆದಿದ್ದಾರೆ. ಟಿ-20 ವಿಶ್ವಕಪ್‌ಗೆ ಮುಂಚಿತವಾಗಿ ಅವರು ಫಾರ್ಮ್ಗೆ ಬಂದಿರುವುದು ಭಾರತಕ್ಕೆ ಪ್ಲಸ್ ಆಗಲಿದೆ. ಅವರು ಬೌಲ್ ಬೌಂಡರಿಗಟ್ಟುವ ಪರಿ ಹಳೆಯ ಆಟವನ್ನು ನೆನಪಿಸುತ್ತಿದೆ ಎಂದು ಹೊಗಳಿದ್ದಾರೆ.
ಏಷ್ಯಾ ಕಪ್‌ನಿಂದಲೇ ಕೊಹ್ಲಿ ರನ್ ಗಳಿಕೆ ಶುರು ಮಾಡಿದ್ದಾರೆ. ಪ್ರತಿ ಪಂದ್ಯದಿಂದಲೂ ರನ್‌ಗಳ ಜೊತೆಗೆ ಕೌಶಲ್ಯ ಪ್ರದರ್ಶಿಸುತ್ತಿದ್ದಾರೆ. ಪವರ್ ಗೇಮ್ ಹಿಂತಿರುಗಿದೆ. ಅವರ ಹಿಂದಿನ ಮತ್ತೆ ಮರಳಿ ಬರಲಿದೆ ಎಂದು ನಾನು ಅಂದುಕೊಂಡಿದ್ದೇನೆ. ಎಸೆತಗಳನ್ನು ಬೌಂಡರಿಯಾಚೆ ದಾಟಿಸುವ ಅವರ ಹೊಡೆತಗಳು ಮನಮೋಹಕ ಎಂದೆಲ್ಲಾ ಹೊಗಳಿದ್ದಾರೆ.
ಆತ್ಮವಿಶ್ವಾಸದ ಹೊಡೆತಗಳು ವಾಪಸ್:ವಿರಾಟ್ಕೊಹ್ಲಿ ದೊಡ್ಡ ಹೊಡೆತಗಳಿಗೆ ಕೈ ಹಾಕುತ್ತಿದ್ದಾರೆ. ಏಷ್ಯಾ ಕಪ್, ಆಸೀಸ್ ಸರಣಿಗಳಲ್ಲಿ ಅವರು ತೋರಿದ ಪ್ರದರ್ಶನ ಇದಕ್ಕೆ ಸಾಕ್ಷಿ. ಕಳೆದುಹೋಗಿದ್ದ ಆತ್ಮವಿಶ್ವಾಸವನ್ನು ಬ್ಯಾಟಿಂಗ್ ಕಿಂಗ್ ಮರಳಿ ಪಡೆದಿದ್ದಾರೆ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಏಷ್ಯಾ ಕಪ್‌ನ ಐದು ಇನ್ನಿಂಗ್ಸ್‌ಗಳಲ್ಲಿ 92.00 ಸರಾಸರಿಯಲ್ಲಿ 276 ರನ್ ಗಳಿಸಿದರು, ಇದರಲ್ಲಿ 2 ಅರ್ಧ ಶತಕ ಮತ್ತು 1 ಶತಕವಿದೆ. 147.59 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಅವರು, ಟೂರ್ನಿಯ 2ನೇ ಅತ್ಯಧಿಕ ರನ್ನರ್ ಆಗಿ ಹೊರಹೊಮ್ಮಿದ್ದರು. ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸದ ಕೊಹ್ಲಿ ಕೊನೆಯ ಪಂದ್ಯದಲ್ಲಿ ಜವಾಬ್ದಾರಿಯುತ ಆಟವಾಡಿ 63 ರನ್ ಗಳಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು.
ಓದಿ:ಹರಿಣಗಳ ವಿರುದ್ಧದ ಸರಣಿಗಿಲ್ಲ ಶಮಿ, ದೀಪಕ್ ಹೂಡಾ.. ಶ್ರೇಯಸ್ ಅಯ್ಯರ್ಗೆ ಬುಲಾವ್