ಕರ್ನಾಟಕ

karnataka

ಸ್ಯಾಂಡ್​ ಪೇಪರ್​ ಪ್ರಕರಣ: ಬ್ಯಾನ್​ಕ್ರಾಫ್ಟ್​ ಹೇಳಿಕೆ ಬೆನ್ನಲ್ಲೇ ಮರುತನಿಖೆಗೆ ಆದೇಶಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸ್ಯಾಂಡ್ ಪೇಪರ್ ಬಳಸಿ ಬಾಲ್​ ಟ್ಯಾಂಪರಿಂಗ್ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿ ಸ್ಮಿತ್​ ಮತ್ತು ವಾರ್ನರ್​ ಜೊತೆ ನಿಷೇದಕ್ಕೊಳಗಾಗಿದ್ದ ಕ್ಯಾಮರೂನ್ ಬ್ಯಾನ್​ಕ್ರಾಫ್ಟ್​ ಶನಿವಾರ ಸ್ಫೋಟಕ ಹೇಳಿಕೆ ನೀಡಿದ್ದರು. ಬಾಲ್​ ಟ್ಯಾಂಪರಿಂಗ್ ಮಾಡುವ ವಿಚಾರ ನಮ್ಮ ಬೌಲರ್​ಗಳಿಗೆ ಮೊದಲೇ ತಿಳಿದಿರಬಹುದು ಎಂದು ಹೇಳುವ ಮೂಲಕ ಕ್ರಿಕೆಟ್​ ಜಗತ್ತಿಗೆ ಶಾಕ್ ನೀಡಿದ್ದರು..

By

Published : May 16, 2021, 5:41 PM IST

Published : May 16, 2021, 5:41 PM IST

ETV Bharat / sports

ಸ್ಯಾಂಡ್​ ಪೇಪರ್​ ಪ್ರಕರಣ: ಬ್ಯಾನ್​ಕ್ರಾಫ್ಟ್​ ಹೇಳಿಕೆ ಬೆನ್ನಲ್ಲೇ ಮರುತನಿಖೆಗೆ ಆದೇಶಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ಬಾಲ್ ಟ್ಯಾಂಪರಿಂಗ್ ಪ್ರಕರಣ
ಬ್ಯಾನ್​ ಕ್ರಾಫ್ಟ್​

ಲಂಡನ್​:ಬಾಲ್​ ಟ್ಯಾಂಪರಿಂಗ್​ ಮಾಡುವ ವಿಚಾರ ತಂಡದ ಬೌಲರ್​ಗಳಿಗೆ ಮೊದಲೇ ಅರಿವಿತ್ತು ಎಂದು ಕ್ಯಾಮರೂನ್ ಬ್ಯಾನ್​ಕ್ರಾಫ್ಟ್ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರಕರಣದ ಮರು ತನಿಖೆಗೆ ಆದೇಶಿಸಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸ್ಯಾಂಡ್ ಪೇಪರ್ ಬಳಸಿ ಬಾಲ್​ ಟ್ಯಾಂಪರಿಂಗ್ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿ ಸ್ಮಿತ್​ ಮತ್ತು ವಾರ್ನರ್​ ಜೊತೆ ನಿಷೇದಕ್ಕೊಳಗಾಗಿದ್ದ ಕ್ಯಾಮರೂನ್ ಬ್ಯಾನ್​ಕ್ರಾಫ್ಟ್​ ಶನಿವಾರ ಸ್ಫೋಟಕ ಹೇಳಿಕೆ ನೀಡಿದ್ದರು.

ಬಾಲ್​ ಟ್ಯಾಂಪರಿಂಗ್ ಮಾಡುವ ವಿಚಾರ ನಮ್ಮ ಬೌಲರ್​ಗಳಿಗೆ ಮೊದಲೇ ತಿಳಿದಿರಬಹುದು ಎಂದು ಹೇಳುವ ಮೂಲಕ ಕ್ರಿಕೆಟ್​ ಜಗತ್ತಿಗೆ ಶಾಕ್ ನೀಡಿದ್ದರು.

"ನೋಡಿ ಅಂದು ನಾನು ಏnu ಮಾಡೊದ್ನೋ ಅಕ್ಕೆ ನಾನೇ ಜವಾಬ್ದಾರಿ ಮತ್ತು ಅದಕ್ಕೆ ನಾನೇ ಹೊಣೆ. ಆದರೆ, ಖಂಡಿತವಾಗಿ ನಾನೇನು ಮಾಡಿದ್ದೆನೋ ಅದರ ಲಾಭ ಬೌಲರ್‌ಗಳಿಗೆ. ಹೀಗಾಗಿ, ನಾವು ಬಾಲ್​ ಟ್ಯಾಂಪರಿಂಗ್ ಮಾಡುವ ಬಗ್ಗೆ ಬಹುಶಃ ಕೆಲವು ಬೌಲರ್‌ಗಳಿಗೆ ತಿಳಿದಿರಬಹುದಿತ್ತೇನೊ. ಹೀಗಾಗಿ, ಅವರು ತಾವೇ ಮುಂದೆ ಬಂದು ವಿವರಿಸಬಹುದು ಎಂದು ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

ಬ್ಯಾನ್​ ಕ್ರಾಫ್ಟ್​ ಈ ಹೇಳಿಕೆ ನೀಡುತ್ತಿದ್ದಂತೆ ಕ್ರಿಕೆಟ್​ ಆಸ್ಟ್ರೇಲಿಯಾ ಗಂಭೀರವಾಗಿ ತೆಗೆದುಕೊಂಡಿದ್ದು, 2018ರ ಬಾಲ್​ ಟ್ಯಾಂಪರಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಬಗ್ಗೆ ಯಾವುದೇ ಮಾಹಿತಿಯಿದ್ದರು ಮುಂದೆ ಬಂದು ಪ್ರಸ್ತುತಿಪಡಿಸಬಹುದು ಎಂದು ಸಿಎ ವಕ್ತಾರರೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕ ಸ್ಟೀವ್​ ಸ್ಮಿತ್​ ಮತ್ತು ಉಪನಾಯಕ ಡೇವಿಡ್ ವಾರ್ನರ್​ಗೆ ಒಂದು ವರ್ಷ ನಿಷೇಧದ ಶಿಕ್ಷೆ, ಹಾಗೂ ಬ್ಯಾನ್​ಕ್ರಾಫ್ಟ್​ಗೆ 9 ನಿಷೇಧವೇರಲಾಗಿತ್ತು. ಇದೀಗ ಬ್ಯಾನ್​ಕ್ರಾಫ್ಟ್​ ಹೇಳಿಕೆಯಿಂದ ಪ್ರಕರಣ ಮತ್ತೆ ಕೂತೂಹಲ ಮೂಡಿಸಿದ್ದು, ಅವರ ಹೇಳಿಕೆ ನಿಜವಾದರೆ ಬೌಲರ್​ಗಳಾದ ಹೇಜಲ್​ವುಡ್​, ಸ್ಟಾರ್ಕ್​ ಮತ್ತು ಕಮ್ಮಿನ್ಸ್​ ಮೇಲೆ ಶಿಸ್ತುಕ್ರಮ ಜರುಗಿಸುವ ಸಾಧ್ಯತೆ ಇದೆ.

ಇದನ್ನು ಓದಿ: ದೇಶ ಇಂತಹ ಸ್ಥಿತಿ ತಲುಪಿರುವುದಕ್ಕೆ ನಿಮ್ಮಂತಹ ಜನರೇ ಕಾರಣ : ಹನುಮ ವಿಹಾರಿ ಕಿಡಿ

ABOUT THE AUTHOR

...view details