ಕಠ್ಮಂಡು:ನೇಪಾಳ ಕ್ರಿಕೆಟ್ ತಂಡದ ಕ್ಯಾಪ್ಟನ್, ಐಪಿಎಲ್ ಆಟಗಾರ ಸಂದೀಪ್ ಲಮಿಚಾನೆ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಕೇಳಿ ಬಂದಿದ್ದು ಇದೇ ಮೊದಲ ಬಾರಿಗೆ ಅವರು ತುಟಿ ಬಿಚ್ಚಿದ್ದಾರೆ. "ನಾನು ನಿರಪರಾಧಿ. ನನ್ನ ಮೇಲೆ ಕೇಳಿ ಬಂದಿರುವ ಆಧಾರರಹಿತ ಆರೋಪಗಳನ್ನು ಎದುರಿಸಲು ನಾನು ಸಿದ್ಧನಿದ್ದೇನೆ" ಎಂದು ತಿಳಿಸಿದ್ದಾರೆ.
ಅಪ್ರಾಪ್ತೆಯೋರ್ವರು (17 ವರ್ಷ) ಕ್ರಿಕೆಟಿಗನ ವಿರುದ್ಧ ದೂರು ದಾಖಲು ಮಾಡಿದ್ದಾಗಿ ನೇಪಾಳ ಪೊಲೀಸರು ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಕ್ರಿಕೆಟಿಗನಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಸಂದೀಪ್, "ಕೆರೆಬಿಯನ್ ಪ್ರೀಮಿಯರ್ ಲೀಗ್ನಿಂದ ರಜೆ ಪಡೆದುಕೊಳ್ಳುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ದೇಶಕ್ಕೆ ವಾಪಸ್ ಬರಲಿದ್ದೇನೆ. ನೇಪಾಳ ಕಾನೂನಿನ ಮೇಲೆ ನನಗೆ ಗೌರವವಿದೆ. ನನ್ನ ಮೇಲೆ ಕೇಳಿ ಬಂದಿರುವ ಎಲ್ಲ ಆಧಾರರಹಿತ ಆರೋಪಗಳನ್ನು ಎದುರಿಸಲು ಸಿದ್ಧನಾಗಿದ್ದೇನೆ. ಕಾನೂನು ಸಮನಾಗಿ ಕೆಲಸ ಮಾಡಲಿದೆ ಎಂಬ ನಂಬಿಕೆ ಇದೆ" ಎಂದರು.