ಸಿಡ್ನಿ : ಆಸ್ಟ್ರೇಲಿಯಾ ಮಹಿಳಾ ತಂಡದ ವೇಗದ ಬೌಲರ್ ಮೆಗನ್ ಶೂಟ್ ತಮ್ಮ ಪತ್ನಿ ಜೆಸ್ ಹೋಲಿಯೋಕ್ ತಾಯಿಯಾಗುತ್ತಿರುವ ಸಂಭ್ರಮದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ಸಲಿಂಗ ದಂಪತಿ ಈ ವರ್ಷದ ನವೆಂಬರ್ ವೇಳೆಗೆ ಹೆಣ್ಣು ಮಗುವಿಗೆ ಸ್ವಾಗತ ಕೋರುತ್ತಿದ್ದಾರೆ.
"ಜೆಸ್ ಮತ್ತು ನಾನು ತುಂಬಾ ಸಂತೋಷವಾಗಿದ್ದೇವೆ. ಜೆಸ್ ಶೀಘ್ರದಲ್ಲಿ ಹೆಣ್ಣುಮಗುವಿಗೆ ತಾಯಿಯಾಗುತ್ತಿದ್ದಾಳೆ" ಎಂದು ಸಾಮಾಜಿಕ ಜಾಲಾತಾಣದಲ್ಲಿ ಆಸ್ಟ್ರೇಲಿಯಾದ ಜರ್ಸಿಯನ್ನು 3 ನಂಬರ್ ಇರುವ ಜರ್ಸಿ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಶೂಟ್ ಈ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ.
ಸಲಿಂಗ ಕ್ರಿಕೆಟ್ ದಂಪತಿ ಮಗು ಪಡೆದಿರುವ ಸುದ್ದಿ ಹೊಸದೇನಲ್ಲ, ನ್ಯೂಜಿಲ್ಯಾಂಡ್ ತಂಡದ ನಾಯಕಿ ಆ್ಯಮಿ ಸೆಟರ್‌ವೇಟ್ ಹಾಗೂ ವೇಗದ ಬೌಲರ್ ಆಗಿರುವ ಸಹ ಆಟಗಾರ್ತಿ ಲೀ ತಹುಹು ದಂಪತಿ ಮಗು ಪಡೆದಿದ್ದರು. ಆ್ಯಮಿ ಸೆಟರ್‌ವೇಟ್ ಹೆಣ್ಣು ಮಗುವಿಗೆ ಜನ್ಮ ನೀಡಿ ಮತ್ತೆ ಕ್ರಿಕೆಟ್ಗೆ ಮರಳಿದ್ದಾರೆ.
ಇದನ್ನು ಓದಿ:ಏಷ್ಯನ್ ಚಾಂಪಿಯನ್ಶಿಪ್ : ಫೈನಲ್ನಲ್ಲಿ ಇಂದು ಮೇರಿ ಕೋಮ್ ಸೇರಿ ನಾಲ್ವರು ಕಣಕ್ಕೆ