ರಾಂಚಿ (ಜಾರ್ಖಂಡ್): ಕೊರೊನಾದಿಂದಾಗಿ ಈ ಬಾರಿಯ ಐಪಿಎಲ್ ಪಂದ್ಯಾವಳಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿದ್ದು, ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ಮನೆಗೆ ಬಂದಿರುವ ಹೊಸ ಅತಿಥಿ ಜೊತೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.
ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಇನ್ಸ್ಟಾಗ್ರಾಮ್ನಲ್ಲಿ ಪತಿಯು ಕುದುರೆಯೊಂದಿಗೆ ಸ್ಪರ್ಧೆಗಿಳಿದ ವಿಡಿಯೋ ಶೇರ್ ಮಾಡಿದ್ದು, ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ಮಾಹಿ ಮನೆಗೆ ಬಂದ ಹೊಸ ಅತಿಥಿ: ಮಗಳು ಝೀವಾ ಜೊತೆ ಇರುವ ಗೆಸ್ಟ್ ಇವರೇ ನೋಡಿ!
ಈ ಹಿಂದೆಯೇ ಚೇತಕ್ ಹೆಸರಿನ ಕಪ್ಪು ಬಣ್ಣದ ಕುದುರೆಯೊಂದನ್ನು ಖರೀದಿಸಿದ್ದ ಧೋನಿ, ಇತ್ತೀಚೆಗಷ್ಟೇ ಬಿಳಿ ಬಣ್ಣದ ಸಣ್ಣ ಕುದುರೆಯನ್ನು ಖರೀದಿಸಿದ್ದರು. ಮಗಳು ಝೀವಾ ಜೊತೆ ಬಿಳಿ ಕುದುರೆಯ ಫೋಟೋವನ್ನು ಸಾಕ್ಷಿ ಹಂಚಿಕೊಂಡಿದ್ದರು. ಇದೀಗ ರಾಂಚಿಯ ಫಾರ್ಮ್ ಹೌಸ್ನಲ್ಲಿ ಇದೇ ಕುದುರೆ ಜೊತೆ ಧೋನಿ ಓಡುತ್ತಿರುವ ವಿಡಿಯೋ ಸುದ್ದಿಯಲ್ಲಿದೆ.