ಢಾಕಾ: ಮಳೆಯಿಂದ ಈಗಾಗಲೇ ಎರಡೂವರೆ ದಿನಗಳು ನಷ್ಟವಾಗಿವೆ. ಆದರೂ 4ನೇ ದಿನ ಚಮತ್ಕಾರ ಮಾಡಿರುವ ಪಾಕಿಸ್ತಾನಿ ಬೌಲರ್ಗಳು ಅತಿಥೇಯ ಬಾಂಗ್ಲಾದೇಶ ತಂಡಕ್ಕೆ ಮರ್ಮಾಘಾತ ನೀಡಿದ್ದಾರೆ.
4 ದಿನಗಳು ಕಳೆದಿರುವ ಈ ಪಂದ್ಯದಲ್ಲಿ ಕೇವಲ 124.3 ಓವರ್ಗಳು ಮಾತ್ರ ನಡೆದಿವೆ. ಇದರಲ್ಲಿ ಪಾಕಿಸ್ತಾನ ತಂಡ 98.3 ಓವರ್ಗಳಲ್ಲಿ 300 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿದೆ. 360ಓವರ್ಗಳ ಬದಲಾಗಿ ಕೇವಲ 124 ಓವರ್ ನಡೆದಿರುವುದರಿಂದ ಈ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ, 2ನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ತಂಡ ಕೇವಲ 26 ಓವರ್ಗಳಲ್ಲಿ 76 ರನ್ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ಸಾಜಿದ್ ಖಾನ್ 35 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದಿದ್ದಾರೆ.
ಪ್ರಸ್ತುತ ಬಾಂಗ್ಲಾದೇಶದ ಪರ ಆಲ್ರೌಂಡರ್ ಶಕಿಬ್ ಅಲ್ ಹಸನ್ ಅಜೇಯ 23 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಬುಧವಾರ ಕೊನೆಯ ದಿನವಾಗಿದ್ದು, ಮಳೆ ಬಾರದಿದ್ದರೆ ಪಾಕಿಸ್ತಾನ ಅತಿಥೇಯ ತಂಡದ ಒಟ್ಟು 13 ವಿಕೆಟ್ ಪಡೆದು ಪಂದ್ಯವನ್ನು ಗೆಲ್ಲಲು ಪ್ರಯತ್ನಿಸಲಿದೆ.
ಇತ್ತ ಬಾಂಗ್ಲಾದೇಶ ತಂಡ ಎರಡೂ ಇನ್ನಿಂಗ್ಸ್ ಸೇರಿ ಉಳಿದಿರುವ 13 ವಿಕೆಟ್ಗಳಲ್ಲಿ ಸಾಧ್ಯವಾದಷ್ಟು ಓವರ್ಗಳನ್ನು ವ್ಯರ್ಥ ಮಾಡಿ ಸೋಲನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಕಿದೆ. ಕೊನೆಯ ದಿನ ಪಿಚ್ ಬೌಲರ್ಗಳಿಗೆ ನೆರವು ನೀಡುವುದರಿಂದ ಪಂದ್ಯ ರೋಚಕವಾಗಿರಲಿದೆ.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್(76), ಅಜರ್ ಅಲಿ(56), ಫವಾದ್ ಆಲಂ(53) ಮತ್ತು ಮೊಹಮ್ಮದ್ ರಿಜ್ವಾನ್(53) ಅರ್ಧಶತಕಗಳ ಸಹಿತ 300 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಇದನ್ನೂ ಓದಿ:ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ