ಕೋಲ್ಕತ್ತಾ:ಕ್ರಿಕೆಟ್ ಅನ್ನೋದು ಅನಿಶ್ಚಿತತೆಯ ಆಟ, ಅಲ್ಲಿ ಹಲವು ಬಾರಿ ಆಟಗಾರರ ವಯಸ್ಸಿಗಿಂತಲೂ ಪ್ರದರ್ಶನವೇ ಅವರ ವೃತ್ತಿಜೀವನದ ಏರಿಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವೊಮ್ಮೆ 36 - 37ರ ಹರೆಯದಲ್ಲೂ ಆಟದ ವೈಖರಿ, ಸ್ಥಿರತೆಯಿಂದ ಅತಿಯಾದ ಸ್ಪರ್ಧೆಯ ನಡುವೆಯೂ ತಂಡದಲ್ಲಿ ಸ್ಥಾನ ಪಡೆಯಬಹುದು. ಆದರೆ, ಕೆಲವೊಮ್ಮೆ ಸಾಧ್ಯವಾಗದಿರಬಹುದು. ಇದೀಗ ಭಾರತದಲ್ಲಿ ಹಿರಿಯ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಹಾ ಕಡೆಗಣನೆ ಹಾಗೂ ದಿನೇಶ್ ಕಾರ್ತಿಕ್ ಕಮ್ಬ್ಯಾಕ್ ಬಗ್ಗೆ ಚರ್ಚೆ ಶುರುವಾಗಿದೆ.
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರಲ್ಲಿ ಉತ್ತಮ ಪ್ರದರ್ಶನ ತೋರಿರುವ ಕಾರ್ತಿಕ್ (15 ಪಂದ್ಯಗಳಿಂದ 324 ರನ್) 25ನೇ ಸ್ಥಾನದಲ್ಲಿದ್ದರೆ, ಸಹಾ 10 ಪಂದ್ಯಗಳಲ್ಲಿ 312 ಗಳಿಸಿದ್ದಾರೆ. ಕಾರ್ತಿಕ್ ಅವರನ್ನು ಮುಂಬರುವ ಟಿ - 20 ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಇನ್ನೊಂದೆಡೆ ಸಹಾ ಅವರನ್ನು ಟೆಸ್ಟ್ ತಂಡದಿಂದ ಕಡೆಗಣಿಸಲಾಗಿದೆ.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ಆಯ್ಕೆಗಾರ ದಿಲೀಪ್ ವೆಂಗ್ಸರ್ಕರ್ 'ಆಯ್ಕೆಗಾರರ ಆಲೋಚನೆ ಬಗ್ಗೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಪ್ರಸ್ತುತ ಫಾರ್ಮ್ ಪರಿಗಣಿಸಿ ಆರಿಸಿರಬಹುದು. ಕಾರ್ತಿಕ್ ಉತ್ತಮ ಫಿನಿಶರ್ ಆಗಿರಬೇಕು ಎಂದು ತಿಳಿಸಿದ್ದಾರೆ. 'ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮತ್ತು ಕೆಎಲ್ ರಾಹುಲ್ ಅವರೊಂದಿಗೆ, 5 ಅಥವಾ 6ನೇ ಕ್ರಮಾಂಕದಲ್ಲಿ ಫಿನಿಶರ್ಗಾಗಿ ಆಯ್ಕೆಗಾರರು ಹುಡುಕಿರಬಹುದು. ಅದು ಕಾರ್ತಿಕ್ ಸೇರ್ಪಡೆಗೆ ಕಾರಣ ಇರಬಹುದು. ಕಾರ್ತಿಕ್ ಈ ಹಿಂದೆ ಎಂಎಸ್ ಧೋನಿಯ ಪಾತ್ರವನ್ನು ನಿರ್ವಹಿಸಬಹುದು ಎಂಬುದು ವೆಂಗ್ಸರ್ಕರ್ ಮಾತಾಗಿದೆ.
ಸಹಾ ಕೈಬಿಡುವ ನಿರ್ಧಾರಪ್ರತ್ಯೇಕ ಮಾನದಂಡದಂತಿದೆ:ಮತ್ತೊಬ್ಬ ಆಯ್ಕೆಗಾರ ರಾಜಾ ವೆಂಕಟ್ ಮಾತನಾಡಿ, ಟಿ - 20 ತಂಡಕ್ಕೆ ಕಾರ್ತಿಕ್ ಸೇರ್ಪಡೆ ಮತ್ತು ಸಹಾ ಅವರನ್ನು ದೀರ್ಘ ಆವೃತ್ತಿಯಿಂದ ಕೈಬಿಡುವ ನಿರ್ಧಾರವು ಪ್ರತ್ಯೇಕ ಮಾನದಂಡಂತಿದೆ ಎಂದಿದ್ದಾರೆ. ಸಹಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವೆಂಕಟ್, ಅವರನ್ನು ದೇಶದ ಅತ್ಯುತ್ತಮ ವಿಕೆಟ್ ಕೀಪರ್ ಎಂದಿದ್ದಾರೆ.