ಕರ್ನಾಟಕ

karnataka

ETV Bharat / sports

ನನಗೆ ನೋವಾಗಿದೆ, ಆದ್ರೂ ಪತ್ರಕರ್ತನ ಹೆಸರು ಬಹಿರಂಗಪಡಿಸಿ ಆತನ ಜೀವನ ಹಾಳುಮಾಡಲ್ಲ: ವೃದ್ಧಿಮಾನ್ ಸಹಾ

ಶ್ರೀಲಂಕಾ ವಿರುದ್ಧದ ತವರಿನ ಟೆಸ್ಟ್​ ಸರಣಿಗೆ ಸಹಾ ಅವರನ್ನು ಕೈಬಿಡಲಾಗಿತ್ತು. ಈ ವೇಳೆ, ಸಂದರ್ಶನಕ್ಕಾಗಿ ಪತ್ರಕರ್ತರೊಬ್ಬರು ಸಹಾ ಅವರನ್ನು ಒತ್ತಾಯ ಮಾಡಿದ್ದರು. ಇದಕ್ಕೆ ಒಪ್ಪದಿದ್ದಾಗ ಅವರು ಕೆಲವು ಬೆದರಿಸುವಂತಹ ಸಂದೇಶಗಳನ್ನು ವಾಟ್ಸ್​ಆ್ಯಪ್​​ ಮೂಲಕ ಕಳುಹಿಸಿದ್ದನ್ನು ಸಹಾ ಟ್ವೀಟ್​ ಮಾಡಿಕೊಂಡಿದ್ದರು.

Wriddhiman Saha
ವೃದ್ಧಿಮಾನ್ ಸಹಾ

By

Published : Feb 22, 2022, 8:22 PM IST

ನವದೆಹಲಿ: ಭಾರತದ ವಿಕೆಟ್​ ಕೀಪರ್​ ವೃದ್ಧಿಮಾನ್​ ಸಹಾ ತಮಗೆ ಬೆದರಿಕೆಯೊಡ್ಡಿದ ಪತ್ರಕರ್ತನ ಹೆಸರನ್ನು ಬಹಿರಂಗಪಡಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಮಾನವೀಯತೆಯ ದೃಷ್ಟಿಯಿಂದ ತಮಗೆ ಬೆದರಿಕೆಯಾಕಿರುವ ಪತ್ರಕರ್ತನ ಹೆಸರನ್ನು ತಮ್ಮಲ್ಲೇ ಉಳಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

"ನನಗೆ ನೋವಾಗಿದೆ ಮತ್ತು ಮನನೊಂದಿದ್ದೇನೆ. ನಾನು ಅಂತಹ ನಡವಳಿಕೆ ಸಹಿಸಬಾರದು ಎಂದು ನಾನು ಭಾವಿಸಿದೆ. ಯಾರೇ ಆದರೂ ಈ ರೀತಿ ಬೆದರಿಸುವ ಮೂಲಕ ಕಾರ್ಯಸಾಧನೆಗೆ ಮುಂದಾಗಬಾರದು ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನಾನು ಆ ಸಂದೇಶಗಳನ್ನು ಸಾರ್ಜಜನಿಕರ ಮುಂದೆ ತರಲು ಬಯಸಿದೆನೇ ಹೊರತು ಆತನ/ಅವಳ ಹೆಸರನ್ನು ಅಲ್ಲ ಎಂದು ಸಹಾ ಮೊದಲ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ವೃದ್ಧಿಮಾನ್ ಸಹಾ ಟ್ವೀಟ್​

ಯಾರೊಬ್ಬರ ವೃತ್ತಿಜೀವನವನ್ನು ಕೊನೆಗೊಳಿಸುವ ಮಟ್ಟಿಗೆ ನಾನು ಯಾರಿಗೂ ಹಾನಿಯನ್ನುಂಟುಮಾಡುವುದಿಲ್ಲ, ಅದು ನನ್ನ ಸ್ವಭಾವವಲ್ಲ. ಆದ್ದರಿಂದ ಅವನ / ಅವಳ ಕುಟುಂಬವನ್ನು ನೋಡಿಕೊಂಡು ಮಾನವೀಯತೆಯ ಆಧಾರದ ಮೇಲೆ, ನಾನು ಸದ್ಯಕ್ಕೆ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಆದರೆ, ಅಂತಹ ಯಾವುದೇ ವರ್ತನೆ ಪುನಃ ಸಂಭವಿಸಿದರೆ, ನಾನು ಯಾವುದನ್ನು ಮುಚ್ಚಿಡಲು ಹೋಗುವುದಿಲ್ಲ" ಎಂದು ಮತ್ತೊಂದು ಟ್ವೀಟ್​ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ನು ನನ್ನ ಸಮಸ್ಯೆಗೆ ತಕ್ಷಣ ಬೆಂಬಲವನ್ನು ತೋರಿಸಿದ ಮತ್ತು ಸಹಾಯ ಮಾಡಲು ಇಚ್ಛೆ ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳುತ್ತೇನೆ. ಅವರಿಗೆ ನನ್ನ ಕೃತಜ್ಞತೆಗಳು" ಎಂದು ಕೊನೆಯ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ತವರಿನ ಟೆಸ್ಟ್​ ಸರಣಿಗೆ ಸಹಾ ಅವರನ್ನು ಕೈಬಿಡಲಾಗಿತ್ತು. ಈ ವೇಳೆ ಸಂದರ್ಶನಕ್ಕಾಗಿ ಪತ್ರಕರ್ತರೊಬ್ಬರು ಸಹಾ ಅವರನ್ನು ಒತ್ತಾಯ ಮಾಡಿದ್ದರು. ಇದಕ್ಕೆ ಒಪ್ಪದಿದ್ದಾಗ ಅವರು ಕೆಲವು ಬೆದರಿಸುವಂತಹ ಸಂದೇಶಗಳನ್ನು ವಾಟ್ಸ್​ಆ್ಯಪ್​​ ಮೂಲಕ ಕಳುಹಿಸಿದ್ದನ್ನು ಸಹಾ ಟ್ವೀಟ್​ ಮಾಡಿಕೊಂಡಿದ್ದರು.

ಇದನ್ನೂ ಓದಿ:ಸಹಾಗೆ ಬೆದರಿಕೆ ಖಂಡನೀಯ, ಆದಷ್ಟು ಬೇಗ ಆ ಪತ್ರಕರ್ತನ ವಿರುದ್ಧ ಕ್ರಮ ತೆಗೆದುಕೊಳ್ಳಲಿ: ಕ್ರಿಕೆಟಿಗರ ಸಂಘ ಒತ್ತಾಯ

ABOUT THE AUTHOR

...view details