ನವದೆಹಲಿ: ಭಾರತದ ಶ್ರೇಷ್ಠ ಬ್ಯಾಟರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಟದ ಅಭಿಮಾನಿಗಳಿಗೆ ಹಾಗೇ ಲೆಜೆಂಡ್ ಆಡಗಾರರ ಕ್ರಿಕೆಟ್ ನೋಡಲು ಇಷ್ಟ ಪಡುವ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಸಚಿನ್ ಮತ್ತೊಮ್ಮೆ ಮೈದಾನಕ್ಕಿಳಿದು ಬ್ಯಾಟ್ ಹಿಡಿಯಲಿದ್ದಾರೆ. ಅರೆ.. ನಿವೃತ್ತಿ ಆಗಿ ಬಹಳಾ ವರ್ಷ ಆಗಿದೆ ಈಗ ಭಾರತ ತಂಡಕ್ಕೆ ಮತ್ತೆ ಆಡುತ್ತಾರಾ? ಇಲ್ಲ.
ಕಳೆದ ಕೆಲ ವರ್ಷಗಳಿಂದ ಆಡಿಸಲಾಗುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಮೂರನೇ ಆವೃತ್ತಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್‌ನಲ್ಲಿ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಸೆಪ್ಟೆಂಬರ್ ತಿಂಗಳು ನಡೆಯಲಿದೆ. ತೆಂಡೂಲ್ಕರ್ ಈ ಸರಣಿಯಲ್ಲಿ ಆಡುವುದನ್ನು ಕಾಣಬಹುದು. ನವೆಂಬರ್ 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ತೆಂಡೂಲ್ಕರ್ ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಆಡುತ್ತಿದ್ದಾರೆ. ಕೊನೆಯ ಎರಡು ಸೀಸನ್‌ಗಳಲ್ಲಿ ಇಂಡಿಯಾ ಲೆಜೆಂಡ್ಸ್ ತಂಡಕ್ಕಾಗಿ ಬ್ಯಾಟ್ ಬೀಸಿದ್ದಾರೆ.
ಪಾಕಿಸ್ತಾನವೂ ಭಾಗವಹಿಸುವ ಸಾಧ್ಯತೆ:ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ನಲ್ಲಿ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ಈ ಮಾಜಿ ಅನುಭವಿಗಳು ಟಿ20 ಲೀಗ್ನಲ್ಲಿ ಜಾಗೃತಿಗಾಗಿ ಬ್ಯಾಟ್ ಬೀಸಲಿದ್ದಾರೆ. 2023ರಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ತಂಡ ಕೂಡ ಈ ಸರಣಿಯಲ್ಲಿ ಭಾಗವಹಿಸಲು ಸಿದ್ಧವಾಗಿದೆ. ಮೂರನೇ ಸೀಸನ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಕೊನೆಯ ಎರಡು ಆವೃತ್ತಿಯನ್ನು ಭಾರತದಲ್ಲಿ ಆಡಿಸಲಾಗಿತ್ತು. ಮುಂದಿನ ಆವೃತ್ತಿಯನ್ನು ಇಂಗ್ಲೆಂಡ್ ಆಯೋಜಿಸುತ್ತಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈ ಸೀಸನ್ ನಡೆಸಲು ಮುಂದೆ ಬಂದಿದೆ.