ಟೀಮ್ ಇಂಡಿಯಾದ ಮಾಜಿ ಆಟಗಾರ, 'ಗಾಡ್ ಆಫ್ ಕ್ರಿಕೆಟ್' ಸಚಿನ್ ತೆಂಡಲ್ಕೂರ್ ತಮ್ಮ ಅಭಿಮಾನಿಗಳನ್ನು ಹಲವು ವರ್ಷಗಳಿಂದ ಕ್ರಿಕೆಟ್ ಮೂಲಕ ರಂಜಿಸಿದ್ದಾರೆ. ಈಗ ಮಾಸ್ಟರ್ ಬ್ಲಾಸ್ಟರ್ ತಮ್ಮ ಹೊಸ ಬಾಣಸಿಗನ ಅವತಾರದಿಂದ ಅಭಿಮಾನಿಗಳಿಗೆ ಮನರಂಜನೆ ನೀಡುವ ಪ್ರಯತ್ನದಲ್ಲಿದ್ದಾರೆ.
ಕ್ರಿಕೆಟ್ ಬದುಕಿನ ನಿವೃತ್ತಿಯ ನಂತರ ಸಚಿನ್, ಹೆಚ್ಚಿನ ಸಮಯವನ್ನು ತಮ್ಮ ಕುಟುಂಬ ಸದಸ್ಯರೊಡನೆ ಮುಂಬೈಯ ತಮ್ಮ ಮನೆಯಲ್ಲಿ ಆರಾಮಾಗಿ ಕಳೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತಿದ್ದಾರೆ.