ಮುಂಬೈ:ಭಾರತದ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಮಗನ ಕ್ರಿಕೆಟ್ ಆಟವನ್ನು ಯಾಕೆ ನೋಡುವುದಿಲ್ಲ ಎಂಬ ಬಗ್ಗೆ ಮಾತನಾಡಿದ್ದಾರೆ. 'ಅರ್ಜುನ್ ತೆಂಡೂಲ್ಕರ್ ತನ್ನ ಆಟವನ್ನು ಪ್ರೀತಿಸುವ ಸ್ವಾತಂತ್ರ್ಯ ಅವನಿಗಿದೆ. ಪಂದ್ಯ ನೋಡಲು ಹೋಗಿ ನಾನು ಅವನ ಮೇಲೆ ಒತ್ತಡ ಹೇರಲಾರೆ' ಎಂದು ಹೇಳಿದ್ದಾರೆ.
ಕುಟುಂಬಸ್ಥರು ಆಟವನ್ನು ಗಮನಿಸಿದಾಗ ಸಹಜವಾಗಿ ನಮ್ಮ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ನಾನು ಅರ್ಜುನ್ರ ಆಟವನ್ನು ನೋಡಲು ಮೈದಾನಕ್ಕೆ ಹೋಗುವುದಿಲ್ಲ. ಅರ್ಜುನ್ಗೆ ಕ್ರಿಕೆಟ್ ಮೇಲೆ ಪ್ರೀತಿ ಮೂಡಬೇಕು. ಅವನು ಬಯಸಿದಂತೆ ಇರಲು ನಾನು ಇಷ್ಟ ಪಡುತ್ತೇನೆ ಎಂದು ಸಚಿನ್ ತೆಂಡೂಲ್ಕರ್ ಇನ್ ಡೆಪ್ತ್ ವಿತ್ ಗ್ರಹಾಂ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಅರ್ಜುನ್ ಆಟವನ್ನು ನಾನು ನೋಡಲು ಹೋದರೂ ಅವನಿಗೆ ಇದು ತಿಳಿದಿರುವುದಿಲ್ಲ. ಮಿಗಿಲಾಗಿ ಅರ್ಜುನ್ರ ಕ್ರಿಕೆಟ್ ತರಬೇತುದಾರ, ತಂಡಕ್ಕೂ ಈ ಮಾಹಿತಿ ಇರುವುದಿಲ್ಲ. ಎಲ್ಲೋ ಒಂದೆಡೆ ಕುಳಿತು ಆಟ ವೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.