ಮುಂಬೈ :ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈ ಬಾರಿ ತಿನಿಸೊಂದರ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಸಚಿನ್ ಮಹಾರಾಷ್ಟ್ರದ ರುಚಿಕರವಾದ ಮಿಸಾಲ್ ಪಾವ್ ಸವಿಯುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಭಾನುವಾರ, ಸೋಮವಾರ ಯಾವುದೇ ದಿನವಾಗಿರಲಿ ನಾನು ಮಿಸಾಲ್ ಪಾವ್ ಸೇವಿಸುತ್ತೇನೆ. ಪರ್ಫೆಕ್ಟ್ ಬ್ರೇಕ್‌ಪಾಸ್ಟ್‌ಗೆ ನಿಮ್ಮ ಐಡಿಯಾ ಏನು ಎಂದು ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕೇವಲ 25 ಸೆಕೆಂಡುಗಳ ವಿಡಿಯೋ ಟ್ವಿಟರ್‌ನಲ್ಲಿ ಸುಮಾರು 3 ಲಕ್ಷ 80 ಸಾವಿರ ವೀಕ್ಷಣೆ ಪಡೆದಿದ್ದರೆ, ಮತ್ತೊಂದು ಜಾಲತಾಣ ಇನ್‌ಸ್ಟಾದಲ್ಲಿ 55 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.