ಲಂಡನ್:ಭಾರತ ತಂಡದ ಮಾಜಿ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಶ್ವದ ಮೂರನೇ ಅತಿ ಹೆಚ್ಚು ಮೆಚ್ಚುಗೆ ಪಡೆದ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಭಾರತ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ವಿಶ್ವದ ನಾಲ್ಕನೇ ಅತ್ಯಂತ ಜನಪ್ರಿಯ ಕ್ರೀಡಾಪಟು ಎಂದು ಗೋಲ್ ಡಾಟ್ ಕಾಮ್ ವರದಿ ಮಾಡಿದೆ.
ಫುಟ್ಬಾಲ್ ತಾರೆಗಳಾದ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಅವರು ಮೊದಲ ಎರಡು ಸ್ಥಾನ ಅಲಂಕರಿಸಿದ್ದಾರೆ. ಬ್ರಿಟನ್ನ ಮಾರುಕಟ್ಟೆ ಸಂಶೋಧನೆ ಮತ್ತು ಡೇಟಾ ಅನಾಲಿಟಿಕ್ಸ್ ಸಂಸ್ಥೆ 'ಯೂಗೋವ್' ನಡೆಸಿದ ಸಮೀಕ್ಷೆಯ ಇದಾಗಿದೆ.
ಈ ಅಧ್ಯಯನದ ಪ್ರಕಾರ ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ವಿಶ್ವದ ವಿವಿಧ ಕ್ಷೇತ್ರಗಳಲ್ಲಿ ಜನಪ್ರಿಯತೆ ಪಡೆದ ವ್ಯಕ್ತಿಯಾಗಿದ್ದಾರೆ. ನಂತರದ ಸ್ಥಾನದಲ್ಲಿ ಬಿಲ್ ಗೇಟ್ಸ್ ಮತ್ತು ಕ್ಸಿ ಜಿನ್‌ಪಿಂಗ್ ಕೂಡ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅತಿ ಹೆಚ್ಚು ಮೆಚ್ಚುಗೆ ಪಡೆದ 8ನೇ ವ್ಯಕ್ತಿಯಾಗಿದ್ದು, ಬಾಲಿವುಡ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್ (14ನೇ) ಮತ್ತು ಅಮಿತಾಬ್ ಬಚ್ಚನ್ (15 ನೇ) ಕೂಡ ಪಟ್ಟಿಯಲ್ಲಿದ್ದಾರೆ.
ಹೆಚ್ಚು ಮೆಚ್ಚುಗೆ ಪಡೆದ ಮಹಿಳೆಯರಲ್ಲಿ ಬರಾಕ್ ಒಬಾಮಾ ಅವರ ಪತ್ನಿ ಮಿಚೆಲ್ ಒಬಾಮಾ ಅಗ್ರಸ್ಥಾನದಲ್ಲಿದ್ದಾರೆ. ನಂತರ ಹಾಲಿವುಡ್ ನಟಿ ಏಂಜಲೀನಾ ಜೋಲಿ ಮತ್ತು ರಾಣಿ ಎಲಿಜಬೆತ್ II ಇದ್ದಾರೆ.
ಇದನ್ನೂ ಓದಿ:U-19 ತಂಡಕ್ಕೆ ಉಪಯುಕ್ತ ಸಲಹೆ ನೀಡಿದ ಕಪ್ತಾನ.. ಯುವ ಪ್ಲೇಯರ್ಸ್ಗೆ ರೋಹಿತ್ರಿಂದ ಕ್ರಿಕೆಟ್ ಪಾಠ