ಜೋಹಾನ್ಸ್ಬರ್ಗ್:ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದೇ 26ರಿಂದ ಆರಂಭವಾಗಲಿರುವ ಟೆಸ್ಟ್ ಮತ್ತು ಏಕದಿನ ಸರಣಿ ವೇಳೆ ಸ್ಟೇಡಿಯಂಗೆ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
ಪ್ರಪಂಚಾದ್ಯಂತ ಕೋವಿಡ್ 19 ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ 4ನೇ ಅಲೆ ಇರುವುದರಿಂದ ಬಿಸಿಸಿಐ ಮತ್ತು ಸಿಎಸ್ಎ ಆಟಗಾರರ ಆರೋಗ್ಯ ಮತ್ತು ಪ್ರವಾಸದಕ್ಕೆ ಯಾವುದೇ ತೊಂದರೆಯಾಗದಂತೆ ತಡೆಯಲು ಜಂಟಿಯಾಗಿ ಪ್ರೇಕ್ಷಕರಿಲ್ಲದೇ ಸರಣಿ ನಡೆಸಲು ತೀರ್ಮಾನಿಸಿವೆ.
ಕೋವಿಡ್ - ಅಪಾಯದ ದೃಷ್ಟಿಕೋನದಿಂದ ಪ್ರವಾಸದ ಸಂದರ್ಭದಲ್ಲಿ ಉಂಟಾಗುವ ಉಲ್ಲಂಘನೆಗಳನ್ನು ತಪ್ಪಿಸಲು ಮತ್ತು ಅಪಾಯ - ಮುಕ್ತ ಬಯೋ ಬಬಲ್ ಪರಿಸರವನ್ನು ನಿರ್ವಹಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು CSA ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.