ಕೇಪ್ಟೌನ್:ಕೀಗನ್ ಪೀಟರ್ಸನ್ ಅವರ ಅಜೇಯ 40 ರನ್ಗಳ ನೆರವಿನಿಂದ ದಕ್ಷಿಣ ಆಫ್ರಿಕಾ ಎರಡನೇ ದಿನದಾಟದ ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 100 ರನ್ಗಳಿಸಿದೆ. ಇನ್ನು ಆತಿಥೇಯ ತಂಡದ ಕೈಯಲ್ಲಿ 7 ವಿಕೆಟ್ಗಳು ಬಾಕಿಯಿದ್ದು ಇನ್ನೂ 123 ರನ್ಗಳ ಹಿನ್ನಡೆ ಹೊಂದಿದೆ.
ಮೊದಲ ದಿನ ಭಾರತವನ್ನು 223 ರನ್ಗಳಿಗೆ ಕಟ್ಟಿಹಾಕಿದ ಆತಿಥೇಯರು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 17 ರನ್ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದರು. ಇಂದು ಬ್ಯಾಟಿಂಗ್ ಆರಂಭಿಸಿದ ಹರಿಣ ಪಡೆ ಎರಡನೇ ದಿನದ 2ನೇ ಎಸೆತದಲ್ಲಿ ಮಾರ್ಕ್ರಮ್ ವಿಕೆಟ್ ಕಳೆದುಕೊಂಡಿತು. ಬುಮ್ರಾ ಬೌಲಿಂಗ್ನಲ್ಲಿ ಮಾರ್ಕ್ರಮ್ ಕ್ಲೀನ್ ಬೌಲ್ಡ್ ಆದರು.
ನೈಟ್ ವಾಚ್ಮನ್ ಆಗಿ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ಕೇಶವ್ ಮಹಾರಾಜ್ 45 ಎಸೆತಗಳಲ್ಲಿ 4 ಬೌಂಡರಿ ಸಹಿತ 25 ರನ್ಗಳಿಸಿ ಉಮೇಶ್ ಯಾದವ್ಗೆ ವಿಕೆಟ್ ಒಪ್ಪಿಸಿದರು.