ಕರ್ನಾಟಕ

karnataka

ETV Bharat / sports

ದ.ಆಫ್ರಿಕಾ ಪ್ರವಾಸಕ್ಕೆ ತಂಡದ ಆಯ್ಕೆ: ಕೊಹ್ಲಿ ಏಕದಿನ ನಾಯಕತ್ವ, ರಹಾನೆ-ಇಶಾಂತ್ ಟೆಸ್ಟ್​​ ಭವಿಷ್ಯ ನಿರ್ಧಾರ

ಆಯ್ಕೆ ಸಮಿತಿ ಅಧ್ಯಕ್ಷ ಚೇತನ್​ ಶರ್ಮಾ, ಆಯ್ಕೆಗಾರರಾದ ಅಬೆ ಕುರುವಿಲ್ಲಾ ಮತ್ತು ಸುನಿಲ್ ಜೋಶಿ ಮುಂಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ 2ನೇ ಟೆಸ್ಟ್​ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಅವರು ಈ ವಾರದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಕುಳಿತು ಭಾರತೀಯ ಕ್ರಿಕೆಟ್‌ನ ಮೇಲೆ ಪರಿಣಾಮ ಬೀರಬಹುದಾದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ.

SA Team Selection
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಆಯ್ಕೆ

By

Published : Dec 5, 2021, 9:25 PM IST

ಮುಂಬೈ: ಏಕದಿನ ತಂಡದಲ್ಲಿ ವಿರಾಟ್​ ಕೊಹ್ಲಿಯ ನಾಯಕತ್ವ, ಅವರ ಟೆಸ್ಟ್​ ತಂಡದ ಉಪನಾಯಕ ಅಜಿಂಕ್ಯ ರಹಾನೆ ಭವಿಷ್ಯ ಮತ್ತು ನೂರು ಟೆಸ್ಟ್​ ಪಂದ್ಯಗಳನ್ನಾಡಿರುವ ಇಶಾಂತ್​ ಶರ್ಮಾರ ಟೆಸ್ಟ್​ ತಂಡದ ಸ್ಥಾನದ ಬಗ್ಗೆ ಈ ವಾರದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ತಂಡ ಆಯ್ಕೆ ಮಾಡುವ ಸಂದರ್ಭದಲ್ಲಿ ನಿರ್ಧಾರವಾಗಲಿದೆ.

ಆಯ್ಕೆ ಸಮಿತಿ ಅಧ್ಯಕ್ಷ ಚೇತನ್​ ಶರ್ಮಾ, ಆಯ್ಕೆಗಾರರಾದ ಅಬೆ ಕುರುವಿಲ್ಲಾ ಮತ್ತು ಸುನಿಲ್ ಜೋಶಿ ಮುಂಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ 2ನೇ ಟೆಸ್ಟ್​ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಅವರು ಈ ವಾರದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಕುಳಿತು ಭಾರತೀಯ ಕ್ರಿಕೆಟ್‌ನ ಮೇಲೆ ಪರಿಣಾಮ ಬೀರಬಹುದಾದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ.

ವಿರಾಟ್​ ಕೊಹ್ಲಿ ಏಕದಿನ ನಾಯಕತ್ವ ಭವಿಷ್ಯ:

ಭಾರತ ದಕ್ಷಿಣ ಆಫ್ರಿಕಾದಲ್ಲಿ 3 ಏಕದಿನ ಪಂದ್ಯಗಳನ್ನಾಡಿದ್ದೇ ಆದರೆ ಯಾರು ತಂಡವನ್ನು ಮುನ್ನಡೆಸಲಿದ್ದಾರೆ. ಸೀಮಿತ ಓವರ್​ಗಳ ಪಂದ್ಯದಲ್ಲಿ ದೇಶಕ್ಕೆ ಇಬ್ಬರು ನಾಯಕರ ಅಗತ್ಯವಿದೆಯೇ ಎನ್ನುವ ಗೊಂದಲಗಳ ಕುರಿತು ಚರ್ಚೆ ನಡೆಯಲಿದೆ. ಈಗಾಗಲೇ ರೋಹಿತ್ ಶರ್ಮಾ ಟಿ20 ತಂಡವನ್ನು ಮುನ್ನಡುಸುತ್ತಿದ್ದಾರೆ. 2023ಕ್ಕೆ 50 ಓವರ್​ಗಳ ವಿಶ್ವಕಪ್​ ಇರುವುದರಿಂದ ವೈಟ್​ಬಾಲ್​ ತಂಡಕ್ಕೆ ಇಬ್ಬರು ನಾಯಕರ ಅಗತ್ಯವಿಲ್ಲ ಎಂಬ ಕೂಗು ಬಿಸಿಸಿಐ ಕಾರಿಡಾರ್​ಗಳಲ್ಲಿ ಕೇಳಿಬರುತ್ತಿದೆ. ಹಾಗಾಗಿ ರೋಹಿತ್ ಏಕದಿನ ತಂಡಕ್ಕೂ ನಾಯಕನಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:ಭಾರತದ ಬಿಗಿ ಹಿಡಿತದಲ್ಲಿ 2ನೇ ಟೆಸ್ಟ್​: ಸರಣಿ ಗೆಲ್ಲಲು ಕೊಹ್ಲಿಪಡೆಗೆ ಬೇಕು ಕಿವೀಸ್​ನ 5 ವಿಕೆಟ್​

ರಹಾನೆ, ಪೂಜಾರಗೆ ಮತ್ತೊಂದು ಅವಕಾಶ, ಆದ್ರೆ ರೋಹಿತ್ ಹೆಗಲಿಗೆ ಉಪನಾಯಕ ಪಟ್ಟ

ಪ್ರಸ್ತುತ ಫಾರ್ಮ್​ ಸಮಸ್ಯೆ ಎದುರಿಸುತ್ತಿರುವ ಹಿರಿಯ ಬ್ಯಾಟರ್​ಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಭವಿಷ್ಯದ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ ರಾಹುಲ್ ದ್ರಾವಿಡ್​ ಕೋಚಿಂಗ್​ನಲ್ಲಿ ಇದೇ ಮೊದಲ ವಿದೇಶಿ ಪ್ರವಾಸವಾಗಿದ್ದು, ಅನುಭವಿಗಳಾದ ರಹಾನೆ ಮತ್ತು ಪೂಜಾರರನ್ನು ಕಡೆಗಣಿಸುವ ಸಾಧ್ಯತೆ ಕಡಿಮೆಯಿದೆ. ಆದರೆ ರಹಾನೆ ತಂಡದಲ್ಲಿ ಅವಕಾಶ ಪಡೆಯಬಹುದೇ ಹೊರತು ತನ್ನ ಉಪನಾಯಕ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಉಪನಾಯಕನಾಗಿದ್ದ ರೋಹಿತ್ ಶರ್ಮಾ ಟೆಸ್ಟ್​ನಲ್ಲಿ ಕೊಹ್ಲಿಗೆ ಉಪನಾಯಕನಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಲ್ಲದೆ ಅವರು ಭವಿಷ್ಯದಲ್ಲಿ ಆಡುವ 11ರ ಬಳಗ ಸ್ವಯಂ ಆಯ್ಕೆ ಕೂಡ ಆಗುವುದಿಲ್ಲ. ಈಗಾಗಲೇ ಶ್ರೇಯಸ್​ ಅಯ್ಯರ್​, ಶುಬ್ಮನ್​ ಗಿಲ್​, ಸೂರ್ಯಕುಮಾರ್ ಯಾದವ್​ ಮತ್ತು ಹನುಮ ವಿಹಾರಿಯಂತಹ ಯುವ ಆಟಗಾರರು ರಹಾನೆ ಸ್ಥಾನವನ್ನು ತುಂಬಲು ಲಿಸ್ಟ್​ನಲ್ಲಿದ್ದಾರೆ.

ಇಶಾಂತ್​ ಶರ್ಮಾ ಆಯ್ಕೆ ಅನುಮಾನ

ಇಂಗ್ಲೆಂಡ್​ ಪ್ರವಾಸದಿಂದ ಲಯ ಕಳೆದುಕೊಂಡಿರುವ 105 ಟೆಸ್ಟ್​​ ಪಂದ್ಯಗಳಿಂದ 311 ವಿಕೆಟ್ ಪಡೆದಿರುವ ಬೌಲರ್​ ಇಶಾಂತ್ ಶರ್ಮಾ ಮುಂಬರುವ ಪ್ರವಾಸದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿಲ್ಲ ಎಂದು ಹಲವಾರು ಕ್ರಿಕೆಟ್​ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಸಿಕ್ಕ ಅವಕಾಶದಲ್ಲೆಲ್ಲಾ ಅದ್ಭುತ ಪ್ರದರ್ಶನ ತೋರುತ್ತಿರುವ ಮೊಹಮ್ಮದ್ ಸಿರಾಜ್​ರನ್ನು ಬೆಂಚ್​ ಕಾಯಿಸುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ವಿದೇಶಿ ಪ್ರವಾಸದಲ್ಲಿ ಜಸ್​ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್ ಶಮಿ ಜೊತೆ ಸಿರಾಜ್​ ಪ್ರಮುಖ ಆಯ್ಕೆ ಎನ್ನಲಾಗುತ್ತಿದೆ.

ಮತ್ತೊಬ್ಬ ಅನುಭವಿ ಉಮೇಶ್ ಯಾದವ್​ ನಾಲ್ಕು ವೇಗಿಗಳೊಂದಿಗೆ ಕಣಕ್ಕಿಳಿಯುವ ಯೋಜನೆಯಲ್ಲಿ ಅತ್ಯುತ್ತಮ ಆಯ್ಕೆಯಲ್ಲದಿದ್ದರೂ ಇಶಾಂತ್ ಶರ್ಮಾ ಅವರಿಗಿಂತ ಉತ್ತಮ, ಅದರಲ್ಲೂ ಪ್ರಸ್ತುತ ಉತ್ತಮ ಫಾರ್ಮ್​ನಲ್ಲೂ ಇದ್ದಾರೆ. ಹಾಗಾಗಿ ಫಾರ್ಮ್​ನಲ್ಲಿಲ್ಲದ ಇಶಾಂತ್ ಬದಲು ಪ್ರಸಿಧ್ ಕೃಷ್ಣ, ಆವೇಶ್ ಖಾನ್ ಅಂತಹ ಯುವಕರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ.

ಇಷ್ಟೇ ಅಲ್ಲದೆ 3ನೇ ಕ್ರಮಾಂಕಕ್ಕೆ ಬ್ಯಾಕ್​ ಅಪ್​ ಆಟಗಾರರ ಆಯ್ಕೆ ಮತ್ತು ಹಿರಿಯ ಆರಂಭಿಕ ಶಿಖರ್​ ಧವನ್​ ಅವರ ಏಕದಿನ ತಂಡಕ್ಕೆ ಕಮ್​ಬ್ಯಾಕ್​ ಬಗ್ಗೆಯೂ ಮುಂದಿನ ವಾರದ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಸಂಯೋಗದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆಯಾಗಲಿದೆ.

ಇದನ್ನೂ ಓದಿ:ಇದು ನನ್ನ ಕನಸಿನ ವರ್ಷ, ಆದ್ರೂ ಮತ್ತಷ್ಟು ಸುಧಾರಣೆಯ ಗುರಿಯಿದೆ: ಅಕ್ಷರ್ ಪಟೇಲ್

ABOUT THE AUTHOR

...view details