ಕರ್ನಾಟಕ

karnataka

ETV Bharat / sports

Vijay Hazare trophy: ಮಹಾರಾಷ್ಟ್ರ ತಂಡಕ್ಕೆ ಋತುರಾಜ್ ಗಾಯಕ್ವಾಡ್​ ನಾಯಕ - ವಿಜಯ ಹಜಾರೆ ಟ್ರೋಫಿ 2021-22

ಐಪಿಎಲ್ 2022ರ ರಿಟೈನ್​ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಋತುರಾಜ್​ರನ್ನು 6 ಕೋಟಿ ರೂಪಾಯಿಗೆ ರಿಟೈನ್​ ಮಾಡಿಕೊಂಡಿತ್ತು. 2021ರ ಆವೃತ್ತಿಯ ಐಪಿಎಲ್​ನಲ್ಲಿ ಗರಿಷ್ಠ ರನ್​ ಬಾರಿಸಿ ಆರೆಂಜ್​​ ಕ್ಯಾಪ್​ ಪಡೆದಿದ್ದ ಋತುರಾಜ್​ ಕಳೆದ ತಿಂಗಳು ಮುಗಿದ ಸೈಯದ್ ಮುಷ್ತಾಕ್ ಅಲಿ ಟಿ20ಯಲ್ಲೂ ಮಹಾರಾಷ್ಟ್ರ ತಂಡವನ್ನು ಮುನ್ನಡೆಸಿದ್ದರು.

uturaj Gaikwad to lead Maharashtra in Vijay Hazare
ಮಹಾರಾಷ್ಟ್ರ ತಂಡಕ್ಕೆ ಋತುರಾಜ್ ಗಾಯಕ್ವಾಡ್​ ನಾಯಕ

By

Published : Dec 7, 2021, 7:26 PM IST

ಮುಂಬೈ: ಯುವ ಆರಂಭಿಕ ಬ್ಯಾಟರ್​ ಋತುರಾಜ್​ ಗಾಯಕ್ವಾಡ್​ ಬುಧವಾರದಿಂದ ಆರಂಭವಾಗಲಿರುವ ವಿಜಯ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡವನ್ನು ಮುನ್ನಡೆಸಲಿದ್ದಾರೆ. ರಾಹುಲ್ ತ್ರಿಪಾಠಿ ಉನಾಯಕನಾಗಿ ಆಯ್ಕೆಯಾಗಿದ್ದಾರೆ.

ಐಪಿಎಲ್ 2022ರ ರಿಟೈನ್​ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಋತುರಾಜ್​ರನ್ನು 6 ಕೋಟಿ ರೂಪಾಯಿಗೆ ರಿಟೈನ್​ ಮಾಡಿಕೊಂಡಿತ್ತು. 2021ರ ಆವೃತ್ತಿಯ ಐಪಿಎಲ್​​ನಲ್ಲಿ ಗರಿಷ್ಠ ರನ್​ ಬಾರಿಸಿ ಆರೆಂಜ್​​ ಕ್ಯಾಪ್​ ಪಡೆದಿದ್ದ ಋತುರಾಜ್​ ಕಳೆದ ತಿಂಗಳು ಮುಗಿದ ಸೈಯದ್ ಮುಷ್ತಾಕ್ ಅಲಿ ಟಿ20ಯಲ್ಲೂ ಮಹಾರಾಷ್ಟ್ರ ತಂಡವನ್ನು ಮುನ್ನಡೆಸಿದ್ದರು.

ಒಟ್ಟು 20 ಸದಸ್ಯರ ತಂಡವನ್ನು ಮಹಾರಾಷ್ಟ್ರ ಕ್ರಿಕೆಟ್​ ಮಂಡಳಿ ಘೋಷಿಸಿದೆ. ಸೈಯದ್ ಮುಷ್ತಾಕ್ ಅಲಿಯಲ್ಲಿ ಅವಕಾಶ ಪಡೆದಿದ್ದ ಹಿರಿಯ ಬ್ಯಾಟರ್ ಕೇದಾರ್​ ಜಾಧವ್​ 50 ಓವರ್​ಗಳ ಟೂರ್ನಿಯಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಮಹಾರಾಷ್ಟ್ರ ತಂಡ ಡಿ ಗುಂಪಿನಲ್ಲಿ ಮಧ್ಯ ಪ್ರದೇಶ, ಛತ್ತೀಸ್​ಗಡ, ಉತ್ತರಾಖಂಡ ಮತ್ತು ಚಂಢೀಗಡ ತಂಡಗಳ ವಿರುದ್ಧ ಲೀಗ್​ ಹಂತದಲ್ಲಿ ಸೆಣಸಲಿದೆ.

ಟೂರ್ನಿ ಡಿಸೆಂಬರ್​ 8 ಬುಧವಾರದಿಂದ ಆರಂಭವಾಗಲಿದ್ದು, ಮಹಾರಾಷ್ಟ್ರ ತನ್ನ ಮೊದಲ ಪಂದ್ಯದಲ್ಲಿ ಮಧ್ಯ ಪ್ರದೇಶವನ್ನು ಎದುರಿಸಲಿದೆ.

ಋತುರಾಜ್ ಗಾಯಕ್ವಾಡ್ (ನಾಯಕ), ರಾಹುಲ್ ತ್ರಿಪಾಠಿ (ಉಪನಾಯಕ), ಯಶ್ ನಹರ್, ನೌಶಾದ್ ಶೇಖ್, ಅಜೀಮ್ ಕಾಜಿ, ಅಂಕೀತ್ ಬವಾನೆ, ಶಂಶುಜಾಮ ಕಾಜಿ, ಮುಖೇಶ್ ಚೌಧರಿ, ಪ್ರದೀಪ್ ದಾಧೆ, ಮನೋಜ್ ಇಂಗಳೆ, ಆಶಯ ಪಾಲ್ಕರ್, ದಿವ್ಯಾಂಗ್ ಹಿಂಗಾನೇಕರ್, ಜಗದೀಶ್ ಝೋಪ್, ಫುಲ್ಪಗರ್, ಅವಧೂತ್ ದಾಂಡೇಕರ್, ತರಂಜಿತ್ ಸಿಂಗ್ ಧಿಲ್ಲೋನ್, ಸಿದ್ಧೇಶ್ ವೀರ್, ಯಶ್ ಕ್ಷೀರಸಾಗರ್, ಪವನ್ ಶಾ, ಧನರಾಜ್ ಪರದೇಶಿ.

ಇದನ್ನೂ ಓದಿ:ಮುಂಬರುವ ಐಪಿಎಲ್​ನಲ್ಲಿ ಪ್ರಸಿದ್ಧ ತಂಡವೊಂದರಲ್ಲಿ ವಿಶೇಷ ಜವಾಬ್ದಾರಿ ನಿರ್ವಹಿಸಲಿದ್ದಾರೆ ಹರ್ಭಜನ್​

ABOUT THE AUTHOR

...view details