ಮಹಿಳಾ ಕ್ರಿಕೆಟ್ನಲ್ಲಿ ಒಂದಿಲ್ಲ ಒಂದು ವಿವಾದ ಭುಗಿಲೇಳುತ್ತಲೇ ಇದೆ. ಕೆಲ ದಿನಗಳ ಹಿಂದೆ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ದೀಪ್ತಿ ಶರ್ಮಾರ ಮಂಕಂಡಿಂಗ್ ಭಾರೀ ಸದ್ದು ಮಾಡಿದ್ದರೆ, ಈಗ ನಡೆಯುತ್ತಿರುವ ಏಷ್ಯಾ ಕಪ್ನಲ್ಲಿ ಪೂಜಾ ವಸ್ತ್ರಕಾರ್ ಅವರ ರನ್ ಔಟ್, ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುವರಾಜ್ ಸಿಂಗ್ ಸೇರಿದಂತೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಶಾಕ್ ವ್ಯಕ್ತಪಡಿಸಿದ್ದಾರೆ.
ನಿನ್ನೆ ಶ್ರೀಲಂಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ 41 ರನ್ಗಳ ಗೆಲುವು ಸಾಧಿಸಿದೆ. ಆದರೆ, ಪಂದ್ಯದ ವೇಳೆ ಮೂರನೇ ಅಂಪೈರ್ ತಪ್ಪು ನಿರ್ಧಾರದಿಂದ ಭಾರತದ ಪೂಜಾ ವಸ್ತ್ರಕಾರ್ ಮೈದಾನದಿಂದ ಹೊರನಡೆಯಬೇಕಾಯಿತು.
ಪಂದ್ಯದಲ್ಲಿ ಪೂಜಾ ವಸ್ತ್ರಕಾರ್ ಒಂಟಿ ರನ್ಗಾಗಿ ಓಡುತ್ತಿದ್ದಾಗ ಶ್ರೀಲಂಕಾ ವಿಕೆಟ್ ಕೀಪರ್ ರನೌಟ್ಗೆ ಯತ್ನಿಸಿದರು. ಪೂಜಾ ಬ್ಯಾಟ್ ಕ್ರೀಸ್ ಅಂಚಿನಲ್ಲಿ ದಾಟುತ್ತಿದ್ದಾಗ ಬೇಲ್ ಎಗರಿವೆ. ತೀರ್ಪು ನಿರ್ಣಯಿಸಲು ಮೂರನೇ ಅಂಪೈರ್ ಪರಿಶೀಲಿಸಿದಾಗ ಬ್ಯಾಟ್ ಕ್ರೀಸ್ನಲ್ಲಿರುವುದು ಗೋಚರವಾಯಿತು.