ಕರ್ನಾಟಕ

karnataka

ETV Bharat / sports

ಐಪಿಎಲ್‌ 2021: ಆರ್‌ಆರ್‌ ವಿರುದ್ಧ ಗೆಲುವಿನ ನಗೆ ಬೀರಿದ ಸನ್‌ ರೈಸರ್ಸ್‌

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆರ್‌ ಆರ್‌ ನೀಡಿದ 164 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದೆ ವಿಲಿಯಮ್ಸನ್ ಪಡೆ 18.3 ಓವರ್‌ಗಳಲ್ಲಿ ಜಯದ ನಗೆ ಬೀರಿದೆ.

By

Published : Sep 27, 2021, 11:58 PM IST

RR vs SRH: Sunrisers Hyderabad won by 7 wkts
ಐಪಿಎಲ್‌ 2021: ಆರ್‌ಆರ್‌ ವಿರುದ್ಧ ಗೆಲುವಿನ ನಗೆ ಬೀರಿದ ಸನ್‌ ರೈಸರ್ಸ್‌

ದುಬೈ:ಸತತ ಸೋಲುಗಳಿಂದ ಕಂಗೆಟ್ಟಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ಕೊನೆಗೂ ಗೆಲುವಿನ ನಗೆ ಬೀರಿದೆ. ಆರಂಭಿಕ ಜೇಸನ್‌ ರಾಯ್‌ ಹಾಗೂ ನಾಯಕ ಕೇನ್‌ ವಿಲಿಯಮ್ಸನ್ ಅರ್ಧ ಶತಕಗಳ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಎಸ್‌ಆರ್‌ಹೆಚ್‌ ಪರ ರಾಯ್‌ 42 ಎಸೆತಗಳಿಂದ 60 ರನ್‌ ಸಿಡಿಸಿದರೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ವಿಲಿಯಮ್ಸನ್‌ 41 ಎಸೆತಗಳಿಂದ 51 ರನ್‌ಗಳ ಗಳಿಸಿದರು. ವೃದ್ಧಿಮಾನ್‌ ಸಹಾ (18), ಪ್ರಿಯಂ ಗರ್ಗ್‌ (0) ಹಾಗೂ ಅಭಿಷೇಕ್‌ ಶರ್ಮಾ 16 ಎಸೆತೆಗಳಿಂದ 1 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 21 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರ್‌ಆರ್‌ ಪರ ಮುಸ್ತಫಿಜುರ್ ರೆಹಮಾನ್, ಮಹಿಪಾಲ್ ಲೊಮರ್, ಚೇತನ್ ಸಕಾರಿಯಾ ತಲಾ ಒಂದು ವಿಕೆಟ್ ಪಡೆದರು. ಪ್ಲೇ ಆಫ್ ಪ್ರವೇಶದ ಸಾಧ್ಯತೆ ಇಲ್ಲದಿದ್ದರೂ ಸನ್ ರೈಸರ್ಸ್ ತಂಡಕ್ಕೆ ಇದು ಸಮಾಧಾನಕರ ಗೆಲುವಾಗಿದೆ.

ನಾಯಕ ಸ್ಯಾಮ್ಸನ್‌ ಸ್ಫೋಟಕ ಬ್ಯಾಟಿಂಗ್‌

ಇದಕ್ಕೂ ಮುನ್ನ ಟಾಸ್‌ ಗೆದ್ದು ಬ್ಯಾಟಿಂಗ್‌ಗೆ ಇಳಿದ ರಾಯಲ್ಸ್‌ ಕೇವಲ 11 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ಲೆವಿಸ್‌ ವಿಕೆಟ್‌ ಕಳೆದುಕೊಂಡು ಮೊದಲ ಆಘಾತ ಅನುಭವಿಸಿತು. ಬಳಿಕ ಜೈಸ್ವಾಲ್‌ ಜೊತೆ ಗೂಡಿದ ನಾಯಕ ಸಂಜು ಸ್ಯಾಮ್ಸನ್‌ ಸ್ಫೋಟಕ ಆಟದ ಮೂಲಕ ಎಸ್‌ಆರ್‌ಹೆಚ್‌ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದರು.

ಸ್ಯಾಮ್ಸನ್‌ 57 ಎಸೆತಗಳಿಂದ 7 ಬೌಂಡರಿ, 3 ಭರ್ಜರಿ ಸಿಕ್ಸರ್‌ ಸೇರಿ 82 ರನ್‌ಗಳ ಗಳಿಸಿ ತಂಡ ಉತ್ತಮ ರನ್ ಪೇರಿಸಲು ನೆರವಾದರು. ಎಸ್‌ ಕೌಲ್‌ ಬೌಲಿಂಗ್‌ನಲ್ಲಿ ಜೇಸನ್‌ ಹೋಲ್ಡರ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಆರಂಭಿಕ ಜೈಸ್ವಾಲ್‌ 23 ಎಸೆತಗಳಿಂದ 5 ಬೌಂಡರಿ, 1 ಸಿಕ್ಸರ್‌ ಸೇರಿ 36 ರನ್‌ಗಳಿಸಿದರು. ಮಹಿಪಾಲ್‌ ಲೊಮರ್ 29 ರನ್‌ ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು. ಎಸ್‌ಆರ್‌ಹೆಚ್‌ ಪರ ಎಸ್‌.ಕೌಲ್‌ 2 ವಿಕೆಟ್‌ ಪಡೆದರೆ, ಸಂದೀಪ್‌ ಶರ್ಮಾ, ಭುವನೇಶ್ವರ್‌ಕುಮಾರ್‌ ಹಾಗೂ ರಷೀದ್‌ ಖಾನ್‌ ತಲಾ 1 ವಿಕೆಟ್‌ ಪಡೆದರು.

ABOUT THE AUTHOR

...view details