ಅಬು ಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿಧಾನಗತಿ ಬೌಲಿಂಗ್ ದರ ಕಾಯ್ದುಕೊಂಡ ರಾಜಸ್ಥಾನ್ ರಾಯಲ್ಸ್ಗೆ ಐಪಿಎಲ್ ಮಂಡಳಿ ಭಾರಿ ಮೊತ್ತದ ದಂಡ ಹಾಕಿದೆ.
ರಾಜಸ್ಥಾನ್ ತಂಡ ಈ ಆವೃತ್ತಿಯಲ್ಲಿ 2ನೇ ಬಾರಿ ನಿಧಾನಗತಿ ಓವರ್ ದರ ಕಾಯ್ದುಕೊಂಡಿದ್ದಕ್ಕೆ ಐಪಿಎಲ್ ನಿಯಮಾವಳಿಗಳನ್ವಯ ನಾಯಕ ಸಂಜು ಸಾಮ್ಸನ್ಗೆ 24 ಲಕ್ಷ ರೂ ದಂಡ ವಿಧಿಸಲಾಗಿದೆ. ಇನ್ನುಳಿದ ಆಟಗಾರರಿಗೆ ತಲಾ 6 ಲಕ್ಷ ರೂ ಅಥವಾ ಪಂದ್ಯದ ಸಂಭಾವನೆಯ ಶೇ. 25ರಷ್ಟನ್ನು ದಂಡ ವಿಧಿಸಲಾಗಿದೆ.
ರಾಜಸ್ಥಾನ್ ರಾಯಲ್ಸ್ ಯುಎಇಯಲ್ಲಿ ಹಂತದ ಐಪಿಎಲ್ನಲ್ಲಿ 2ನೇ ಬಾರಿ ಈ ತಪ್ಪನ್ನೆಸಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ನಿಧಾನಗತಿ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಸಾಮ್ಸನ್ಗೆ 12 ಲಕ್ಷ ರೂ ದಂಡ ಹಾಕಲಾಗಿತ್ತು.