ದುಬೈ :ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್ ಸೋಮವಾರ ನಡೆದ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದಲ್ಲದೆ ಐಪಿಎಲ್ನಲ್ಲಿ 3000 ರನ್ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ 19ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಡದಲ್ಲಿ ನಡೆದ ಪಂದ್ಯದಲ್ಲಿ ಸಂಜು ಸಾಮ್ಸನ್ 57 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 82 ರನ್ಗಳಿಸಿದರು. ಇವರ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 164 ರನ್ ಗಳಿಸಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 15ನೇ ಅರ್ಧಶತಕ ಸಿಡಿಸಿದ ಸಾಮ್ಸನ್ ಇದೇ ಸಂದರ್ಭದಲ್ಲಿ ಶಿಖರ್ ಧವನ್ರನ್ನು (430) ರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಪಡೆದುಕೊಂಡರು.
ಸಾಮ್ಸನ್ 117 ಐಪಿಎಲ್ ಪಂದ್ಯಗಳಿಂದ 29.87 ಸರಾಸರಿಯಲ್ಲಿ 3017 ರನ್ಗಳಿಸಿದ್ದಾರೆ. ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ 6185 ರನ್ಗಳಿಸಿ ಐಪಿಎಲ್ನಲ್ಲಿ ಗರಿಷ್ಠ ರನ್ಗಳಿಸಿದ ಬ್ಯಾಟರ್ ಆಗಿದ್ದಾರೆ. ನಂತರ ಶಿಖರ್ ಧವನ್(5627), ರೋಹಿತ್ ಶರ್ಮಾ(5556), ಸುರೇಶ್ ರೈನಾ(5523) ಮತ್ತು ಡೇವಿಡ್ ವಾರ್ನರ್(5449) ರನ್ಗಳಿಸಿ ಮೊದಲ 5 ಸ್ಥಾನದಲ್ಲಿದ್ದಾರೆ.
ಇದನ್ನು ಓದಿ:ಕೊಹ್ಲಿ ಮುಡಿಗೆ ಮತ್ತೊಂದು ಗರಿ: ಟಿ20 ಕ್ರಿಕೆಟ್ನಲ್ಲಿ 10,000 ರನ್ ಪೂರೈಸಿದ ಮೊದಲ ಭಾರತೀಯ