ಶಾರ್ಜಾ:ಪ್ಲೇ ಆಫ್ ಕನಸಿನಲ್ಲಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಆರ್ಸಿಬಿ ಈಗಾಗಲೆ 3ನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಹೊಸ್ತಿಲಲ್ಲಿದೆ. ಇಂದಿನ ಪಂದ್ಯವನ್ನು ಗೆದ್ದರೆ, ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಆರ್ಸಿಬಿ 11 ಪಂದ್ಯಗಳಿಂದ 7 ಜಯ ಮತ್ತು 4 ಸೋಲಿನೊಂದಿಗೆ 14 ಅಂಕ ಪಡೆದುಕೊಂಡಿದೆ. ಈ ಪಂದ್ಯವಲ್ಲದೆ ಇನ್ನೂ 2 ಪಂದ್ಯಗಳಿದ್ದು, ಲೀಗ್ನಲ್ಲಿ ಮೊದಲೆರಡು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ.
ಇತ್ತ ಪಂಜಾಬ್ ಕಿಂಗ್ಸ್ ತಂಡ ಆಡಿರುವ 12 ಪಂದ್ಯಗಳಲ್ಲಿ 5 ಗೆಲುವು ಮತ್ತು 7 ಸೋಲು ಕಂಡು 5ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಮಣಿಸಿದರೆ ಕೆಕೆಆರ್ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಲಗ್ಗೆಯಿಡಲಿದೆ. ಒಂದು ವೇಳೆ ಸೋಲು ಕಂಡರೆ 2021ರ ಐಪಿಎಲ್ನಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಲಿದೆ.
ಇಂದಿನ ಪಂದ್ಯದಲ್ಲಿ ಪಂಜಾಬ್ ತಂಡ ಮೂರು ಬದಲಾವಣೆ ಮಾಡಿಕೊಂಡಿದೆ. ಗಾಯಗೊಂಡಿರುವ ಫ್ಯಾಬಿಯನ್ ಅಲೆನ್ ಬದಲಿಗೆ ಹರ್ಪ್ರೀತ್ ಬ್ರಾರ್, ದೀಪಕ್ ಹೂಡ ಬದಲಿಗೆ ಸರ್ಫರಾಜ್ ಖಾನ್ ಮತ್ತು ನೇಥನ್ ಎಲ್ಲಿಸ್ ಬದಲಿಗೆ ಮೊಯಿಸಸ್ ಹೆನ್ರಿಕ್ಸ್ಗೆ ಅವಕಾಶ ನೀಡಿದೆ.