ಮುಂಬೈ:ಮೂರು ಪಂದ್ಯಗಳಲ್ಲಿ ಸೋತಿರುವ ಆರ್ಸಿಬಿಗಿಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇಂದಿನ ಯುಪಿ ವಾರಿಯರ್ಸ್ ಎದುರಿನ ಹಣಾಹಣಿಯಲ್ಲಿ ಸೋತರೆ ತಂಡ ಬಹುತೇಕ ಲೀಗ್ನಿಂದ ಹೊರಗುಳಿದಂತೆ. ಡು ಆರ್ ಡೈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿದೆ. ಯುಪಿ ವಾರಿಯರ್ಸ್ ತಂಡದ ಶಬ್ನಿಮ್ ಇಸ್ಮಾಯಿಲ್ ಬದಲಾಗಿ ಗ್ರೇಸ್ ಹ್ಯಾರಿಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ತಂಡ:ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಎರಿನ್ ಬರ್ನ್ಸ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಸಹನಾ ಪವಾರ್, ಕೋಮಲ್ ಝಂಜಾದ್, ರೇಣುಕಾ ಠಾಕೂರ್ ಸಿಂಗ್
ಯುಪಿ ವಾರಿಯರ್ಸ್ ಆಡುವ ತಂಡ:ಅಲಿಸ್ಸಾ ಹೀಲಿ (ನಾಯಕಿ/ವಿಕೆಟ್ ಕೀಪರ್), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್
ಒಂದೇ ಪಿಚ್ನಲ್ಲಿ ಸತತ ಸೋಲು: ಬ್ಯಾಟಿಂಗ್ನಲ್ಲಿ ಸಾಧಾರಣ ಪ್ರದರ್ಶನ ನೀಡುತ್ತಿರುವ ಆರ್ಸಿಬಿ ವನಿತೆಯರು, ಫೀಲ್ಡಿಂಗ್ ಮತ್ತು ಬೌಲಿಂಗ್ನಲ್ಲಿ ವಿಫಲರಾಗುತ್ತಿದ್ದಾರೆ. ಮೂರು ಪಂದ್ಯದಲ್ಲಿ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇಂದಿನ ಪಂದ್ಯದ ಮೂಲಕ ಎಲ್ಲಾ ತಂಡದೊಂದಿಗೆ ಪ್ರಥಮ ಮುಖಾಮುಖಿ ಮುಕ್ತಾಯವಾಗಲಿದೆ. ಇಂದಿನಿಂದ ಪ್ರತಿ ಪಂದ್ಯವನ್ನು ಗೆದ್ದರೆ ಆರ್ಸಿಬಿಗೆ ಲೀಗ್ನ ಕ್ವಾಲಿಪೈಯರ್ ಪಂದ್ಯ ಆಡುವ ಅವಕಾಶ ಸಿಗಲಿದೆ.
ಗುಜರಾತ್ ಮೇಲೂ ವೈಫಲ್ಯ:ಆರ್ಸಿಬಿ ಮತ್ತು ಗುಜರಾತ್ ಜೈಂಟ್ಸ್ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದವು. ಮಾರ್ಚ್ 8ರಂದು ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ಸಹ ಬೆಂಗಳೂರು 11 ರನ್ಗಳಿಂದ ಸೋಲನುಭವಿಸಿತು. ಗುಜರಾತ್ ನೀಡಿದ್ದ 201 ರನ್ಗಳನ್ನು ಪೂರೈಸುವಲ್ಲಿ ಮಂಧಾನ ಪಡೆ ಮತ್ತೆ ಎಡವಿತು. ಮೊದಲ ಪಂದ್ಯದಿಂದ ಮಂಧಾನ ಹೇಳುತ್ತಾ ಬರುತ್ತಿರುವಂತೆ ತಂಡದಿಂದ ಬೃಹತ್ ಇನ್ನಿಂಗ್ಸ್ ಆಡದಿರುವುದು ತಂಡದ ಸೋಲಿಗೆ ಕಾರಣವಾಗುತ್ತಿದೆ. ಕೇವಲ 20, 30 ರನ್ಗಳ ಕೊಡುಗೆ ಬ್ಯಾಟರ್ಗಳಿಂದ ಬರುತ್ತಿದೆ.
ಡೆಲ್ಲಿ ವಿರುದ್ಧ ಬೌಲಿಂಗ್ ವೈಫಲ್ಯ:ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳು ಹೆಚ್ಚಿನ ರನ್ ಬಿಟ್ಟುಕೊಟ್ಟು 223 ರನ್ ಗುರಿ ಪಡೆದುಕೊಂಡಿದ್ದರು. ಇದು ಮಹಿಳಾ ಕ್ರಿಕೆಟ್ನಲ್ಲಿ ಗಳಿಸಿದ 2ನೇ ಹೆಚ್ಚಿನ ರನ್ ಎಂಬ ದಾಖಲೆ ನಿರ್ಮಾಣವಾಗಿತ್ತು. ಈ ರನ್ ಬೆನ್ನಟ್ಟಿದ ಆರ್ಸಿಬಿ 60 ರನ್ಗಳಿಂದ ಸೋಲನುಭವಿಸಿತ್ತು.
ಮುಂಬೈ ಎದುರು 9 ವಿಕೆಟ್ಗಳ ಸೋಲು:ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಎರಡನೇ ಪಂದ್ಯವನನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ 9 ವಿಕೆಟ್ಗಳ ಸೋಲನುಭವಿಸಿತ್ತು. ಆರ್ಸಿಬಿ ಕೊಟ್ಟಿದ್ದ 156 ರನ್ನಿನ ಗುರಿಯನ್ನು 14.4 ಬಾಲ್ನಲ್ಲಿ ಮುಂಬೈ ಗಳಿಸಿತ್ತು. ಈ ಮೂಲಕ ಮತ್ತೆ ಬೌಲಿಂಗ್ ವೈಫಲ್ಯವನ್ನು ಎದುರಿಸಿತ್ತು.
ಒಂದು ಸೋಲು ಕಂಡಿರುವ ಯುಪಿ:ಇಂದು ಯುಪಿ ವಾರಿಯರ್ಸ್ ತನ್ನಮೂರನೇ ಪಂದ್ಯವನ್ನು ಆಡುತ್ತಿದೆ. ಈ ವರಗೆ ಆಡಿರುವ ಎರಡು ಪಂದ್ಯದಲ್ಲಿ ಒಂದರಲ್ಲಿ ಗೆದ್ದು ಮತ್ತೊಂದರಲ್ಲಿ ಸೋತಿದೆ. ಗುಜರಾತ್ ಎದುರಿನ ಪಂದ್ಯದಲ್ಲಿ ಉತ್ತಮ ಫೈಟ್ನೀಡಿ 3 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಡೆಲ್ಲಿಯ ಬ್ಯಾಟಿಂಗ್ ಬಲದ ಮುಂದೆ ವಾರಿಯರ್ಸ್ ಮಣಿದಿದ್ದರು.
ಇದನ್ನೂ ಓದಿ:ಮಹಿಳಾ ಪ್ರೀಮಿಯರ್ ಲೀಗ್: ಪ್ಲೇ ಆಫ್ ಹಂತ ತಲುಪುತ್ತಾ RCB? ಹೀಗಿದೆ ಲೆಕ್ಕಾಚಾರ