ಕರ್ನಾಟಕ

karnataka

ETV Bharat / sports

ಟಾಸ್​ ಗೆದ್ದ ಗುಜರಾತ್​ ಬ್ಯಾಟಿಂಗ್​ ಆಯ್ಕೆ: ಯುಪಿ ಗೆಲುವಿನಿಂದ ಕಮರುವುದೇ ಪ್ಲೇ-ಆಫ್​ ಕನಸು?

ವುಮೆನ್ಸ್​ ಪ್ರೀಮಿಯರ್​ ಲೀಗ್​ನ 16ನೇ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್ ಮತ್ತು ಆರ್​ಸಿಬಿ ಮುಖಾಮುಖಿಯಾಗುತ್ತಿದ್ದು ಟಾಸ್​ ಗೆದ್ದ ಸ್ನೇಹಾ ರಾಣಾ ಬ್ಯಾಟ್​ ಮಾಡಲು ಮುಂದಾಗಿದ್ದಾರೆ.

Royal Challengers Bangalore Women vs Gujarat Giants
ಟಾಸ್​ ಗೆದ್ದ ಗುಜರಾತ್​ ಬ್ಯಾಟಿಂಗ್​ ಆಯ್ಕೆ: ಯುಪಿ ಗೆಲುವಿನಿಂದ ಕಮರಿದ ಪ್ಲೇ-ಆಫ್​ ಕನಸು

By

Published : Mar 18, 2023, 7:17 PM IST

Updated : Mar 18, 2023, 7:56 PM IST

ಮುಂಬೈ:ಇಂದಿನ ಎರಡನೇ ಮುಖಾಮುಖಿಯಲ್ಲಿ ಬೆಂಗಳೂರು ತಂಡ ಗುಜರಾತ್​ ಜೈಂಟ್ಸ್​ನ್ನು ಎದುರಿಸುತ್ತಿದ್ದು,ಎರಡೂ ತಂಡಕ್ಕೆ ಪ್ಲೇ-ಆಫ್​ ಪ್ರವೇಶಿಸಲು ಮಹತ್ತರ ಪಂದ್ಯವಾಗಿದೆ. ಟಾಸ್​ ಗೆದ್ದ ಸ್ನೇಹಾ ರಾಣಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರ್​ಸಿಬಿಯಲ್ಲಿ ಒಂದು ಬದಲಾವಣೆ ಆಗಿದ್ದು, ರೇಣುಕಾ ಬದಲಾಗಿ ಪ್ರೀತಿ ಬೋಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಗುಜರಾತ್ ಜೈಂಟ್ಸ್ಆಡುವ ತಂಡ: ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ(ವಿಕೆಟ್​ ಕೀಪರ್​), ಕಿಮ್ ಗಾರ್ತ್, ಸ್ನೇಹ ರಾಣಾ(ನಾಯಕಿ), ತನುಜಾ ಕನ್ವರ್, ಅಶ್ವನಿ ಕುಮಾರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ತಂಡ: ಸೋಫಿ ಡಿವೈನ್, ಸ್ಮೃತಿ ಮಂಧಾನ(ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್​ ಕೀಪರ್​), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್

ಟಾಸ್​ ನಂತರ ಮಾತನಾಡಿದ ಗುಜರಾತ್​ ಕ್ಯಾಪ್ಟನ್​ ಸ್ನೇಹ ರಾಣಾ, "ನಾವು ಮೊದಲು ಬ್ಯಾಟ್ ಮಾಡುತ್ತೇವೆ. ಈ ಹಿಂದೆ ಆಡಿದ ಪಂದ್ಯಗಳಲ್ಲಿ ಮೇಲ್ಮೈ ನಿಧಾನವಾಗಿದೆ. ಡೆಲ್ಲಿ ವಿರುದ್ಧದ ಗೆಲುವಿನ ಸಕಾರಾತ್ಮಕ ಮನೋಭಾವದಿಂದ ಇಂದಿನ ಆಟವನ್ನು ಮುಂದುವರೆಸುತ್ತೇವೆ. ಪಿಚ್‌ಗಳು ಬದಲಾಗಬಹುದು ಆದರೆ 160-165 ಗುರಿ ನೀಡುವ ಬಗ್ಗೆ ಚಿಂತಿಸುತ್ತೇವೆ. ತಂಡದಲ್ಲಿ ಒಂದು ಬದಲಾವಣೆ ಇದ್ದು ಮಾನ್ಸಿ ಸ್ಥಾನದಲ್ಲಿ ಮೇಘನಾ ಆಡಲಿದ್ದಾರೆ" ಎಂದರು

ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಟಾಸ್​ ಗೆಲುವಿ ಪರಿಣಾಮದ ಬಗ್ಗೆ ಮಾತನಾಡಿ, "ಟಾಸ್‌ಗಳು 50-50 ಅಥವಾ 60-40 ಎಂದು ನನಗೆ ಗೊತ್ತಿಲ್ಲ. ನಾವು ಪಂದ್ಯಗಳನ್ನು ಗೆಲ್ಲಬಹುದಾದರೆ ಟಾಸ್‌ಗಳನ್ನು ಕಳೆದುಕೊಳ್ಳಲು ಒಪ್ಪುವುದಿಲ್ಲ ಎಂದ ಅವರು, ಇಂದು ಮೊದಲು ಬೌಲಿಂಗ್​ ಮಾಡುವ ಚಿಂತನೆಯಲ್ಲೇ ಇದ್ದೆವು. ತಂಡ ಚೇಸಿಂಗ್​ನಲ್ಲಿ ಉತ್ತಮವಾಗಿ ಆಡುತ್ತದೆ. ಹೀಗಾಗಿ ನಾವು ಎರಡನೇ ಇನ್ನಿಂಗ್ಸ್​ ಬ್ಯಾಟಿಂಗ್​ ಬಯಸಿದ್ದೆವು. ರೇಣುಕಾ ಬದಲಾಗಿ ಪ್ರೀತಿ ಬೋಸ್ ಕಣಕ್ಕಿಳಿಯಲಿದ್ದಾರೆ ಎಂದರು.

ಎರಡು ತಂಡಕ್ಕೆ ಗೆಲುವಿನ ಬಲ:ಆರ್​ಸಿಬಿ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಇಂದಿನ ಪಂದ್ಯಕ್ಕೆ ಹೆಚ್ಚು ಹುರುಪು ತುಂಬಿದೆ. ಕನ್ನಿಕಾ ಅಹುಜಾ ಆರ್​ಸಿಬಿಯ ಭರವಸೆ ಆಗಿದ್ದಾರೆ. ಎಲಿಸಾ ಪೆರಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅವರ ಆಲ್​ರೌಂಡ್​ ಪ್ರದರ್ಶನಕ್ಕೆ ಕನ್ನಿಕಾ ಆಟ ಬಲ ನೀಡಲಿದೆ. ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್​ನ್ನು ಮಣಿಸಿದ ಗುಜರಾತ್​ ಅದೇ ಗುರುಪಿನಲ್ಲಿ ಕಣಕ್ಕಿಳಿದಿದೆ.

ಪ್ಲೇ-ಆಫ್​ ಹಾದಿ ಕಠಿಣ:ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ಮುಂಬೈ ಇಂಡಿಯನ್ಸ್​ನ್ನು 5 ವಿಕೆಟ್​ನಿಂದ ಸೋಲಿಸಿದ್ದು, ಗುಜರಾತ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ಪ್ಲೇ-ಆಫ್​ ಹಾದಿ ಕಠಿಣವಾಗಿಸಿದೆ. ಇಂದಿನ ಪಂದ್ಯ ಸೇರಿಸಿಕೊಂಡು ಬೃಹತ್​ ರನ್​ ರೇಟ್​ನ ಗೆಲುವನ್ನು ಎರಡೂ ತಂಡಗಳು ದಾಖಲಿಸಬೇಕಿದೆ. ಆರು ಪಂದ್ಯದಿಂದ ಮೂರನೇ ಗೆಲುವು ಕಂಡಿರುವ ಯುಪಿಗೆ ಪ್ಲೇ ಆಫ್​ ಹಾದಿ ಸರಳ ಇದೆ. ನಾಳೆ ಯುಪಿ ಗುಜರಾತ್​ ಮೇಲೆ ಗೆಲುವು ಸಾಧಿಸಿದರೆ ಪ್ಲೇ ಆಫ್​ ಪ್ರವೇಶ ಸಿಕ್ಕಂತೆ ಆಗುತ್ತದೆ.

ಇದನ್ನೂ ಓದಿ:ಮುಂಬೈ ಮಣಿಸಿದ ಯುಪಿ ವಾರಿಯರ್ಸ್​: ಕೌರ್​ ಪಡೆಗೆ ಪ್ರಥಮ ಸೋಲು

Last Updated : Mar 18, 2023, 7:56 PM IST

ABOUT THE AUTHOR

...view details