ಮುಂಬೈ: ದೇಶದೆಲ್ಲೆಡೆ ಹೋಳಿಯನ್ನು ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಈ ಆಚರಣೆಯಲ್ಲಿ ಎಲ್ಲಾ ಸೆಲೆಬ್ರೆಟಿಗಳೂ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಭರ್ಜರಿಯಾಗಿ ಹೋಳಿ ಆಡಿ ಸಂಭ್ರಮಿಸಿದೆ. ವಿದೇಶಿ ಆಟಗಾರರೊಂದಿಗೆ ಸೇರಿ ಬಣ್ಣದ ನೀರಿನಲ್ಲಿ ತಂಡದ ಆಟಗಾರು ಮಿಂದೆದಿದ್ದಾರೆ. ಸ್ಮೃತಿ ಮಂಧಾನ, ರಿಚಾ ಘೋಷ್, ಎಲ್ಲಿಸ್ ಪೆರಿ, ಸೋಫಿ ಡಿವೈನ್ ಮತ್ತು ಹೀದರ್ ನೈಟ್ ಬಣ್ಣ ಹಚ್ಚಿಕೊಳ್ಳುತ್ತಿರುವ ಫೋಟೋ ಮತ್ತು ಗ್ರೂಪ್ ಫೋಟೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಶೇರ್ ಮಾಡಿಕೊಂಡಿದ್ದು, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಶುಭಾಶಯ:ವುಮೆನ್ಸ್ ಪ್ರೀಮಿಯರ್ ಲೀಗ್ನ "ಯೇ ತೋ ಬಸ್ ಶುರುವಾತಿ ಹೈ" ಗೀತೆಯೊಂದಿಗೆ ಈ ವರ್ಷದ ಹೋಳಿಯನ್ನು ಸಂಭ್ರಮಿಸಿ ಎಂದು ಡಬ್ಲ್ಯೂಪಿಎಲ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಶುಭಾಶಯ ತಿಳಿಸಿದ್ದಾರೆ. ವಿಡಿಯೋದಲ್ಲಿ ಡಬ್ಲ್ಯೂಪಿಎಲ್ ಗೀತೆಯಲ್ಲಿ ಹಾಡಿದ ನೀತಿ ಮೋಹನ್ ಮತ್ತು ಹರ್ದೀಪ್ ಕೌರ್ ಕೂಡ ಕಾಣಿಸಿಕೊಂಡು ವಿಶ್ ಮಾಡಿದ್ದಾರೆ.
ಜೈಯ್ ಶಾ ಶುಭಾಶಯ:ವುಮೆನ್ ಪ್ರೀಮಿಯರ್ ಲೀಗ್ಗಾಗಿ ಮಾಡಲಾಗಿದ್ದ ವಿಶೇಷ ಕಾರ್ಟೂನ್ ಬಳಸಿ ಜಯ್ ಶಾ ವಿಶ್ ಮಾಡಿದ್ದಾರೆ. ಹೆಣ್ಣು ಹುಲಿಯ ಕಾರ್ಟೂನ್ ಇದಾಗಿದ್ದು, ಇದಕ್ಕೂ ಮೊದಲು ಡಬ್ಲ್ಯೂಪಿಎಲ್ ಪ್ರಮೋಷನ್ಗೆ ಈ ಕಾರ್ಟೂನ್ ಮಾಡಲಾಗಿತ್ತು. ಹೊಸ ಆರಂಭ ಈ ವರ್ಷದಿಂದ ಆಗಿದೆ ಎಲ್ಲರಿಗೂ ಹೋಳಿಯ ಶುಭಾಶಯ ಎಂದು ಜೈಯ್ ಶಾ ಟ್ವೀಟ್ ಮಾಡಿದ್ದಾರೆ.