ಕರ್ನಾಟಕ

karnataka

ETV Bharat / sports

2022ರ ಐಪಿಎಲ್​ ಮೆಗಾ ಹರಾಜು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ.. - ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಐಪಿಎಲ್ 2021ರ ಬಳಿಕ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದು, ಫ್ರಾಂಚೈಸಿಯು 2022ರ ಸೀಸನ್‌ಗೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ. ಮೂವರು ಆಟಗಾರರನ್ನು ಉಳಿಸಿಕೊಂಡ ಬಳಿಕ ಆರ್​ಸಿಬಿ ಬಳಿ 57 ಕೋಟಿ ರೂ. ಇತ್ತು.

Royal Challengers Bangalore squad after IPL 2022 mega auction
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

By

Published : Feb 14, 2022, 8:48 AM IST

ಬೆಂಗಳೂರು:2022ರ ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆ ಭಾನುವಾರ ಸಂಜೆ ಮುಕ್ತಾಯಗೊಂಡಿದ್ದು, ಹಲವು ಆಟಗಾರರು ಭಾರಿ ಮೊತ್ತಕ್ಕೆ ಬಿಕರಿಯಾದರೆ, ಮತ್ತೆ ಕೆಲ ಪ್ರಮುಖರು ಅನ್​ಸೋಲ್ಡ್​ ಆಗುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 19 ಆಟಗಾರರನ್ನು ತನ್ನೆಡೆ ಸೆಳೆದುಕೊಂಡಿದೆ.

ಚೊಚ್ಚಲ ಐಪಿಎಲ್​ ಟ್ರೋಫಿಗಾಗಿ ಕಾದಿರುವ ಆರ್​ಸಿಬಿಗೆ ಫಾಫ್ ಡು ಪ್ಲೆಸಿಸ್ (7 ಕೋಟಿ ರೂ.), ಹರ್ಷಲ್ ಪಟೇಲ್ (10.75 ಕೋಟಿ ರೂ.), ವನಿಂದು ಹಸರಂಗ (10.75 ಕೋಟಿ ರೂ.) ಸೇರಿದಂತೆ 19 ಆಟಗಾರರು ಸೇರ್ಪಡೆಯಾಗಿದ್ದಾರೆ. ಈ ಹಿಂದೆ ರಿಟೈನ್​ ಅವಕಾಶದಲ್ಲಿ ಆರ್​ಸಿಬಿಯು ಮಾಜಿ ನಾಯಕ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿತ್ತು.

ಇದನ್ನೂ ಓದಿ:ಲಖನೌ ಸೂಪರ್​ ಜೈಂಟ್ಸ್​ನಲ್ಲಿ ಕೆಎಲ್​ ರಾಹುಲ್​ಗೆ ಸಾಥ್​ ನೀಡಲಿದ್ದಾರೆ ಮತ್ತಿಬ್ಬರು ಕನ್ನಡಿಗರು

ಐಪಿಎಲ್ 2021ರ ಬಳಿಕ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದು, ಫ್ರಾಂಚೈಸಿಯು 2022ರ ಸೀಸನ್‌ಗೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ. ಮೂವರು ಆಟಗಾರರನ್ನು ಉಳಿಸಿಕೊಂಡ ಬಳಿಕ ಆರ್​ಸಿಬಿ ಬಳಿ 57 ಕೋಟಿ ರೂ. ಇತ್ತು.

ಆರ್​ಸಿಬಿ ತಂಡದ 22 ಆಟಗಾರರು:

ಉಳಿಸಿಕೊಂಡವರು:

  1. ವಿರಾಟ್ ಕೊಹ್ಲಿ - 15 ಕೋಟಿ
  2. ಗ್ಲೆನ್ ಮ್ಯಾಕ್ಸ್‌ವೆಲ್ - 11 ಕೋಟಿ
  3. ಮೊಹಮ್ಮದ್ ಸಿರಾಜ್ - 7 ಕೋಟಿ

ಹರಾಜಿನಲ್ಲಿ ಖರೀದಿಸಿದ ಆಟಗಾರರು:

  1. ಫಾಫ್ ಡು ಪ್ಲೆಸಿಸ್ - 7 ಕೋಟಿ ರೂ.
  2. ಹರ್ಷಲ್ ಪಟೇಲ್ - 10.75 ಕೋಟಿ
  3. ವನಿಂದು ಹಸರಂಗ - 10.75 ಕೋಟಿ
  4. ದಿನೇಶ್ ಕಾರ್ತಿಕ್ - 5.50 ಕೋಟಿ
  5. ಜೋಶ್ ಹ್ಯಾಜಲ್‌ವುಡ್ - 7.75 ಕೋಟಿ
  6. ಶಹಬಾಜ್ ಅಹಮದ್ - 2.4 ಕೋಟಿ
  7. ಅನುಜ್ ರಾವತ್ - 3.4 ಕೋಟಿ
  8. ಆಕಾಶ್ ದೀಪ್ - 20 ಲಕ್ಷ ರೂ.
  9. ಮಹಿಪಾಲ್ ಲೊಮ್ರೋರ್ - 95 ಲಕ್ಷ ರೂ.
  10. ಫಿನ್ ಅಲೆನ್ - 80 ಲಕ್ಷ ರೂ.
  11. ಶೆರ್ಫೇನ್ ರುದರ್‌ಫೋರ್ಡ್ - 1 ಕೋಟಿ ರೂ.
  12. ಜೇಸನ್ ಬೆಹ್ರೆಂಡಾರ್ಫ್ - 75 ಲಕ್ಷ ರೂ.
  13. ಸುಯಶ್ ಪ್ರಭುದೇಸಾಯಿ - 30 ಲಕ್ಷ ರೂ.
  14. ಚಾಮಾ ಮಿಲಿಂದ್ - 25 ಲಕ್ಷ ರೂ.
  15. ಅನೀಶ್ವರ್ ಗೌತಮ್ - 20 ಲಕ್ಷ ರೂ.
  16. ಕರಣ್​ ಶರ್ಮಾ - 50 ಲಕ್ಷ ರೂ.
  17. ಸಿದ್ಧಾರ್ಥ್ ಕೌಲ್ - 75 ಲಕ್ಷ ರೂ.
  18. ಲುವ್ನಿತ್ ಸಿಸೋಡಿಯಾ - 20 ಲಕ್ಷ ರೂ.
  19. ಡೇವಿಡ್ ವಿಲ್ಲಿ - 2 ಕೋಟಿ ರೂ.

ABOUT THE AUTHOR

...view details