ನವದೆಹಲಿ:ರೋಹಿತ್ ಶರ್ಮಾ ಅವರ ಏಕದಿನ ಮತ್ತು ಟೆಸ್ಟ್ ನಾಯಕತ್ವದಲ್ಲಿ ಮುಂದುರೆಯುವ ಸಾದ್ಯತೆ ಹೆಚ್ಚಿದೆ. ಈವರೆಗಿನ ಅವರ ನಾಯಕತ್ವ ಬಿಸಿಸಿಐಗೆ ತೃಪ್ತಿಕರವಾಗಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧಿಕಾರಿ ಮೂಲಗಳಿಂದ ತಿಳಿದು ಬಂದಿದೆ. ನಾಯಕ ರೋಹಿತ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮುಂಬೈನಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಸಭೆ ನಡೆಸಿದರು.
ಕಳೆದ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಅಧ್ಯಕ್ಷ ರೋಜರ್ ಬಿನ್ನಿ ಸಹ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.
ಮುಂದೆ ಭಾರತಕ್ಕೆ ಮಹತ್ವದ ಪಂದ್ಯಗಳಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಭಾರತಕ್ಕೆ ಬಹುತೇಕ ಅವಕಾಶ ಸಿಗಲಿದೆ. ಅಲ್ಲದೇ ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ಗಳು ಭಾರತದ ಮುಂದಿದೆ. ಈ ಸಭೆಯಲ್ಲಿ ಟಿ 20 ತಂಡದ ಹೊಸ ನಾಯಕ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿಲ್ಲವಾದ್ದರಿಂದ ರೋಹಿತ್ಗೆ ಕ್ಯಾಪ್ಟನ್ಸಿ ಮುಂದುವರೆಸುವ ಸಾಧ್ಯತೆ ಇದೆ. ಮಂಗಳವಾರದಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಗಾಗಿ ಹಾರ್ದಿಕ್ ಮುಂಬೈನಲ್ಲಿದ್ದರೂ ಸಭೆಗೆ ಕರೆಯದಿದ್ದದ್ದು ಅವರಿಗೆ ನಾಯಕn ಸ್ಥಾನ ಹಸ್ತಾಂತರ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ.