ಕರ್ನಾಟಕ

karnataka

ETV Bharat / sports

ರೋಹಿತ್​ ಶರ್ಮಾಗೆ ಟೀಮ್​ ಇಂಡಿಯಾ ನಾಯಕತ್ವ ವಹಿಸಿಕೊಳ್ಳಲು ಆಸಕ್ತಿ ಹೊಂದಿರಲಿಲ್ಲ: ಸೌರವ್​ ಗಂಗೂಲಿ

ರೋಹಿತ್​ ಶರ್ಮಾ ಟೀಮ್​ ಇಂಡಿಯಾದ ನಾಯಕತ್ವ ವಹಿಸಲು ಇಷ್ಟವಿರಲಿಲ್ಲ ಎಂದು ಸೌರವ್​ ಗಂಗೂಲಿ ಹೇಳಿದ್ದಾರೆ.

ರೋಹಿತ್​ ಶರ್ಮಾ ನಾಯಕತ್ವ ಬಗ್ಗೆ ಸೌರವ್​ ಗಂಗೂಲಿ ಹೇಳಿಕೆ
ರೋಹಿತ್​ ಶರ್ಮಾ ನಾಯಕತ್ವ ಬಗ್ಗೆ ಸೌರವ್​ ಗಂಗೂಲಿ ಹೇಳಿಕೆ

By ETV Bharat Karnataka Team

Published : Nov 10, 2023, 8:28 PM IST

ಹೈದರಾಬಾದ್​:ಹಾಲಿ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತ ತಂಡದ ನಾಯಕನಾಗಲು ಉತ್ಸುಕರಾಗಿರಲಿಲ್ಲ. ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ನಾಯಕತ್ವ ವಹಿಸಿಕೊಳ್ಳುವಂತೆ ರೋಹಿತ್​ ಶರ್ಮಾಗೆ ಒತ್ತಡ ಹೇರಲಾಯಿತು ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಕುತೂಹಲಕಾರಿ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.

ಕೋಲ್ಕತ್ತಾ ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ರೋಹಿತ್​ ಶರ್ಮಾ ನಾಯಕತ್ವದ ಬಗ್ಗೆ ಮಾತನಾಡಿದ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಾವು ಬಿಸಿಸಿಐ ಅಧ್ಯಕ್ಷರಾಗಿದ್ದಾಗ, ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ತಂಡವನ್ನು ಮುನ್ನಡೆಸಲು ರೋಹಿತ್ ಶರ್ಮಾ ಸಮರ್ಥರಾಗಿದ್ದರು. ಈ ಕಾರಣಕ್ಕಾಗಿ, ರೋಹಿತ್‌ಗೆ ನಾಯಕತ್ವವನ್ನು ಒಪ್ಪಿಕೊಳ್ಳುವಂತೆ ಮನವಿ ಮಾಡಲಾಗಿತ್ತು.

ಆದರೇ, ರೋಹಿತ್ ಶರ್ಮಾಗೆ ಟೀಮ್ ಇಂಡಿಯಾದ ನಾಯಕನಾಗುವುದು ಇಷ್ಟವಿರಲಿಲ್ಲ. ಎಲ್ಲ ಮಾದರಿಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿದ್ದ ಕಾರಣ ಹೆಚ್ಚಿನ ಒತ್ತಡದಿಂದಾಗಿ ತಂಡದ ನಾಯಕತ್ವದಲ್ಲಿ ಆಸಕ್ತಿ ಹೊಂದಿರಲಿಲ್ಲ. ಆದರೆ, ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ತಂಡವನ್ನು ಅದ್ಬುತವಾಗಿ ಮುನ್ನಡೆಸಿ ಪ್ರಶಸ್ತಿಗಳನ್ನು ಜಯಿಸಿದ ಅನುಭವ ಅವರಿಗಿದ್ದ ಕಾರಣ ತಂಡವನ್ನು ಮುನ್ನಡೆಸುವಂತೆ ಮನವೊಲಿಸಲಾಯಿತು.

ಕೊನೆಗೆ ಅವರು ನಾಯಕತ್ವ ವಹಿಸಿಕೊಳ್ಳಲು ಒಪ್ಪದ ಕಾರಣ "ನೀವು ನಾಯಕ ಎಂದು ಒಪ್ಪಿಕೊಳ್ಳುತ್ತಿರೋ ಅಥವಾ, ನಾನೇ ಘೋಷಣೆ ಮಾಡಬೇಕೋ" ಎಂದು ಒತ್ತಡ ಹಾಕಿದ್ದೆ. ಬಳಿಕ ರೋಹಿತ್‌ ನಾಯಕತ್ವ ವಹಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದರು ಎಂದು ಗಂಗೂಲಿ ಹೇಳಿದ್ದಾರೆ. ಸದ್ಯ ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ ನಾಯಕತ್ವದಲ್ಲಿ ಭಾರತ ಆಡಿರುವ 8 ಪಂದ್ಯಗಳನ್ನು ಗೆದ್ದು ಸೋಲನ್ನು ಕಾಣದೇ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ಸೆಮಿಫೈನಲ್​ಗೆ ಪ್ರವೇಶ ಪಡೆದಿದೆ. ಲೀಗ್ ಹಂತದ ಕೊನೆಯ ಪಂದ್ಯ ಭಾನುವಾರ ನೆದರ್ಲೆಂಡ್ಸ್ ವಿರುದ್ಧ ನಡೆಯಲಿದೆ. ಅಲ್ಲದೇ ಭಾರತ ಈ ಬಾರಿಯ ವಿಶ್ವಕಪ್​ ಗೆಲ್ಲುವ ಫೆವರೀಟ್​ ತಂಡವಾಗಿದೆ.

ರೋಹಿತ್​ ಶರ್ಮಾ ನಾಯಕತ್ವ ದಾಖಲೆ:ಟೀಮ್​ ಇಂಡಿಯಾದ ನಾಯಕನಾಗಿ ರೋಹಿತ್​ ಶರ್ಮಾ ಒಟ್ಟು 102 ಅಂತಾರಾಷ್ಟ್ರಿಯ ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಈ ಪೈಕಿ 76 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿದ್ದು, 23 ಪಂದ್ಯಗಳಲ್ಲಿ ಸೋಲು ಕಂಡಿದೆ. ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಸದ್ಯ ರೋಹಿತ್​ ನಾಯಕತ್ವದ ಭಾರತ ಮೂರು ಸ್ವರೂಪದ ಕ್ರಿಕೆಟ್​ನಲ್ಲಿ ಅಗ್ರಸ್ಥಾನದಲ್ಲಿದೆ.​

ಐಪಿಎಲ್​ ದಾಖಲೆ:ರೋಹಿತ್​ ಶರ್ಮಾ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಈ ವರೆಗೂ​​ 5 ಬಾರಿ (2013, 2015, 2017, 2019, 2020) ಟ್ರೋಫಿಯನ್ನು ಗೆದ್ದಿದೆ.

ಇದನ್ನೂ ಓದಿ:ವಿಶ್ವಕಪ್​ 2023: ಪಾಕಿಸ್ತಾನ ಸೆಮಿಸ್​ಗೆ ತಲುಪಲು ಇನ್ನೂ ಇದೆ ಅವಕಾಶ : ಹೀಗಿದೆ ಲೆಕ್ಕಾಚಾರ!

ABOUT THE AUTHOR

...view details