ಕರ್ನಾಟಕ

karnataka

ETV Bharat / sports

6 ತಿಂಗಳ ಬಳಿಕ ಅರ್ಧಶತಕ ಸಿಡಿಸಿದ ವಿರಾಟ್​​... ಟಿ20 ಕ್ರಿಕೆಟ್​​ನಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್​ - ಟೀಂ ಇಂಡಿಯಾ ಸೂಪರ್ ಫೋರ್​​​ಗೆ ಲಗ್ಗೆ

ಏಷ್ಯಾಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಸೂಪರ್ ಫೋರ್​​​ಗೆ ಲಗ್ಗೆ ಹಾಕಿದೆ. ನಿನ್ನೆಯ ಪಂದ್ಯದಲ್ಲಿ ಮಿಂಚಿರುವ ವಿರಾಟ್​ ಹಾಗೂ ರೋಹಿತ್ ಶರ್ಮಾ ಹೊಸದೊಂದು ದಾಖಲೆ ಬರೆದರು.

Rohit Sharma surpasses Virat Kohli
Rohit Sharma surpasses Virat Kohli

By

Published : Sep 1, 2022, 7:07 AM IST

ದುಬೈ: ಏಷ್ಯಾಕಪ್​​ ಕ್ರಿಕೆಟ್ ಟೂರ್ನಿ ಮೂಲಕ ರನ್​ ಮಷಿನ್ ಖ್ಯಾತಿಯ ವಿರಾಟ್​ ಕೊಹ್ಲಿ ಫಾರ್ಮ್​​ಗೆ ಮರಳಿದ್ದು, ಕ್ರಿಕೆಟ್ ಶಿಶು ಹಾಂಗ್​ಕಾಂಗ್​ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಬರೋಬ್ಬರಿ ಆರು ತಿಂಗಳ ಬಳಿಕ ಅರ್ಧಶತಕ ಸಿಡಿಸಿ, ಮಿಂಚಿದ್ದಾರೆ. ಈ ಹಿಂದೆ 2022ರ ಫೆಬ್ರವರಿ ತಿಂಗಳಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲಿ ವಿರಾಟ್​ ಅರ್ಧಶತಕ ಗಳಿಸಿದ್ದರು.

ಕಳೆದ ಕೆಲ ವರ್ಷಗಳಿಂದ ಕಳಪೆ ಫಾರ್ಮ್​​ನಿಂದ ರನ್​​​ಗಳಿಸಲು ಹೆಣಗಾಡುತ್ತಿದ್ದ ವಿರಾಟ್​ ಕೊಹ್ಲಿ, ಇದೀಗ ಉತ್ತಮ ಲಯದಲ್ಲಿ ಕಾಣಿಸುತ್ತಿದ್ದಾರೆ. ಪಾಕ್​ ವಿರುದ್ಧ ಸಹ ಉತ್ತಮ ಪ್ರದರ್ಶನ ನೀಡಿದ್ದ ಈ ಪ್ಲೇಯರ್​ ನಿನ್ನೆಯ ಹಾಂಗ್​ಕಾಂಗ್​ ವಿರುದ್ಧ ಅರ್ಧಶತಕ ಸಾಧನೆ ಮಾಡಿದರು.100 ಸ್ಟ್ರೈಕ್​ ರೇಟ್​​ನಲ್ಲಿ ಬ್ಯಾಟ್​ ಬೀಸಿರುವ ವಿರಾಟ್​, 44 ಎಸೆತಗಳಲ್ಲಿ ಅಜೇಯ 59ರನ್​​​ಗಳಿಕೆ ಮಾಡಿದರು. ಇವರಿಗೆ ಉತ್ತಮ ಸಾಥ್​ ನೀಡಿದ ಸೂರ್ಯಕುಮಾರ್​ ಯಾದವ್​​​ 26 ಎಸೆತಗಳಲ್ಲಿ 68ರನ್​ ಸಿಡಿಸಿದರು.

ಇದನ್ನೂ ಓದಿ:ಏಷ್ಯಾ ಕಪ್: 40 ರನ್​​ಗಳಿಂದ ಗೆದ್ದ ಟೀಂ ಇಂಡಿಯಾ ಸೂಪರ್‌ ಫೋರ್​ಗೆ ಲಗ್ಗೆ

ಸಂಭ್ರಮಿಸದ ವಿರಾಟ್​: ಹಾಂಗ್​ಕಾಂಗ್​ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿರುವ ವಿರಾಟ್​​ ಕೊಹ್ಲಿ, ಯಾವುದೇ ಸಂಭ್ರಮಾಚರಣೆ ಮಾಡದಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ತುಸು ಆಶ್ಚರ್ಯ ಮೂಡಿಸಿದೆ.

ವಿಶ್ವ ದಾಖಲೆ ಬರೆದ ರೋಹಿತ್​ ಶರ್ಮಾ:ಸ್ಫೋಟಕ ಆಟದ ಮೂಲಕ ಎಲ್ಲರ ಗಮನ ಸೆಳೆದಿರುವ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ನಿನ್ನೆಯ ಹಾಂಗ್​ಕಾಂಗ್​ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆ ಬರೆದರು. ಟಿ20 ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹಿಟ್​ಮ್ಯಾನ್​​​ ಇದುವರೆಗೆ ಯಾವುದೇ ಪ್ಲೇಯರ್​ ಮಾಡದಂತಹ ಸಾಧನೆ ಮಾಡಿದ್ದಾರೆ.

ನಿನ್ನೆಯ ಪಂದ್ಯದಲ್ಲಿ 21ರನ್​​​ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ ಟಿ20 ಕ್ರಿಕೆಟ್​​ನಲ್ಲಿ 3500 ರನ್​​​ ಪೂರೈಸಿರುವ ಮೊದಲ ಆಟಗಾರನೆಂಬ ದಾಖಲೆ ಬರೆದರು. ಇದರ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 12,000 ರನ್​ ಪೂರೈಕೆ ಮಾಡಿರುವ ಸಾಧನೆ ಸಹ ಮಾಡಿದ್ದಾರೆ.

37 ಟಿ20 ಪಂದ್ಯಗಳ ಪೈಕಿ 31ರಲ್ಲಿ ಗೆದ್ದ ರೋಹಿತ್​:ಭಾರತದ ಯಶಸ್ವಿ ನಾಯಕರ ಸಾಲಿನಲ್ಲಿ ನಿಲ್ಲುವ ರೋಹಿತ್ ಶರ್ಮಾ, ತಾವು ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ಬಳಿಕ ಆಡಿರುವ 37 ಟಿ20 ಪಂದ್ಯಗಳ ಪೈಕಿ 31ರಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ವಿರಾಟ್​ ಸಾಧನೆ ಹಿಂದಿಕ್ಕಿದ್ದಾರೆ. ವಿರಾಟ್​ ಕೊಹ್ಲಿ ನಾಯಕನಾಗಿ 50 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದು, ಇದರಲ್ಲಿ 30ರಲ್ಲಿ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಧೋನಿ 72 ಪಂದ್ಯಗಳ ಪೈಕಿ 41ರಲ್ಲಿ ಜಯ ತಂದುಕೊಟ್ಟಿದ್ದಾರೆ.

ನಿನ್ನೆ ಹಾಂಗ್​ಕಾಂಗ್​ ವಿರುದ್ಧ ನಡೆದ ಪಂದ್ಯದಲ್ಲಿ 40ರನ್​​​ಗಳ ಗೆಲುವು ದಾಖಲು ಮಾಡಿರುವ ಟೀ ಇಂಡಿಯಾ ಇದೀಗ ಸೂಪರ್​ ಫೋರ್​​ಗೆ ಲಗ್ಗೆ ಹಾಕಿದೆ.

ABOUT THE AUTHOR

...view details