ಕರ್ನಾಟಕ

karnataka

ETV Bharat / sports

ಜೈಸ್ವಾಲ್​ 'ಯಶಸ್ವಿ' ಬ್ಯಾಟಿಂಗ್​ಗೆ ರೋಹಿತ್​ ಫಿದಾ: ಅಶ್ವಿನ್​ - ಜಡ್ಡು ಸ್ಪಿನ್​ ದಾಳಿ ಹೊಗಳಿದ ನಾಯಕ - ವೆಸ್ಟ್​ ಇಂಡೀಸ್​ ಭಾರತ ಕ್ರಿಕೆಟ್​ ಪಂದ್ಯ

ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಸ್ಪಿನ್​ ದ್ವಯರಾದ ಅಶ್ವಿನ್​- ಜಡೇಜಾರ ಆಟವನ್ನೂ ನಾಯಕ ರೋಹಿತ್​ ಹೊಗಳಿದ್ದಾರೆ.

ರೋಹಿತ್​ ಫಿದಾ
ರೋಹಿತ್​ ಫಿದಾ

By

Published : Jul 15, 2023, 5:47 PM IST

ಡೊಮಿನಿಕಾ(ವೆಸ್ಟ್​ ಇಂಡೀಸ್​):ಯುವ ಪಡೆಯೊಂದಿಗೆ ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್​ ತಂಡ ಮೊದಲ ಟೆಸ್ಟ್​ನಲ್ಲಿ ಕೆರೆಬಿಯನ್ನರ ವಿರುದ್ಧ ಇನಿಂಗ್ಸ್​ ಮತ್ತು 141 ರನ್​ ವಿಕ್ರಮ ಸಾಧಿಸಿದೆ. ಪದಾರ್ಪಣಾ ಪಂದ್ಯದಲ್ಲಿಯೇ ಶತಕ ಸಾಧನೆ ಮಾಡಿದ ಯಶಸ್ವಿ ಜೈಸ್ವಾಲ್​, ಹಿರಿಯ ಆಟಗಾರ ಆರ್​ ಅಶ್ವಿನ್​ ಅವರ ಸ್ಪಿನ್​ಮಾಂತ್ರಿಕತೆಗೆ ತರಗೆಲೆಯಂತೆ ಉದುರಿದ ವಿಂಡೀಸ್​ ಬ್ಯಾಟಿಂಗ್​ ಪಡೆ ಯಾವುದೇ ಹಂತದಲ್ಲಿ ಪ್ರತಿರೋಧ ಒಡ್ಡದೇ ಸೋಲೊಪ್ಪಿಕೊಂಡಿತು.

ಇದು ತನ್ನ ಪದಾರ್ಪಣೆ ಪಂದ್ಯ ಎಂಬ ಅಳುಕಿಲ್ಲದೇ ಭರ್ಜರಿ ಬ್ಯಾಟ್ ಮಾಡಿದ ಯಶಸ್ವಿ ಜೈಸ್ವಾಲ್​ 387 ಎಸೆತಗಳಲ್ಲಿ 171 ರನ್​ ಗಳಿಸಿ ವಿಂಡೀಸ್​ ನೆಲದಲ್ಲಿ ಮೊದಲ ಟೂರ್ನಿಯನ್ನೇ ಅವಿಸ್ಮರಣೀಯ ಮಾಡಿಕೊಂಡರು. ಟಿ20 ಯಲ್ಲಿ ಲೀಲಾಜಾಲವಾಗಿ ಬ್ಯಾಟ್​ ಮಾಡಿದ್ದ ಯುವ ಬ್ಯಾಟರ್​, ಕ್ರಿಕೆಟ್​​ನ ಸತ್ವವನ್ನು ಒರೆಗಚ್ಚುವ ಟೆಸ್ಟ್​​ನಲ್ಲೂ ತಮ್ಮ ಬ್ಯಾಟಿಂಗ್​ ಖದರ್​ ತೋರಿಸಿದ್ದಾರೆ. ಇದು ನಾಯಕ ರೋಹಿತ್​ ಶರ್ಮಾರ ಗಮನ ಸೆಳೆದಿದ್ದು, ಯುವ ಆಟಗಾರನನ್ನು ಹೊಗಳಿದ್ದಾರೆ.

ಯಶಸ್ವಿ ಜೈಸ್ವಾಲ್ ಪ್ರತಿಭಾವಂತ ಬ್ಯಾಟ್ಸ್​ಮನ್​. ಈಗ ಆತ ಮೇಲ್ದರ್ಜೆಯಲ್ಲಿ ಆಡಬಲ್ಲ ಶಕ್ತಿ ಹೊಂದಿದ್ದಾನೆ. ಬ್ಯಾಟ್​​ ಮಾಡುವಾಗ ಮೊದಲ ಪ್ರವಾಸವಾಗಿದ್ದರೂ ಒಂದು ಕ್ಷಣವೂ ಮುಖದಲ್ಲಿ ಗಾಬರಿ ಕಾಣಲಿಲ್ಲ. ನಿರಾತಂಕವಾಗಿ ಆಡುವ ಮೂಲಕ ಚೊಚ್ಚಲ ಪಂದ್ಯದಲ್ಲೇ ಶತಕ ಸಾಧನೆ ಮಾಡಿದ್ದು ಖುಷಿ ತಂದಿದೆ. ಮೈದಾನದಲ್ಲಿದ್ದಾಗ ಉತ್ತಮವಾಗಿ ಬ್ಯಾಟ್​ ಮಾಡುತ್ತಿದ್ದೀಯಾ ಮುಂದುವರಿಸು ಎಂದು ಹುರಿದುಂಬಿಸಿದ್ದೆ ಎಂದು ಅವರು ಹೇಳಿದ್ದಾರೆ.

ನಮ್ಮಿಬ್ಬರ ನಡುವಿನ ಸಂಭಾಷಣೆಯ ವೇಳೆ ಎಲ್ಲಿಯೂ ಆತ ತನ್ನ ಚೈತನ್ಯವನನ್ನು ಬಿಟ್ಟುಕೊಡಲಿಲ್ಲ. ರನ್​ ಗಳಿಕೆ ಮಾಡುವುದರಲ್ಲಿ ಆತನಿಗಿರುವ ಶ್ರದ್ಧೆ ಅದ್ಭುತ ಎಂದು ಹೇಳಿದ್ದಾರೆ. ಪಂದ್ಯದಲ್ಲಿ ಬ್ಯಾಟಿಂಗ್​ ಜೊತೆಗೆ ಉತ್ತಮವಾಗಿ ಬೌಲಿಂಗ್ ಕೂಡ ಮಾಡಿದೆವು. ಕೆರೆಬಿಯನ್ನರನ್ನು ಎರಡೂ ಇನಿಂಗ್ಸ್​​ಗಳಲ್ಲಿ 150 ರನ್‌ಗಳ ಒಳಗೆ ಕಟ್ಟಿ ಹಾಕುವ ಮೂಲಕ ಪ್ರಾಬಲ್ಯ ಸಾಧಿಸಿದೆವು. ಎರಡನೇ ಇನಿಂಗ್ಸ್​ ಬ್ಯಾಟಿಂಗ್​ ಮಾಡುವ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ ಸಾಧ್ಯವಾದಷ್ಟು ರನ್​ಗಳನ್ನು ಮೊದಲ ಇನಿಂಗ್ಸ್​ನಲ್ಲೇ ಗಳಿಸಲು ಪ್ರಯತ್ನಿಸಿದೆವು. ಬ್ಯಾಟರ್​ಗಳು ಕೂಡ ಅದಕ್ಕೆ ಸ್ಪಂದಿಸಿದರು. ಆದ್ದರಿಂದ 421 ರನ್ ಗಳಿಸಿದ ನಂತರ ಡಿಕ್ಲೇರ್​ ಮಾಡಿಕೊಂಡೆವು ಎಂದು ಪಂದ್ಯದ ರಣತಂತ್ರದ ಬಗ್ಗೆ ಹೇಳಿದರು.

ಸ್ಪಿನ್​​ ದ್ವಯರಿಗೂ ಮೆಚ್ಚುಗೆ:ಪಂದ್ಯದಲ್ಲಿ ಸ್ಪಿನ್​ ದ್ವಯರಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರ ಪ್ರದರ್ಶನವನ್ನು ನಾಯಕ ರೋಹಿತ್​ ಕೊಂಡಾಗಿದ್ದಾರೆ. ಒಟ್ಟಾರೆ 12 ವಿಕೆಟ್ ಪಡೆದ ಅಶ್ವಿನ್​ ಕೆರೆಬಿಯನ್ನರ ಮೇಲೆ ಗದಾಪ್ರಹಾರ ಮಾಡಿದರೆ, ರವೀಂದ್ರ ಜಡೇಜಾ 5 ವಿಕೆಟ್ ತಂಡದ ಬ್ಯಾಟರ್​ಗಳ ಕಾಡಿದರು. ಇದು ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಮುಕ್ತವಾಗಿ ಆಡುವ ಸ್ವಾತಂತ್ರ್ಯವನ್ನು ನೀಡಬೇಕು. ಇಬ್ಬರಿಗೂ ಇಂತಹ ಪಿಚ್‌ಗಳಲ್ಲಿ ಆಡಿದ ಅಪಾರ ಅನುಭವವಿದೆ. ಇಬ್ಬರೂ ಅದ್ಭುತ ಪ್ರದರ್ಶನಕಾರರು. ಅದರಲ್ಲೂ ಅಶ್ವಿನ್ ಬೌಲಿಂಗ್ ಅತ್ಯುತ್ತಮವಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹೊಸ ಆವೃತ್ತಿಯನ್ನು ಗೆಲುವಿನೊಂದಿಗೆ ಆರಂಭಿಸಿದ್ದೇವೆ ಎಂದು ಹೇಳಿದರು.

ನಾಯಕ ರೋಹಿತ್​ ಶರ್ಮಾ ಜೊತೆಗೂಡಿ ಯಶಸ್ವಿ ಜೈಸ್ವಾಲ್ ಚೊಚ್ಚಲ ಪಂದ್ಯದಲ್ಲೇ 229 ರನ್​ಗಳ ಜೊತೆಯಾಟ ನೀಡಿದರು. ಪದಾರ್ಪಣೆ ಪಂದ್ಯದಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಯುವ ಆಟಗಾರ ಪಾತ್ರರಾದರು.

ಇದನ್ನೂ ಓದಿ:ಕುಮಾರ್ - ಕಿಚ್ಚ ವಾರ್: ನಿರ್ಮಾಪಕರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ನಟ ಸುದೀಪ್

ABOUT THE AUTHOR

...view details