ಕರ್ನಾಟಕ

karnataka

ETV Bharat / sports

ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಕ್ರಿಕೆಟಿಗ : ರೋಹಿತ್ ಶರ್ಮಾ ಹೆಸರಿಗೆ ವಿಶ್ವದಾಖಲೆಯ ಗರಿ - ರೋಹಿತ್ ಶರ್ಮಾ ವಿಶ್ವದಾಖಲೆ

ರೋಹಿತ್ ಶರ್ಮಾ 2017ರ ವಿಶ್ವಕಪ್​ನಲ್ಲಿ ಐರ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದರು. ಅವರು 124 ಪಂದ್ಯಗಳಿಂದ 3308 ರನ್​ಗಳಿಸಿ ಟಿ20 ಕ್ರಿಕೆಟ್​ನ ಗರಿಷ್ಠ ಸ್ಕೋರರ್​ ಆಗಿದ್ದಾರೆ. ಅತಿ ಹೆಚ್ಚು 50+ ರನ್​ಗಳಿಸಿದ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಜೊತೆಗೆ ಅಗ್ರಸ್ಥಾನವನ್ನು ಪಡೆದಿದ್ದಾರೆ..

Rohit Sharma scripts another record
ರೋಹಿತ್ ಶರ್ಮಾ

By

Published : Feb 27, 2022, 7:29 PM IST

ಧರ್ಮಶಾಲಾ :ಭಾರತ ತಂಡದ ನಾಯಕ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಕೊನೆಯ ಟಿ20 ಪಂದ್ಯದಲ್ಲಿ ಹೊಸದೊಂದು ವಿಶ್ವದಾಖಲೆ ಮಾಡಿದ್ದಾರೆ. ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಕ್ರಿಕೆಟಿಗ ಎಂಬ ರೆಕಾರ್ಡ್‌ ಹಿಟ್‌ ಹೆಸರಿಗೆ ಸೇರ್ಪಡೆಯಾಗಿದೆ.

ಭಾನುವಾರ ಧರ್ಮಶಾಲಾದ ಹೆಚ್​ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯ ರೋಹಿತ್ ಶರ್ಮಾ ಅವರ 125ನೇ ಟಿ20 ಮ್ಯಾಚ್‌ ಆಗಿದೆ. ಭಾರತೀಯ ನಾಯಕನಿಗಿಂತ ಮೊದಲು ಪಾಕಿಸ್ತಾನದ ಹಿರಿಯ ಬ್ಯಾಟರ್​ ಶೋಯಬ್ ಮಲಿಕ್​ 124 ಪಂದ್ಯಗಳನ್ನಾಡಿರೋದು ಈವರೆಗಿನ ದಾಖಲೆಯಾಗಿತ್ತು.

ರೋಹಿತ್ ಶರ್ಮಾ 2017ರ ವಿಶ್ವಕಪ್​ನಲ್ಲಿ ಐರ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದರು. ಅವರು 124 ಪಂದ್ಯಗಳಿಂದ 3308 ರನ್​ಗಳಿಸಿ ಟಿ20 ಕ್ರಿಕೆಟ್​ನ ಗರಿಷ್ಠ ಸ್ಕೋರರ್​ ಆಗಿದ್ದಾರೆ. ಅತಿ ಹೆಚ್ಚು 50+ ರನ್​ಗಳಿಸಿದ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಜೊತೆಗೆ ಅಗ್ರಸ್ಥಾನವನ್ನು ಪಡೆದಿದ್ದಾರೆ.

ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಕ್ರಿಕೆಟಿಗರು

  • ರೋಹಿತ್ ಶರ್ಮಾ -125
  • ಶೋಯಬ್ ಮಲಿಕ್- 124
  • ಮೊಹಮ್ಮದ್ ಹಫೀಜ್-119
  • ಇಯಾನ್ ಮಾರ್ಗನ್- 115
  • ಮಹಮ್ಮದುಲ್ಲಾ -113
  • ಮಾರ್ಟಿನ್ ಗಪ್ಟಿಲ್-112

ಇದನ್ನೂ ಓದಿ:ಬ್ಯಾಟಿಂಗ್​ನಲ್ಲಿ ಬಡ್ತಿ.. ರೋಹಿತ್ ಶರ್ಮಾಗೆ ಧನ್ಯವಾದ ತಿಳಿಸಿ ಭವಿಷ್ಯದ ಸವಾಲಿಗೆ ಸಿದ್ಧ ಎಂದ ಜಡೇಜಾ!

ABOUT THE AUTHOR

...view details