ಬರ್ಮಿಂಗ್ಹ್ಯಾಮ್:ಭಾರತದ ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಅವರ ಕ್ವಾರಂಟೈನ್ ಅವಧಿ ಮುಗಿದಿದ್ದು, ಐಸೋಲೇಶನ್ನಿಂದ ಹೊರಗಿದ್ದಾರೆ. ಜುಲೈ 7 ರಿಂದ ಆರಂಭವಾಗಲಿರುವ ಟಿ-20 ಸರಣಿಯಲ್ಲಿ ರೋಹಿತ್ ಶರ್ಮಾ ಆಡಲಿದ್ದಾರೆ.
ಇಂಗ್ಲೆಂಡ್ನ ವಿರುದ್ಧ ಮರು ನಿಗದಿಯಾಗಿದ್ದ ಐದನೇ ಟೆಸ್ಟ್ಗೂ ಮುನ್ನ ಲೀಸೆಸ್ಟರ್ಶೈರ್ ವಿರುದ್ಧದ ನಾಲ್ಕು ದಿನಗಳ ಅಭ್ಯಾಸ ಪಂದ್ಯದ ವೇಳೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿತ್ತು. ಇದರಿಂದಾಗಿ ಐದನೇ ಟೆಸ್ಟ್ನಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಜುಲೈ 1ರಿಂದ ಪ್ರಾರಂಭವಾದ ಟೆಸ್ಟ್ಗೆ ಉಪನಾಯಕನ ಸ್ಥಾನದಲ್ಲಿದ್ದ, ಜಸ್ಪ್ರೀತ್ ಬುಮ್ರಾ ಅವರಿಗೆ ನಾಯಕತ್ವ ಕೊಡಲಾಯಿತು.
"ಹೌದು, ರೋಹಿತ್ ಅವರಿಗೆ ಕೊವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಮತ್ತು ವೈದ್ಯಕೀಯ ಪ್ರೋಟೋಕಾಲ್ಗಳ ಪ್ರಕಾರ ಈಗ ಕ್ವಾರಂಟೈನ್ನಿಂದ ಹೊರಗಿದ್ದಾರೆ. ಆದಾಗ್ಯೂ, ಅವರು ನಾರ್ಥಾಂಪ್ಟನ್ಶೈರ್ ವಿರುದ್ಧ ಇಂದಿನ ಟಿ-20 ಅಭ್ಯಾಸ ಪಂದ್ಯವನ್ನು ಆಡುತ್ತಿಲ್ಲ. ಏಕೆಂದರೆ ಅವರಿಗೆ ಮೊದಲ ಟಿ-20ಗೂ ಮೊದಲು ಚೇತರಿಸಿ ಕೊಳ್ಳುವ ಅಗತ್ಯವಿದೆ" ಎಂದು ಬಿಸಿಸಿಐ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ಆಡಲಿದ್ದಾರೆ. ವಿರಾಟ್ ಕೊಹ್ಲಿ, ಬುಮ್ರಾ, ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಎರಡನೇ ಪಂದ್ಯದಿಂದ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜುಲೈ 5ರಂದು ಟೆಸ್ಟ್ ಪಂದ್ಯ ಅಂತ್ಯವಾಗಲಿದೆ. ಜುಲೈ 7ರಿಂದ ಮೂರು ಟಿ-20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ.
ಇದನ್ನೂ ಓದಿ:ಬೂಮ್.. ಬೂಮ್.. ಬುಮ್ರಾಗೆ ಬ್ರಿಯಾನ್ ಲಾರಾ ಮೆಚ್ಚುಗೆ