ಕರ್ನಾಟಕ

karnataka

ETV Bharat / sports

ವಿಶ್ವಕಪ್​ಗಿಂತ ಜಸ್ಪ್ರೀತ್​ ಬೂಮ್ರಾ ಕೆರಿಯರ್​ ಮುಖ್ಯ: ರೋಹಿತ್​ ಶರ್ಮಾ - Rohit Sharma talk about cricket injurys

ಕ್ರಿಕೆಟ್​ನಲ್ಲಿ ಗಾಯಗಳು ಸಹಜ. ಮುಖ್ಯ ಟೂರ್ನಿಗಿಂತಲೂ ದೂರದ ವೃತ್ತಿ ಜೀವನ ಆಟಗಾರರಿಗೆ ಬಹಳ ಮುಖ್ಯವಾಗುತ್ತದೆ ಎಂದು ಹೇಳುವ ಮೂಲಕ ನಾಯಕ ರೋಹಿತ್​ ಶರ್ಮಾ ಜಸ್ಪ್ರೀತ್​ ಬೂಮ್ರಾ ಬೆನ್ನಿಗೆ ನಿಂತಿದ್ದಾರೆ.

rohit-sharma-on-jasprit-bumrahs-injury
ಜಸ್ಪ್ರೀತ್​ ಬೂಮ್ರಾ ಬಗ್ಗೆ ರೋಹಿತ್​ ಶರ್ಮಾ

By

Published : Oct 16, 2022, 12:33 PM IST

ಬೆನ್ನುಮೂಳೆ ಮುರಿತಕ್ಕೀಡಾಗಿರುವ ಭಾರತದ ವೇಗಿ ಜಸ್ಪ್ರೀತ್​ ಬೂಮ್ರಾ ವಿಶ್ವಕಪ್​ ತಂಡದಿಂದ ಹೊರಬಿದ್ದಿದ್ದಾರೆ. ಇದು ತಂಡಕ್ಕೂ ಅಲ್ಪ ಹಿನ್ನಡೆ ಉಂಟು ಮಾಡಿತ್ತು. ಐಪಿಎಲ್​ ಆಡಲು ಫಿಟ್​ ಇರುತ್ತಾರೆ. ಭಾರತದ ಪರ ಆಡುವಾಗ ಗಾಯಕ್ಕೀಡಾಗುತ್ತಾರೆ ಎಂದು ಬೂಮ್ರಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಕೂಡ ಮಾಡಲಾಗಿತ್ತು.

ನಾಯಕ ರೋಹಿತ್​ ಶರ್ಮಾ ತಂಡದ ಆಟಗಾರರ ಗಾಯದ ಬಗ್ಗೆ ಮಾತನಾಡಿ, ಯಾವುದೇ ಆಟಗಾರನಿಗೇ ಆಗಲಿ ವೃತ್ತಿಜೀವನ ಮುಖ್ಯ. ಒಂದು ಟೂರ್ನಿ ಮಿಸ್​ ಆದರೆ, ದೊಡ್ಡ ಪರಿಣಾಮ ಬೀರದು. ನೋವಿನಲ್ಲೂ ಕ್ರಿಕೆಟ್​ ಆಡಿ ದೊಡ್ಡ ನಷ್ಟಕ್ಕೆ ಒಳಗಾಗಬಾರದು. ಜಸ್ಪ್ರೀತ್​ ಬೂಮ್ರಾ ಕೂಡ ವಿಶ್ವಕಪ್​ನಲ್ಲಿ ಆಡದಿರಬಹುದು. ಆದರೆ, ಭಾರತ ತಂಡದ ಜೊತೆ ಮುಂದೆ ಇನ್ನಷ್ಟು ದೂರ ಪಯಣಿಸಲಿದ್ದಾರೆ ಎಂದು ಬೂಮ್ರಾ ಪರ ಬ್ಯಾಟಿಂಗ್​ ಮಾಡಿದ್ದಾರೆ.

ವಿಶ್ವಕಪ್​ಗಿಂತ ಬೂಮ್ರಾರ ವೃತ್ತಿಜೀವನ ಮುಖ್ಯ. ಅವರ ಗಾಯದ ಬಗ್ಗೆ ನಾವು ಸಾಕಷ್ಟು ತಜ್ಞರೊಂದಿಗೆ ಮಾತನಾಡಿದ್ದೇವೆ. 28 ವರ್ಷದ ಯುವ ವೇಗಿಯ ಮುಂದಿನ ವೃತ್ತಿ ಬದುಕು ಸಹ ಬಹುಮುಖ್ಯವಾದ್ದರಿಂದ ಅವರನ್ನು ಅನಿವಾರ್ಯವಾಗಿ ಕ್ರಿಕೆಟ್​ ಆಡಿಸಲಾಗದು. ಗಾಯದಿಂದ ಚೇತರಿಸಿಕೊಂಡ ಬಳಿಕ ಅವರು ಮತ್ತೆ ಭಾರತದ ಪರ ಕಣಕ್ಕಿಳಿಯಲಿದ್ದಾರೆ ಎಂದರು.

ಬೂಮ್ರಾ ಮುಂದೆ ಸಾಕಷ್ಟು ಕ್ರಿಕೆಟ್ ಇದೆ. ದೇಶದ ಪರವಾಗಿ ಇನ್ನೂ ಬಹಳಷ್ಟು ಆಡಲಿದ್ದಾರೆ. ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಈ ವಿಶ್ವಕಪ್​ನಿಂದ ಮಾತ್ರ ಅವರು ತಪ್ಪಿಸಿಕೊಳ್ಳುತ್ತಾರೆ ಅಷ್ಟೇ ಎಂದು ಸಮರ್ಥಿಸಿಕೊಂಡರು.

ಗಾಯಗೊಳ್ಳುವುದು ಕ್ರೀಡೆಯ ಭಾಗ. ಅದರಿಂದ ತಪ್ಪಿಸಿಕೊಳ್ಳಲಾಗದು. ಬೂಮ್ರಾ ಬದಲಾಗಿ ತಂಡ ಸೇರಿರುವ ಮೊಹಮದ್​ ಶಮಿ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ವೇಳೆ ಕೋವಿಡ್​ಗೆ ತುತ್ತಾಗಿ ಕ್ವಾರಂಟೈನ್​ ಆಗಿದ್ದರು. ಈ ವೇಳೆ ಯುವ ವೇಗಿಗಳು ಅವಕಾಶ ಪಡೆದರು. ಶಮಿ ಈಗ ಫಿಟ್​ ಆಗಿದ್ದು, ಮತ್ತೆ ತಂಡ ಸೇರಿದ್ದಾರೆ. ಹಾಗಾಗಿ ಗಾಯಗಳನ್ನು ಉಪೇಕ್ಷೆ ಮಾಡಲಾಗದು ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ.

ಆಯ್ಕೆ ಸಮಿತಿಯು ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮದ್ ಶಮಿ ಅವರನ್ನು ಹೆಸರಿಸಿದೆ. ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಮೀಸಲು ವೇಗಿಗಳಾಗಿ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇಂದಿನಿಂದ ಟಿ20 ವಿಶ್ವಕಪ್​ ಆರಂಭವಾಗಿದ್ದು, ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಅ.23 ರಂದು ಎದುರಿಸಲಿದೆ.

ಓದಿ:ಸಪ್ತ ವಿಜಯದ ಸಂಭ್ರಮ... ಏಷ್ಯಾ ಕಪ್​ ಟ್ರೋಫಿ ಗೆದ್ದ ಖುಷಿಗೆ ಭಾರತ ವನಿತೆಯರ ಡ್ಯಾನ್ಸ್​

ABOUT THE AUTHOR

...view details