ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾದ ಈ ಅಗ್ರ ಆಟಗಾರನೆಂದರೆ ಪಾಕ್​ ಕ್ರಿಕೆಟ್​ ಪ್ರೇಮಿಗಳಿಗೆ ಅಚ್ಚು- ಮೆಚ್ಚು; ​ಶೋಯೆಬ್ ಅಖ್ತರ್ - ಟಿ20 ವಿಶ್ವಕಪ್​ 2021

ರಾವಲ್ಪಿಂಡಿ ಎಕ್ಸ್​ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್​ ​ಟೀಂ ಇಂಡಿಯಾದ ಅಗ್ರ ಆಟಗಾರ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಅವರೇ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಎಂದಿದ್ದಾರೆ.

Rohit Sharma liked more than Virat Kohli in Pakistan; Shoaib Akhtar
Rohit Sharma liked more than Virat Kohli in Pakistan; Shoaib Akhtar

By

Published : Oct 22, 2021, 5:41 PM IST

Updated : Oct 22, 2021, 5:48 PM IST

ಲಾಹೋರ್​( ಪಾಕಿಸ್ತಾನ): ಚುಟುಕು ವಿಶ್ವ ಸಮರ ಆರಂಭ ಆಗುವುದಕ್ಕೂ ಮುನ್ನ ಟೀಂ ಇಂಡಿಯಾದ ಹಿಟ್​ ಮ್ಯಾನ್​ ರೋಹಿತ್ ಶರ್ಮಾ ಅವರ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗ ಮಾಡಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ ಬಗ್ಗೆ ಅಪಾರ ಅಭಿಮಾನ ಹೊಂದಿರುವ ದೇಶವೆಂದರೆ ಅದು ಪಾಕಿಸ್ತಾನ. ರನ್​ ಮಿಷನ್​ ವಿರಾಟ್​ ಕೊಹ್ಲಿ ಅವರಿಗಿಂತಲೂ ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ಹೆಚ್ಚಾಗಿ ಇಷ್ಟ ಪಡುವ ಭಾರತೀಯ ಕ್ರಿಕೆಟ್ ತಂಡದ ಆಟಗಾರನೆಂದರೆ ಅದು ರೋಹಿತ್ ಶರ್ಮಾ. ಪಾಕಿಸ್ತಾನದ ಪರ ಹೆಚ್ಚಿನ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಪಾಕ್​ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಇಂಜಮಾಮ್​ - ಉಲ್-ಹಕ್ ಅವರಿಗೆ ರೋಹಿತ್ ಶರ್ಮಾ ಅವರನ್ನು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಹೋಲಿಕೆ ಮಾಡುತ್ತಾರೆ ಎಂದು ಅಖ್ತರ್ ಬಣ್ಣನೆ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ​ ಟಿ-20 ವಿಶ್ವಕಪ್ ಪಂದ್ಯಕ್ಕೆ ಎರಡು ದಿನ ಬಾಕಿ ಇದ್ದು ಶೋಯೆಬ್ ಅಖ್ತರ್ ಅವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಪಾಕ್​ ಜನ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ವಿರಾಟ್ ಕೊಹ್ಲಿ

ಪಾಕ್​ ಕ್ರಿಕೆಟ್​ ಪ್ರೇಮಿಗಳಿಗೆ ಭಾರತ ದೇಶದ ಮೇಲೆ ಉತ್ತಮ ಅಭಿಪ್ರಾಯವಿದೆ ಎಂದ ಅಖ್ತರ್, ಆಸ್ಟ್ರೇಲಿಯಾದ ಕ್ರಿಕೆಟ್​ ಮೈದಾನದಲ್ಲಿ ಸೊಗಸಾದ ಆಟ ಆಡಿದ ರಿಷಬ್ ಪಂತ್ ಹಾಗೂ ಯುವ ಆಟಗಾರ ಸೂರ್ಯಕುಮಾರ ಯಾದವ್ ಅವರನ್ನು ಕೂಡ ತುಂಬಾ ಮೆಚ್ಚಿಕೊಳ್ಳುತ್ತಾರೆ ಎಂದಿದ್ದಾರೆ.

Last Updated : Oct 22, 2021, 5:48 PM IST

ABOUT THE AUTHOR

...view details