ಢಾಕಾ(ಬಾಂಗ್ಲಾದೇಶ):ಮೀರ್‌ಪುರದ ಶೇರ್ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಬೆರಳಿಗೆ ಗಂಭೀರ ಗಾಯ ಮಾಡಿಕೊಂಡಿದ್ದು, ಮೈದಾನ ತೊರೆದು ಸ್ಕ್ಯಾನಿಂಗ್ಗೆ ಒಳಗಾಗಿದ್ದಾರೆ.
ಕ್ಯಾಚ್ ಹಿಡಿಯುವ ವೇಳೆ ತಪ್ಪಿ ಚೆಂಡು ಹೆಬ್ಬೆರಳಿಗೆ ಬಲವಾಗಿ ಬಡಿದಿದ್ದು, ರಕ್ತ ಚಿಮ್ಮಿದೆ. ತೀವ್ರ ನೋವಿನಿಂದ ಒದ್ದಾಡಿದ ರೋಹಿತ್ ವೈದ್ಯಕೀಯ ತಪಾಸಣೆಗೆ ಒಳಗಾದರು. ಬಳಿಕ ವೈದ್ಯರ ಸಲಹೆಯ ಮೇಲೆ ಮೈದಾನದಿಂದ ಹೊರ ನಡೆದರು.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, ಮೊಹಮದ್ ಸಿರಾಜ್ ಎಸೆದ ಇನಿಂಗ್ಸ್ನ ಎರಡನೇ ಓವರ್‌ನ 4ನೇ ಎಸೆತದಲ್ಲಿ ಆರಂಭಿಕ ಅನಾಮುಲ್ ಹಕ್ ಬಿಜೋಯ್ ಬ್ಯಾಟ್ ಅಂಚಿಗೆ ತಾಕಿದ ಚೆಂಡನ್ನು ಸ್ಲಿಪ್ನಲ್ಲಿದ್ದ ರೋಹಿತ್ ಹಿಡಿಯುವ ಯತ್ನಿಸಿದ್ದಾರೆ. ಈ ವೇಳೆ ಚೆಂಡು ರೋಹಿತ್ ಹೆಬ್ಬೆರಳಿಗೆ ಬಲವಾಗಿ ಬಡಿಯಿತು. ಚರ್ಮ ಕಟ್ ಆಗಿ ರಕ್ತ ಸುರಿಯಲಾರಂಭಿಸಿತು.