ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ 4ನೇ ಟಿ20 ಪಂದ್ಯದಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಮೇಲೆ ನಾಯಕ ರೋಹಿತ್ ಶರ್ಮಾ ರನೌಟ್ ವಿಚಾರದಲ್ಲಿ ಸಿಟ್ಟಾದ ಘಟನೆ ನಡೆಯಿತು. ವಿಂಡೀಸ್ನ ನಿಕೋಲಸ್ ಪೂರನ್ ಮತ್ತು ಕೈಲ್ ಮೇಯರ್ಸ್ ಬಿರುಸಾದ ಬ್ಯಾಟ್ ಬೀಸುತ್ತಿದ್ದರು. ಈ ವೇಳೆ ಅಕ್ಸರ್ ಪಟೇಲ್ ಬೌಲಿಂಗ್ನಲ್ಲಿ ರನ್ ಗಳಿಸಲು ಪೂರನ್ ಕವರ್ ಪಾಯಿಂಟ್ನಲ್ಲಿ ಚೆಂಡನ್ನು ತಳ್ಳಿ ಒಂಟಿ ರನ್ಗಾಗಿ ಓಡಿದರು.
ಈ ವೇಳೆ ಅಲ್ಲಿಯೇ ಇದ್ದ ಸಂಜು ಸ್ಯಾಮ್ಸನ್ ಚುರುಕಾದ ಕ್ಷೇತ್ರರಕ್ಷಣೆ ಮಾಡಿ ಚೆಂಡನ್ನು ವಿಕೆಟ್ ಹಿಂದಿದ್ದ ರಿಷಬ್ ಪಂತ್ಗೆ ಎಸೆದರು. ಸಮನ್ವಯ ಕೊರತೆಯಿಂದ ಪೂರನ್ ಪಿಚ್ ದಾಟಿ ಮುಂದೆ ಸಾಗಿದ್ದರು. ಇದರಿಂದ ಸುಲಭವಾಗಿ ರನೌಟ್ ಆಗುವಂತಿತ್ತು. ಈ ವೇಳೆ ರಿಷಬ್ ಪಂತ್ ಬಾಲನ್ನು ವಿಕೆಟ್ಗೆ ತಾಗಿಸದೇ ತಮಾಷೆ ಮಾಡುತ್ತಿದ್ದರು.