ಮುಂಬೈ: ಭಾರತ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ 10 ಸಾವಿರ ರನ್ಗಳಿಸಿದ 2ನೇ ಹಾಗೂ ವಿಶ್ವದ7ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧ 25 ರನ್ಗಳಿಸುತ್ತಿದ್ದಂತೆ ಹಿಟ್ಮ್ಯಾನ್ ಈ ವಿಶೇಷ ದಾಖಲೆಗೆ ಪಾತ್ರರಾದರು. ರೋಹಿತ್ ಈ ಮೈಲಿಗಲ್ಲನ್ನು 375ನೇ ಇನ್ನಿಂಗ್ಸ್ನಲ್ಲಿ ತಲುಪಿದರು. ಟಿ20 ಕ್ರಿಕೆಟ್‌ನಲ್ಲಿ ಅವರು 6 ಶತಕ ಹಾಗೂ 69 ಅರ್ಧಶತಕದ ಸೇರಿವೆ.
ರೋಹಿತ್ಗೂ ಮುನ್ನ ಭಾರತ ಮತ್ತು ಆರ್ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು. ಪ್ರಸ್ತುತ ವಿರಾಟ್ 330 ಪಂದ್ಯಗಳಿಂದ 10379 ರನ್ಗಳಿಸಿದ್ದಾರೆ. ಅವರು 5 ಶತಕ ಮತ್ತು 76 ಅರ್ಧಶತಕ ಸಿಡಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿರುವ ದಾಖಲೆ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು 463 ಪಂದ್ಯಗಳಿಂದ 22 ಶತಕ 88 ಅರ್ಧಶತಕ ಸಹಿತ 14,562 ರನ್ ಸಿಡಿಸಿದ್ದಾರೆ.