ಢಾಕಾ(ಬಾಂಗ್ಲಾದೇಶ):ಭಾರತ ತಂಡದ ನಾಯಕ, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 500 ಸಿಕ್ಸರ್ ಬಾರಿಸಿದ್ದು, ಭಾರತದ ಮೊದಲ ಬ್ಯಾಟರ್ ಹಾಗೂ ವಿಶ್ವದ ಎರಡನೇ ಆಟಗಾರ ಎಂಬ ದಾಖಲೆ ಬರೆದರು. ವೆಸ್ಟ್ಇಂಡೀಸ್ನ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ಗೇಲ್ 553 ಸಿಕ್ಸರ್ ಸಿಡಿಸಿದ ಮೊದಲಿಗರಾಗಿದ್ದು, ಈ ದಾಖಲೆ ಮುರಿಯಲು ರೋಹಿತ್ ಇನ್ನೂ 51 ಸಿಕ್ಸರ್ ಬಾರಿಸಬೇಕಿದೆ.
ಬಾಂಗ್ಲಾದೇಶದ ವಿರುದ್ಧದ ನಡೆದ 2ನೇ ಏಕದಿನ ಪಂದ್ಯದಲ್ಲಿ ಗಾಯದ ಮಧ್ಯೆಯೂ ಕೊನೆಯಲ್ಲಿ ಮೈದಾನಕ್ಕಿಳಿದ ಹಿಟ್ಮ್ಯಾನ್ 3 ಬೌಂಡರಿ 5 ಸಿಕ್ಸರ್ ಸಮೇತ ಅಜೇಯ 51 ರನ್ ಗಳಿಸಿದಾಗ್ಯೂ ಭಾರತ ಪಂದ್ಯ ಸೋಲು ಕಂಡಿತು. ರೋಹಿತ್ ಪಂದ್ಯದಲ್ಲಿ 3 ನೇ ಸಿಕ್ಸರ್ ಬಾರಿಸಿದಾಗ 500 ಸಿಕ್ಸರ್ ದಾಖಲೆ ಬರೆದರು. ಒಟ್ಟಾರೆ 502 ಸಿಕ್ಸರ್ ರೋಹಿತ್ ಖಾತೆಯಲ್ಲಿವೆ.