ಕರ್ನಾಟಕ

karnataka

ETV Bharat / sports

ವಿರಾಟ್​, ರೋಹಿತ್​ ಭಾರತೀಯ ಕ್ರಿಕೆಟ್‌ನ ಅವಿಭಾಜ್ಯ ಅಂಗ: ಸೌರವ್ ಗಂಗೂಲಿ

ವಿಶ್ವಕಪ್​ ನಂತರ ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮಾ ವೈಟ್​ ಬಾಲ್​ ಕ್ರಿಕೆಟ್​ನಿಂದ ದೂರ ಉಳಿದಿರುವುದು ನಿವೃತ್ತಿಯ ಬಗ್ಗೆ ಪ್ರಶ್ನೆಯ ಜೊತೆಗೆ, 2024ರ ವಿಶ್ವಕಪ್​ ವರೆಗೆ ಆಡುತ್ತಾರಾ ಎಂಬ ಗುಮಾನಿ ಹುಟ್ಟುಹಾಕಿದೆ.

Rohit Sharma and Virat Kohli
Rohit Sharma and Virat Kohli

By ETV Bharat Karnataka Team

Published : Dec 1, 2023, 4:33 PM IST

ವಿರಾಟ್​, ರೋಹಿತ್​ ಭಾರತೀಯ ಕ್ರಿಕೆಟ್‌ನ ಅವಿಭಾಜ್ಯ ಅಂಗ - ಸೌರವ್ ಗಂಗೂಲಿ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ವೈಟ್​ ಬಾಲ್​ ಕ್ರಿಕೆಟ್​ನಿಂದ ದೂರ ಉಳಿದಿರುವುದು ಹಲವು ಪ್ರಶ್ನೆಗೆ ಎಡೆಮಾಡಿಕೊಟ್ಟಿದೆ ಆದರೂ, ಭಾರತದ ಮಾಜಿ ನಾಯಕ ಮತ್ತು ಮಾಜಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಈ ಇಬ್ಬರು ಆಟಗಾರರು 2024ರ ಟಿ20 ವಿಶ್ವಕಪ್​ ವರೆಗೆ ತಂಡದಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ ಆಡಲಿದ್ದಾರೆ ಎಂದು ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ, ವಿರಾಟ್​ ಮತ್ತು ರೋಹಿತ್​ ಭಾರತೀಯ ಕ್ರಿಕೆಟ್‌ನ ಅವಿಭಾಜ್ಯ ಅಂಗ ಮತ್ತು ಪ್ರಮುಖ ಭಾಗ. ಇನ್ನೂ ಒಂದು ವರ್ಷಗಳ ಕಾಲ ಇಬ್ಬರು ರಾಷ್ಟ್ರೀಯ ತಂಡದಲ್ಲಿ ಆಡಲಿದ್ದಾರೆ ಎಂದಿದ್ದಾರೆ. ಏಕದಿನ ವಿಶ್ವಕಪ್​ ಸೋಲಿನ ನಂತರ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್ ಬಾಲ್​ ಕ್ರಿಕೆಟ್​ನಿಂದ ವಿಶ್ರಾಂತಿ ನೀಡುವಂತೆ ಸ್ವತಃ ವಿರಾಟ್​ ಮತ್ತು ರೋಹಿತ್​ ಕೇಳಿಕೊಂಡಿದ್ದರು ಎಂದು ಬಿಸಿಸಿಐ ತಂಡದ ಪ್ರಕಟಣೆಯಲ್ಲಿ ತಿಳಿಸಿದೆ.

ಬೆರಳೆಣಿಕೆಯಷ್ಟು ಅಂತರಾಷ್ಟ್ರೀಯ ಪಂದ್ಯಗಳು ಮತ್ತು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಯ ಹೊರತಾಗಿಯೂ ಮುಂದಿನ ವರ್ಷ ಟಿ20 ವಿಶ್ವಕಪ್‌ಗೆ ವೇಳೆಗೆ ಕೊಹ್ಲಿ ಮತ್ತು ರೋಹಿತ್ ಕಮ್​ಬ್ಯಾಕ್​ ಮಾಡಲಿದ್ದಾರೆ ಮತ್ತು ಏಕದಿನ ವಿಶ್ವಕಪ್​ ರೀತಿಯಲ್ಲೇ ಬ್ಯಾಟಿಂಗ್​ ಮಾಡಲಿದ್ದಾರೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೋಹಿತ್ ಮತ್ತು ಕೊಹ್ಲಿ 2022ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ಕೊನೆಯ ಬಾರಿಗೆ ಟಿ-20 ಮಾದರಿಯ ಪಂದ್ಯ ಆಡಿದ್ದಾರೆ. ನಂತರ ನಡೆದ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಏಕದಿನ ವಿಶ್ವಕಪ್​ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಿರಲಿಲ್ಲ. 2022ರ ಟಿ-20 ವಿಶ್ವಕಪ್​ನಲ್ಲಿ ಭಾರತ ಸೆಮೀಸ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಸೋಲು ಕಂಡಿತ್ತು.

2024ರ ಟಿ20 ವಿಶ್ವಕಪ್ ಸಮೀಪಿಸುತ್ತಿರುವಾಗ ರೋಹಿತ್ ಮತ್ತು ಕೊಹ್ಲಿ ಕ್ರಿಕೆಟ್‌ನ ಕಡಿಮೆ ಸ್ವರೂಪದಲ್ಲಿ ಹೊಂದಿಕೊಳ್ಳುತ್ತಾರೆಯೇ ಎಂದು ಕೇಳಿದಾಗ, "ಅವರು ಟಿ20 ಸ್ವರೂಪಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ. ವಿರಾಟ್ ಕೊಹ್ಲಿ ಎಷ್ಟು ಚೆನ್ನಾಗಿ ಆಡಿದ್ದಾರೆ ಎಂದು ನೀವು ವಿಶ್ವಕಪ್‌ನಲ್ಲಿ ನೋಡಿದ್ದೀರಿ. ರೋಹಿತ್ ಶರ್ಮಾ ವಿಶ್ವಕಪ್‌ನಲ್ಲಿ ಹೇಗೆ ಆಡಿದರು ಎಂಬುದನ್ನು ನೀವು ನೋಡಿದ್ದೀರಿ. ವಿಶ್ವಕಪ್ ದ್ವಿಪಕ್ಷೀಯ ಸರಣಿಗಿಂತ ಭಿನ್ನವಾಗಿದೆ, ಏಕೆಂದರೆ ಒತ್ತಡವು ವಿಭಿನ್ನವಾಗಿದೆ. ಈ ವಿಶ್ವಕಪ್‌ನಲ್ಲಿ ಅವರಿಬ್ಬರೂ ಅಸಾಧಾರಣರಾಗಿದ್ದರು ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

"ಸದಾ ದ್ವಿಪಕ್ಷೀಯ ಕ್ರಿಕೆಟ್​ನಲ್ಲಿ ಆಡುತ್ತಿರುವುದರಿಂದ ಅವರು ವಿರಾಮ ತೆಗೆದುಕೊಂಡಿದ್ದಾರೆ. ನವೆಂಬರ್ 19 ರಂದು ವಿಶ್ವಕಪ್​ ಫೈನಲ್ ನಂತರ ಮೂರು ದಿನದ ಅಂತರದಲ್ಲಿ ಅದೇ ತಂಡದ ವಿರುದ್ಧ ಟಿ20 ಸರಣಿಯನ್ನು ಆಡಲಾಗುತ್ತಿದೆ. ಇದು ಸುಲಭವಲ್ಲ. ವಿಶೇಷವಾಗಿ ವಿಶ್ವಕಪ್​ ಒತ್ತಡದ ಬೆನ್ನಲ್ಲೇ ಬಿಡುವಿರದೇ ಆಡುವುದು ಕಷ್ಟಕರ. ಅವರಿಗೆ ವಿರಾಮ ಸಿಕ್ಕಿರುವುದು ನನಗೆ ಖುಷಿ ತಂದಿದೆ. ಅವರು ಟೆಸ್ಟ್ ಕ್ರಿಕೆಟ್‌ಗೆ ಚೇತರಿಸಿಕೊಂಡು ಹಿಂತಿರುಗುತ್ತಾರೆ. ನಂತರ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್, ಐಪಿಎಲ್ ಮತ್ತು ವಿಶ್ವಕಪ್ ಇವೆ. ಹಾಗಾಗಿ ಆಟಗಾರರಿಗೆ ವಿಶ್ರಾಂತಿ ಅಗತ್ಯವಿದೆ. ವಿಶ್ರಾಂತಿಯ ನಂತರ ಆಟಗಾರರು ಸಂಪೂರ್ಣ ಉತ್ಸಾಹದಿಂದ ಮೈದಾನಕ್ಕಿಳಿಯುತ್ತಾರೆ" ಎಂದರು.

ಇದನ್ನೂ ಓದಿ:ಟಿ-20 ವಿಶ್ವಕಪ್​ ಬಳಿಕ ರೋಹಿತ್​ ಪರಿಸ್ಥಿತಿ ಏನು?

ABOUT THE AUTHOR

...view details