ಕರ್ನಾಟಕ

karnataka

ETV Bharat / sports

ರೋಹಿತ್​-ರಾಹುಲ್​ ಜೋಡಿ ಭಾರತಕ್ಕೆ ವಿಶ್ವಕಪ್​ ತಂದುಕೊಡಲಿದೆ ಎಂಬ ಭರವಸೆಯಿದೆ: ಸಚಿನ್ ತೆಂಡೂಲ್ಕರ್ - ಬಿಸಿಸಿಐ

ಟಿ20 ವಿಶ್ವಕಪ್​ ಮುಗಿಯುತ್ತಿದ್ದಂತೆ ಬಿಸಿಸಿಐ ಸಂಪೂರ್ಣ ಟೀಮ್​ ಮ್ಯಾನೇಜ್​ಮೆಂಟ್​ ಬದಲಾಯಿಸಿದೆ. ಮುಖ್ಯ ಕೋಚ್​ ಆಗಿದ್ದ ರವಿಶಾಸ್ತ್ರಿ ಜಾಗಕ್ಕೆ ರಾಹುಲ್​ ದ್ರಾವಿಡ್​ ಅವರನ್ನು, ಸೀಮಿತ ಓವರ್​ಗಳ ತಂಡಕ್ಕೆ ವಿರಾಟ್​ ಕೊಹ್ಲಿ ಬದಲು ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ನೇಮಿಸಿದೆ.

Sachin Tendulkar on World cup
ಸಚಿನ್ ತೆಂಡೂಲ್ಕರ್ ವಿಶ್ವಕಪ್​

By

Published : Jan 27, 2022, 10:26 PM IST

ನವದೆಹಲಿ: ಭಾರತದ ಬ್ಯಾಟಿಂಗ್​ ದಂತಕತೆ ಸಚಿನ್​ ತೆಂಡೂಲ್ಕರ್​ ಮುಂದಿನ ದಿನಗಳಲ್ಲಿ ಭಾರತ ತಂಡ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್​ ರಾಹುಲ್​ ದ್ರಾವಿಡ್ ನೇತೃತ್ವದಲ್ಲಿ ವಿಶ್ವಕಪ್​ ಎತ್ತಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರಿಬ್ಬರು ತಂಡದಿಂದ ಅತ್ಯುತ್ತಮವಾದದ್ದನ್ನು ಹೊರತೆಗೆಯುವ ಕೆಲಸವನ್ನು ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಟಿ20 ವಿಶ್ವಕಪ್​ ಮುಗಿಯುತ್ತಿದ್ದಂತೆ ಬಿಸಿಸಿಐ ಸಂಪೂರ್ಣ ಟೀಮ್​ ಮ್ಯಾನೇಜ್​ಮೆಂಟ್​ ಬದಲಾಯಿಸಿದೆ. ಮುಖ್ಯ ಕೋಚ್​ ಆಗಿದ್ದ ರವಿಶಾಸ್ತ್ರಿ ಜಾಗಕ್ಕೆ ರಾಹುಲ್​ ದ್ರಾವಿಡ್​ ಅವರನ್ನು, ಸೀಮಿತ ಓವರ್​ಗಳ ತಂಡಕ್ಕೆ ವಿರಾಟ್​ ಕೊಹ್ಲಿ ಬದಲು ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ನೇಮಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರೋಹಿತ್ ಮತ್ತು ರಾಹುಲ್​ ಅದ್ಭುತವಾದ ಜೋಡಿ. ನನಗೆ ಆ ಇಬ್ಬರು ಹುಡುಗರು ತಂಡಕ್ಕೆ ಅತ್ಯುತ್ತಮವಾದ ಕೆಲಸ ಮಾಡುತ್ತಾರೆ ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ತಯಾರಿ ಮಾಡುತ್ತಾರೆ. ಅವರ ಬೆಂಬಲಕ್ಕೆ ತುಂಬಾ ಜನ ಇದ್ದಾರೆ. ಖಂಡಿತ ಮುಂದಿನ ದಿನಗಳಲ್ಲಿ ಭಾರತ ತಂಡ ಟ್ರೋಫಿಗಳನ್ನು ಗೆಲ್ಲಲಿದೆ" ಎಂದು ಸಚಿನ್​ ಬ್ಯಾಕ್​​ಸ್ಟೇಜ್​ ವಿತ್​ ಬೋರಿಯಾ ಕಾರ್ಯಕ್ರಮದಲ್ಲಿ ಹೇಳದ್ದಾರೆ.

ಮತ್ತೆ ಭಾರತ ಟ್ರೋಪಿ ಎತ್ತಿಹಿಡಿಯುವುದನ್ನು ನೋಡಲು ಇಷ್ಟಪಡುತ್ತೇನೆ:

ಏಪ್ರಿಲ್​ ತಿಂಗಳಿಗೆ ನಾವು 2011ರ ವಿಶ್ವಕಪ್​ ಗೆದ್ದು 11 ವರ್ಷ ತುಂಬಲಿದೆ. ಅದು ತುಂಬಾ ದೀರ್ಘ ಕಾಯುವಿಕೆಯಾಗಲಿದೆ. ನನ್ನನ್ನು ಸೇರಿದಂತೆ ಪ್ರತಿಯೊಬ್ಬರು ಬಿಸಿಸಿಐ ಕ್ಯಾಬಿನೆಟ್​ನಲ್ಲಿ ಟ್ರೋಫಿ ನೋಡುವುದಕ್ಕೆ ಇಷ್ಟಪಡುತ್ತೇವೆ. ಎಲ್ಲಾ ಕ್ರಿಕೆಟಿಗರು ಈ ಟ್ರೋಫಿಗಾಗಿಯೇ ಆಡಲಿದ್ದಾರೆ. ಚುಟುಕು ಕ್ರಿಕೆಟ್​ ಆಗಿರಬಹುದು ಅಥವಾ ದೀರ್ಘ ಮಾದರಿಯಾಗಿರಬಹುದು, ಆ ಟ್ರೋಫಿಗಿಂತ ದೊಡ್ಡದಾದದ್ದು ಬೇರೇನಿಲ್ಲ. ವಿಶ್ವಕಪ್​ ಅಂದರೆ ಏನೋ ಒಂಥರಾ ವಿಶೇಷ ಭಾವನೆ ಎಂದು ತೆಂಡೂಲ್ಕರ್​ ಹೇಳಿದ್ದಾರೆ.

ಇದನ್ನೂ ಓದಿ: ಕಮ್​ಬ್ಯಾಕ್​ ಸುಲಭವಲ್ಲ, ಭವಿಷ್ಯದ ದೃಷ್ಟಿಯಿಂದ ಮ್ಯಾನೇಜ್​ಮೆಂಟ್​ ಕುಲ್ದೀಪ್​ ಬೆಂಬಲಕ್ಕೆ ನಿಲ್ಬೇಕು : ಹರ್ಭಜನ್

ABOUT THE AUTHOR

...view details