ಕರ್ನಾಟಕ

karnataka

ETV Bharat / sports

ICC ODI batting rankings: 2 ಮತ್ತು 3ರಲ್ಲಿ ಮುಂದುವರಿದ ಕೊಹ್ಲಿ-ರೋಹಿತ್ ಜೋಡಿ - ಬಾಬರ್ ಅಜಮ್​

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (873) ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಕ್ವಿಂಟನ್ ಡಿಕಾಕ್​(783), ಆ್ಯರೋನ್ ಫಿಂಚ್​(779), ಜಾನಿ ಬೈರ್​ಸ್ಟೋವ್​(775), ಡೇವಿಡ್​ ವಾರ್ನರ್​(762), ರಾಸಿ ವ್ಯಾನ್ ಡರ್​ ಡಾಸೆನ್​(750), ಫಖರ್​ ಜಮಾನ್​ (741) ಜೋ ರೂಟ್​(740) ಟಾಪ್​ 10ರಲ್ಲಿದ್ದಾರೆ.

ICC ODI batting rankings
ರೋಹಿತ್ ಶರ್ಮಾ ವಿರಾಟ್ ಕೊಹ್ಲಿ

By

Published : Feb 9, 2022, 3:40 PM IST

ದುಬೈ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದ್ದಾರೆ. ಆದರೆ, ರೇಟಿಂಗ್ ಅಂಕಗಳನ್ನು ಹೆಚ್ಚಿಸಿಕೊಂಡು 2ನೇ ಸ್ಥಾನದಲ್ಲಿರುವ ವಿರಾಟ್​ ಕೊಹ್ಲಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಕೆಲವು ಮೌಲ್ಯಯುತ ಅಂಕಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರ ಬಳಿ 907 ಅಂಕಗಳಿದ್ದರೆ, ಕೊಹ್ಲಿ 827 ರೇಟಿಂಗ್ ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್(873) ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಕ್ವಿಂಟನ್ ಡಿಕಾಕ್​(783), ಆ್ಯರೋನ್ ಫಿಂಚ್​(779), ಜಾನಿ ಬೈರ್​ಸ್ಟೋವ್​(775), ಡೇವಿಡ್​ ವಾರ್ನರ್​(762), ರಾಸಿ ವ್ಯಾನ್ ಡರ್​ ಡಾಸೆನ್​(750), ಫಖರ್​ ಜಮಾನ್​ (741) ಜೋ ರೂಟ್​(740) ಟಾಪ್​ 10ರಲ್ಲಿದ್ದಾರೆ.

ಭಾರತದ ವಿರುದ್ಧ ಮೊದಲ ಪಂದ್ಯದಲ್ಲಿ 8 ರನ್​ಗಳಿಗೆ ವಿಕೆಟ್ ಒಪ್ಪಿಸದ ಶಾಯ್ ಹೋಪ್​ ಕೆಲವು ಅಂಕಗಳನ್ನು ಕಳೆದುಕೊಂಡು ಅಗ್ರ 10ರಿಂದ ಹೊರ ಬಿದ್ದಿದ್ದಾರೆ.

ಬೌಲರ್​ ವಿಭಾಗದ ಟಾಪ್​ 10ರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಿವೀಸ್​ ವೇಗಿ ಟ್ರೆಂಟ್​ ಬೌಲ್ಟ್​ (737), ಜೋಶ್ ಹೇಜಲ್​ವುಡ್​ (709) ಇಂಗ್ಲೆಂಡ್​ ವೋಕ್ಸ್​(700) ಮೊದಲ ಮೂರು ಸ್ಥಾನದಲ್ಲಿದ್ದಾರೆ. ಭಾರತದ ಜಸ್ಪ್ರೀತ್​ ಬುಮ್ರಾ(686) ಟಾಪ್ 10ರಲ್ಲಿರುವ ಏಕೈಕ ಭಾರತೀಯನಾಗಿದ್ದು, ಅವರು 7ನೇ ಸ್ಥಾನದಲ್ಲಿದ್ದಾರೆ. ಆಲ್​ರೌಂಡರ್ ​ರ‍್ಯಾಂಕಿಂಗ್​ನಲ್ಲಿ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್​ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ರವೀಂದ್ರ ಜಡೇಜಾ 8ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಐಪಿಎಲ್ 2020: ಊಹಾಪೋಹಗಳಿಗೆ ತೆರೆ, ಅಧಿಕೃತ ಹೆಸರು ಪ್ರಕಟಿಸಿದ ಅಹಮದಾಬಾದ್​​ ಫ್ರಾಂಚೈಸಿ

ABOUT THE AUTHOR

...view details