ಪೋರ್ಟ್ ಆಫ್ ಸ್ಪೇನ್ : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಎರಡ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕರಾಗಿ ಬ್ಯಾಟಿಂಗ್ಗೆ ಇಳಿದ ರೋಹಿತ್ ಶರ್ಮಾ ವೇಗವಾಗಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ವಿಶ್ವ ಟೆಸ್ಟ್ ಚಾಂಪಿಯನ್ನಲ್ಲಿ ಹಿಂದಿಕ್ಕಿದ್ದಾರೆ.
ಹೌದು ವಿಶ್ವ ಟೆಸ್ಟ್ ಚಾಂಪಿಯನ್ 2ನೇ ಆವೃತ್ತಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮೂರನೇ ಆವೃತ್ತಿಗೆ ವಿಶ್ವದ ಘಟಾನುಘಟಿ ತಂಡಗಳು ಸಿದ್ದಗೊಳ್ಳುತ್ತಿವೆ. ಇದರ ನಡುವೆ ರೋಹಿತ್ ಶರ್ಮಾ ಈವರಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ ಆರಂಭಿಕರಾಗಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಮೊದಲ ಸ್ಥಾನಕ್ಕೇರಿದ್ದಾರೆ.
2092 ರನ್ ಗಳಿಸಿರುವ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದರೇ, ಡೇವಿಡ್ ವಾರ್ನರ್ ಅವರು 2040 ರನ್‌ಗಳ ಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ಆರಂಭಿಕರಾದ ದಿಮುತ್ ಕರುಣಾರತ್ನೆ ಅವರು 2020 ರನ್ ಗಳಿಸಿದ್ದು, ಇಂಡೀಸ್ ನಾಯಕ ಕ್ರೇಗ್ ಬ್ರಾಥ್‌ವೈಟ್ 1769 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹಾಗೂ ಆಸ್ಟ್ರೇಲಿಯಾದ ಮತ್ತೊಬ್ಬ ಆರಂಭಿಕ ಉಸ್ಮಾನ್ ಖವಾಜಾ ಅವರು ಕೂಡ ಐದನೇ ಸ್ಥಾನದಲ್ಲಿ 1760 ರನ್ ಗಳಿಸಿದ್ದಾರೆ.