ನವದೆಹಲಿ :ಭಾರತ ಸೀಮಿತ ಓವರ್ಗಳ ತಂಡದ ನಾಯಕ ರೋಹಿತ್ ಶರ್ಮಾ ಹ್ಯಾಮ್ಸ್ಟ್ರಿಂಗ್(ಸ್ನಾಯು ಸೆಳೆತ) ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ನಡೆಯಲಿರುವ ಸೀಮಿತ ಓವರ್ಗಳ ಸರಣಿಗೆ ಕಮ್ಬ್ಯಾಕ್ ಮಾಡುವ ಅವಕಾಶ ಹೆಚ್ಚಿದೆ ಎಂದು ತಿಳಿದು ಬಂದಿದೆ.
ಇತ್ತೀಚಿಗೆ ಮುಗಿದ ದಕ್ಷಿಣ ಆಫ್ರಿಕಾ ಸರಣಿಗೆ ಘೋಷಿಸಿದ್ದ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಉಪನಾಯಕನಾಗಿ ನೇಮಕಗೊಂಡಿದ್ದರು. ಆದರೆ, ನೆಟ್ಸ್ನಲ್ಲಿ ಅಭ್ಯಾಸ ಮಾಡುವ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿ ಸರಣಿಗೆ ಕೆಲವೇ ದಿನಗಳಿರುವಾಗಿ ಪ್ರವಾಸದಿಂದ ಹೊರಬಿದ್ದಿದ್ದರು.
ಕಳೆದ ಬುಧವಾರ ಏಕದಿನ ತಂಡವನ್ನು ಘೋಷಿಸುವ ವೇಳೆ ಸಂಪೂರ್ಣ ಫಿಟ್ ಆಗದ ಕಾರಣ ಅವರು ಅನಿವಾರ್ಯವಾಗಿ ಏಕದಿನ ಸರಣಿಯಿಂದಲೂ ಹೊರ ಬರುವಂತಾಗಿತ್ತು.