ಕರ್ನಾಟಕ

karnataka

ETV Bharat / sports

ಟಿ20 ನಾಯಕನ ಪಟ್ಟಕ್ಕೆ ರೋಹಿತ್​ ಶರ್ಮಾ ಸೂಕ್ತ ಅಭ್ಯರ್ಥಿ: ಗವಾಸ್ಕರ್

ನವೆಂಬರ್ 17 ರಂದು ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡ ಮುನ್ನಡೆಸಲಿದ್ದಾರೆ ಎನ್ನುವುದು ಪಕ್ಕಾ ಆಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ

By

Published : Nov 9, 2021, 7:15 PM IST

ನವದೆಹಲಿ: ವಿರಾಟ್ ಕೊಹ್ಲಿ ನಂತರ ಭಾರತ ಟಿ20 ನಾಯಕತ್ವ ನಿರ್ವಹಿಸಲು ಆರಂಭಿಕ ಆಟಗಾರ ರೋಹಿತ್ ಶರ್ಮಾ ಅತ್ಯುತ್ತಮ ವ್ಯಕ್ತಿ ಎಂದು ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಹೊಸ ಟಿ20 ನಾಯಕನನ್ನು ನೇಮಿಸುವ ವಿಷಯಕ್ಕೆ ಬಂದಾಗ ಭಾರತವು ದೀರ್ಘಾವಧಿಯ ಕ್ರಿಕೆಟ್‌ ಬಗ್ಗೆ ಯೋಚಿಸಬೇಕಾಗಿಲ್ಲ. ಮುಂದಿನ ವಿಶ್ವಕಪ್ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು ಇದನ್ನೂ ಗಮನದಲ್ಲಿಟ್ಟಿಕೊಂಡು ರೋಹಿತ್​​ರನ್ನು ನೇಮಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದರು.

ಇನ್ನು ಈ ಬಾರಿ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್​​ ಕೋವಿಡ್​​ ಕಾರಣದಿಂದ ಯುಎಇಗೆ ವರ್ಗಾವಣೆ ಮಾಡಲಾಗಿತ್ತು. ಈ ಟೂರ್ನಿಯಲ್ಲಿ ಟೀಂ​ ಇಂಡಿಯಾ ಕಪ್​ ಗೆಲ್ಲುವ ಫೇವರೆಟ್​ ತಂಡಗಳ ಸಾಲಿನಲ್ಲಿ ಮುಂಚೂಣಿಯಲ್ಲಿತ್ತು. ಆದರೆ ಭಾರತ ತಂಡ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​​ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋಲು ಕಂಡಿತ್ತು.

ತದನಂತರದಲ್ಲಿ ಭಾರತ ಆಡಿದ ಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೂ ಸೆಮಿಫೈನಲ್​​ ತಲುಪಲಾಗದೆ ಟೂರ್ನಿಯಿಂದ ಹೊರನಡೆದಿದೆ. ಈ ಬೆನ್ನಲ್ಲೆ ಟೀಂ​ ಇಂಡಿಯಾಗೆ ಟಿ20 ಮಾದರಿಗೆ ನಾಯಕನ್ಯಾರು? ಎನ್ನುವ ಚರ್ಚೆ ಶುರುವಾಗಿದೆ. ಟಿ20 ವಿಶ್ವಕಪ್​ಗಿಂತಲೂ ಮೊದಲು ವಿರಾಟ್​​ ಕೊಹ್ಲಿ ಈ ಟೂರ್ನಿಯ ನಂತರ ನಾನು ಟಿ20 ಫಾರ್ಮೆಟ್​​ ಕ್ರಿಕೆಟ್​ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು.

ಅದರಂತೆ, ನಮೀಬಿಯಾ ವಿರುದ್ಧದ ಪಂದ್ಯ ಕ್ಯಾಪ್ಟನ್​​​ ಕೊಹ್ಲಿಗೆ ಕೊನೆಯ ಟಿ20 ನಾಯಕತ್ವದ ಪಂದ್ಯವಾಗಿತ್ತು. ಈ ಪಂದ್ಯದ ನಂತರ ಅಧಿಕೃತವಾಗಿ ಅವರು ಚುಟುಕು ಕ್ರಿಕೆಟ್‌ ನಾಯಕತ್ವ ಸ್ಥಾನದಿಂದ ಕೆಳಗಿಳಿದರು.

ಈ ಸ್ಥಾನಕ್ಕೆ ಯಾರು ಎನ್ನುವುದರ ಕುರಿತು ಚರ್ಚೆ ಆರಂಭವಾದ ಬೆನ್ನಲ್ಲೆ, ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿ, ರೋಹಿತ್ ಶರ್ಮಾ ಅತ್ಯುತ್ತಮ ಆಯ್ಕೆ ಎಂದು ಹೇಳಿದ್ದಾರೆ. ರೋಹಿತ್​ ಶರ್ಮಾ ಅವರಿಗೆ ಭಾರತ ತಂಡವನ್ನು ಹಲವು ಬಾರಿ ಮುನ್ನಡೆಸಿದ ಅನುಭವವಿದೆ. ಹಾಗೆಯೇ ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ ಎಂದರೆ 5 ಬಾರಿ ಮುಂಬೈ ಇಂಡಿಯನ್ಸ್‌ ತಂಡವನ್ನು ಚಾಂಪಿಯನ್​​ ಮಾಡಿರುವ ದಾಖಲೆಯೂ ಹಿಟ್‌ಮನ್‌​ ಹೆಸರಿಲ್ಲಿದೆ.

ಮುಂದಿನ ವಿಶ್ವಕಪ್ ಎರಡು ವರ್ಷ ಅಥವಾ ಮೂರು ವರ್ಷಗಳಷ್ಟು ದೂರವಿದ್ದರೆ ಯೋಚಿಸಬೇಕು. ಆದರೆ ಮುಂದಿನ ವಿಶ್ವಕಪ್ ಕೇವಲ 10-12 ತಿಂಗಳುಗಳಲ್ಲಿ ಆರಂಭವಾಗಲಿದ್ದು, ನೀವು ನಿಜವಾಗಿಯೂ ದೀರ್ಘಾವಧಿಯನ್ನು ನೋಡಬೇಕಾಗಿಲ್ಲ ಎಂದು ಗವಾಸ್ಕರ್ ತಿಳಿಸಿದರು.

ABOUT THE AUTHOR

...view details